ಪಾಕಿಸ್ತಾನಕ್ಕೆ ಫಿರಂಗಿ, ಮದ್ದು ಗುಂಡುಗಳ ಕೊರತೆ: ಯುದ್ಧ ಸಾಮರ್ಥ್ಯ ಕೇವಲ 4 ದಿನಗಳವರೆಗೆ ಸೀಮಿತ! Reports

ಸೇನೆಗೆ ಮದ್ದುಗುಂಡುಗಳನ್ನು ಪೂರೈಸುವ ಪಾಕಿಸ್ತಾನ್ ಆರ್ಡನೆನ್ಸ್ ಫ್ಯಾಕ್ಟರಿಗಳು (ಪಿಒಎಫ್) ಹೆಚ್ಚುತ್ತಿರುವ ಜಾಗತಿಕ ಬೇಡಿಕೆ ಮತ್ತು ಹಳತಾದ ಉತ್ಪಾದನಾ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ
Pak Military
ಪಾಕ್ ಸೇನೆ
Updated on

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯು ಫಿರಂಗಿ ಮದ್ದುಗುಂಡುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ.ಇದು ಅದರ ಯುದ್ಧ ಸಾಮರ್ಥ್ಯವನ್ನು ಕೇವಲ 4 ದಿನಗಳವರೆಗೆ ಸೀಮಿತಗೊಳಿಸಿದೆ.

ಈ ಕೊರತೆಗೆ ಪ್ರಮುಖ ಕಾರಣ ಪಾಕಿಸ್ತಾನವು ಇತ್ತೀಚೆಗೆ ಉಕ್ರೇನ್ ಜೊತೆ ಮಾಡಿಕೊಂಡ ಶಸ್ತ್ರಾಸ್ತ್ರ ಒಪ್ಪಂದವಾಗಿದ್ದು, ಇದು ತನ್ನ ಯುದ್ದೋಪಕರಣಗಳನ್ನು ಖಾಲಿ ಮಾಡಿದೆ. ಸೇನೆಗೆ ಮದ್ದುಗುಂಡುಗಳನ್ನು ಪೂರೈಸುವ ಪಾಕಿಸ್ತಾನ್ ಆರ್ಡನೆನ್ಸ್ ಫ್ಯಾಕ್ಟರಿಗಳು (ಪಿಒಎಫ್) ಹೆಚ್ಚುತ್ತಿರುವ ಜಾಗತಿಕ ಬೇಡಿಕೆ ಮತ್ತು ಹಳತಾದ ಉತ್ಪಾದನಾ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ ಎಂದು ಎಎನ್‌ಐ ವರದಿ ಮಾಡಿದೆ.

ಪರಿಣಾಮವಾಗಿ ಯುದ್ಧಸಾಮಗ್ರಿಗಳನ್ನು ಮರುಪೂರಣಗೊಳಿಸಲಾಗಿಲ್ಲ. ಪಾಕಿಸ್ತಾನದ ಯುದ್ಧ ಸಾಮಗ್ರಿ ನಿಕ್ಷೇಪಗಳು ಕೇವಲ 96 ಗಂಟೆಗಳ ಕಾಲ ಮಾತ್ರ ತೀವ್ರ ಸಂಘರ್ಷವನ್ನು ತಡೆದುಕೊಳ್ಳಬಲ್ಲವು. ಇದರಿಂದಾಗಿ ಪಾಕಿಸ್ತಾನಿ ಸೇನೆಯು ದುರ್ಬಲಗೊಳ್ಳುತ್ತದೆ.

ಸಂಖ್ಯಾತ್ಮಕವಾಗಿ ಬಲಾಢ್ಯವಾಗಿರುವ ಭಾರತೀಯ ಸೇನೆಯ ವಿರುದ್ಧ ಕ್ಷಿಪ್ರ ಸಜ್ಜುಗೊಳಿಸಲು ಪಾಕ್ ಸೇನೆಯು ಫಿರಂಗಿ ಮತ್ತು ಶಸ್ತ್ರಸಜ್ಜಿತ ಘಟಕಗಳನ್ನು ಅವಲಂಬಿಸಿದೆ. ಆದಾಗ್ಯೂ ಉಕ್ರೇನ್‌ಗೆ 155 ಎಂಎಂ ಮದ್ದುಗುಂಡುಗಳನ್ನು ಮಾರಾಟ ಮಾಡಿದ ನಂತರ ಪಿಒಎಫ್ ದೇಶೀಯ ಸಂಗ್ರಹಣೆಯನ್ನು ಮರುಪೂರಣಗೊಳಿಸಲು ಹೆಣಗಾಡುತ್ತಿದೆ ಎಂದು ವರದಿಗಳು ಹೇಳುತ್ತವೆ.

ದೇಶದ ಭದ್ರತಾ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಬೇಡಿಕೆಗಳನ್ನು ಪೂರೈಸುವ ಪಾಕಿಸ್ತಾನದ ನಿರ್ಧಾರವು ಕಾರ್ಯತಂತ್ರದ ಅಸ್ತಿತ್ವದ ವಿರುದ್ಧ ಆರ್ಥಿಕ ಹತಾಶೆಯನ್ನು ಸಮತೋಲನಗೊಳಿಸುವ ಪ್ರಯತ್ನವಾಗಿದೆ ಎಂದು IANS ವರದಿ ಮಾಡಿದೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು, ಹೆಚ್ಚಿನ ಹಣದುಬ್ಬರ, ಹೆಚ್ಚುತ್ತಿರುವ ಸಾಲ ಮತ್ತು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಮೀಸಲು, ಮಿಲಿಟರಿ ಕಾರ್ಯಾಚರಣೆಯ ಸಾಮರ್ಥ್ಯಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ.

Pak Military
ಪಾಕಿಸ್ತಾನಕ್ಕೆ ಭಾರತ ಮತ್ತೊಂದು ಶಾಕ್: ಸಿಂಧೂ ನದಿ ಬಳಿಕ ಇದೀಗ ಮತ್ತೆರಡು ಅಣೆಕಟ್ಟುಗಳ ನೀರು ಕೂಡ ಬಂದ್!

ಇಂಧನ ಕೊರತೆಯಿಂದಾಗಿ ಪಡಿತರವನ್ನು ಕಡಿತಗೊಳಿಸಲು, ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಮತ್ತು ನಿಗದಿತ ಯುದ್ಧಗಳನ್ನು ನಿಲ್ಲಿಸಲು ಸೈನ್ಯವನ್ನು ಬಲವಂತಪಡಿಸಲಾಗಿದೆ. ಪಾಕಿಸ್ತಾನ್ ಆರ್ಡನೆನ್ಸ್ ಫ್ಯಾಕ್ಟರಿಗಳು (ಪಿಒಎಫ್)2022 ರಲ್ಲಿ ಉಕ್ರೇನ್‌ಗೆ ರಹಸ್ಯ ಪೂರೈಕೆದಾರರಾದರು ಎಂದು IANS ವರದಿ ಮಾಡಿದೆ. ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಈ ಅವಕಾಶವನ್ನು ಬಳಸಿಕೊಂಡಿತ್ತು.

2022-23 ಆರ್ಥಿಕ ವರ್ಷದೊಳಗೆ ಪಾಕಿಸ್ತಾನದ ಶಸ್ತ್ರಾಸ್ತ್ರ ರಫ್ತುಗಳು 2021-22 ರಲ್ಲಿದ್ದ ಅತ್ಯಲ್ಪ 13 ಮಿಲಿಯನ್ ಡಾಲರ್‌ಗಳಿಂದ 415 ಮಿಲಿಯನ್ ಡಾಲರ್‌ಗಳಿಗೆ ಏರಿತು. ಸೇನೆಗೆ ಮೀಸಲಿಟ್ಟ ಹಣದಲ್ಲಿ ಸುಮಾರು ಶೇ. 80ರಷ್ಟು ರಾವಲ್ಪಿಂಡಿಯಲ್ಲಿರುವ ಸೇನೆಯ ಜನರಲ್ ಹೆಡ್‌ಕ್ವಾರ್ಟರ್ಸ್‌ಗೆ ರವಾನಿಸಲಾಗಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ. ಪಾಕಿಸ್ತಾನದ ಮಿಲಿಟರಿಯ ಮುಖ್ಯಸ್ಥರು ಹಣದ ಕೋಟೆಯ ಪರ್ವತದ ಮೇಲೆ ಕುಳಿತಿದ್ದರೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಭಾರತದ ವಿರುದ್ಧ ಯುದ್ಧದ ಸಾಧ್ಯತೆಗಳ ನಡುವೆ ಜನರು ಮುಂದೇನೂ ಎಂಬ ಚಿಂತೆಯಲ್ಲಿ ತೊಡಗಿದ್ದಾರೆ.

ಮದ್ದುಗುಂಡಗಳ ಕೊರತೆ ಬಗ್ಗೆ ತೀವ್ರ ಕಳವಳ: ಪಾಕಿಸ್ತಾನಿ ಮಿಲಿಟರಿ ಕೂಡಾ ನಿರ್ಣಾಯಕ ಮದ್ದುಗುಂಡುಗಳ ಕೊರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. 02 ಮೇ 2025 ರಂದು ವಿಶೇಷ ಕಾರ್ಪ್ಸ್ ಕಮಾಂಡರ್‌ಗಳ ಸಮ್ಮೇಳನದಲ್ಲಿ ಇದನ್ನು ಚರ್ಚಿಸಲಾಗಿದೆ. ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಈ ಮಿತಿಗಳನ್ನು ಈ ಹಿಂದೆ ಒಪ್ಪಿಕೊಂಡಿದ್ದರು, ಭಾರತದೊಂದಿಗೆ ಸುದೀರ್ಘ ಸಂಘರ್ಷದಲ್ಲಿ ತೊಡಗಿಸಿಕೊಳ್ಳಲು ಪಾಕಿಸ್ತಾನಕ್ಕೆ ಯುದ್ಧಸಾಮಗ್ರಿ ಮತ್ತು ಆರ್ಥಿಕ ಶಕ್ತಿಯ ಕೊರತೆಯಿದೆ ಎಂದು ಹೇಳಿದ್ದಾರೆ.

ಗಡಿ ಬಳಿ ಯುದ್ಧ ಸಾಮಾಗ್ರಿ ಡಿಪೋ ನಿರ್ಮಾಣ: ಸಂಭಾವ್ಯ ಸಂಘರ್ಷದ ನಿರೀಕ್ಷೆಯಲ್ಲಿ ಪಾಕಿಸ್ತಾನವು ಭಾರತ-ಪಾಕಿಸ್ತಾನ ಗಡಿಯ ಬಳಿ ಯುದ್ಧಸಾಮಗ್ರಿ ಡಿಪೋಗಳನ್ನು ನಿರ್ಮಿಸಿದೆ ಎಂದು ಗುಪ್ತಚರ ವರದಿಗಳು ಸೂಚಿಸಿವೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.

"ಪಾಕಿಸ್ತಾನವು ತನ್ನ ಯುದ್ಧಸಾಮಗ್ರಿಗಳನ್ನು ದೂರದ ಯುದ್ಧಗಳಿಗೆ ಸಾಗಿಸಿ ಈಗ ಸಂಕಷ್ಟದಲ್ಲಿ ಸಿಲುಕಿದೆ. ಅದರ ಶಸ್ತ್ರಾಗಾರಗಳು ಖಾಲಿಯಾಗಿವೆ ಮತ್ತು ಅದರ ಸೇನಾ ವ್ಯವಸ್ಥೆ ಅಂಚಿನಲ್ಲಿ ತೇಲುತ್ತಿದೆ" ಎಂದು ಹಿರಿಯ ರಕ್ಷಣಾ ವಿಶ್ಲೇಷಕರೊಬ್ಬರು ANI ಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com