Pak army
ಪಾಕ್ ಸೈನಿಕರು

25 ಭಾರತೀಯ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ: ಪಾಕ್ ಸೇನೆ

ಲಾಹೋರ್, ಗುಜ್ರಾನ್‌ವಾಲಾ, ಚಕ್ವಾಲ್, ಬಹವಾಲ್‌ಪುರ್, ಮಿಯಾನೋ, ಕರಾಚಿ, ರಾವಲ್ಕ್‌ಪಿಂಡಿ, ಚೋರ್, ಅತ್ವಾಲಾಕ್‌ಪಿಂಡಿ, ಚೋರ್, ಅತ್ವಾಲಾಕ್‌ನಲ್ಲಿ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.
Published on

ಲಾಹೋರ್: ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಉಲ್ಬಣಗೊಂಡಿರುವಂತೆಯೇ ಭಾರತದ ಡ್ರೋನ್ ದಾಳಿಯಲ್ಲಿ ತನ್ನ ನಾಲ್ವರು ಸೈನಿಕರು ಗಾಯಗೊಂಡಿರುವುದಾಗಿ ಪಾಕಿಸ್ತಾನ ಸೇನೆ ಗುರುವಾರ ಹೇಳಿದೆ.

25 ಭಾರತೀಯ ಡ್ರೋನ್ ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ರಾತ್ರಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಹಲವು ಕಡೆ ದಾಳಿ ನಡೆಸುವ ಪಾಕ್ ಸೇನೆಯ ಪ್ರಯತ್ನಗಳನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿದ್ದು, ಲಾಹೋರ್‌ನಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಲಾಗಿದೆ ಎಂದು ನವದೆಹಲಿಯಲ್ಲಿ ಭಾರತೀಯ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

Pak army
Operation Sindoor: ಕರಾಚಿ, ಲಾಹೋರ್ ನಲ್ಲಿ ಡ್ರೋನ್ ದಾಳಿ; 26 ಮಂದಿ ಸಾವು, ಪಾಕಿಗಳು ತತ್ತರ; Video

ಅತ್ತ ಇಸ್ಲಾಮಾಬಾದ್ ನಲ್ಲಿ ಮಾತನಾಡಿದ ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಲಾಹೋರ್ ಬಳಿ ಒಂದು ಡ್ರೋನ್ ಪತನಗೊಂಡಿದ್ದು, ದಾಳಿಯ ಪರಿಣಾಮವಾಗಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ಲಾಹೋರ್, ಗುಜ್ರಾನ್‌ವಾಲಾ, ಚಕ್ವಾಲ್, ಬಹವಾಲ್‌ಪುರ್, ಮಿಯಾನೋ, ಕರಾಚಿ, ರಾವಲ್ಕ್‌ಪಿಂಡಿ, ಚೋರ್, ಅತ್ವಾಲಾಕ್‌ಪಿಂಡಿ, ಚೋರ್, ಅತ್ವಾಲಾಕ್‌ನಲ್ಲಿ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ 25 ಇಸ್ರೇಲಿ ನಿರ್ಮಿತ ಹೀರೋಪ್ ಡ್ರೋನ್‌ಗಳನ್ನು ಪಾಕಿಸ್ತಾನಿ ಸೇನೆಯ ಸಾಫ್ಟ್ ಕಿಲ್ (ತಾಂತ್ರಿಕ) ಮತ್ತು ಹಾರ್ಡ್ ಕಿಲ್ ಆಯುಧಗಳಿಂದ ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

X

Advertisement

X
Kannada Prabha
www.kannadaprabha.com