ಅದು ಪೈಲಟ್ ರಕ್ಷಣಾ ಕಾರ್ಯಾಚರಣೆ ಅಲ್ಲ, ಯುರೇನಿಯಂ ಕಳ್ಳತನದ ಯತ್ನ, ಅದೂ ವಿಫಲವಾಗಿದೆ: ಅಮೆರಿಕ ವಿರುದ್ಧ ಇರಾನ್ ಆರೋಪ

ವಿದೇಶಾಂಗ ಸಚಿವಾಲಯ, ಇತ್ತೀಚಿನ ಇಸ್ಫಹಾನ್ ಕಾರ್ಯಾಚರಣೆ ಯುರೇನಿಯಂ ಕಳವುಗೊಳಿಸುವ ಉದ್ದೇಶದ ಮೋಸ ಕಾರ್ಯವಾಗಿರುವ ಸಾಧ್ಯತೆಯನ್ನು “ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ಹೇಳಿದ್ದು, ಆ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದೆ.
Donald Trump
ಡೊನಾಲ್ಡ್ ಟ್ರಂಪ್online desk
Updated on

ಅಮೆರಿಕ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಮೂಲಕ ನೀಡಿದ ಇತ್ತೀಚಿನ ಪ್ರಸ್ತಾವನೆಗಳಿಗೆ ತನ್ನ ರಾಜತಾಂತ್ರಿಕ ಪ್ರತಿಕ್ರಿಯೆಯ ಕರಡನ್ನು ತಯಾರಿಸಿದ್ದೇವೆ ಎಂದು ಇರಾನ್ ತಿಳಿಸಿದೆ ಮತ್ತು ವಾಷಿಂಗ್ಟನ್ ತನ್ನ ಅಣು ಸೌಕರ್ಯಗಳನ್ನು ಗುರಿಯಾಗಿಸಿದೆ ಎಂದು ಆರೋಪಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ ಅವರ ಹೇಳಿಕೆಯಲ್ಲಿ, ಟೆಹ್ರಾನ್ ತನ್ನ “ಹಿತಾಸಕ್ತಿಗಳ”ನ್ನು ಆಧಾರವಾಗಿಟ್ಟುಕೊಂಡು ಬೇಡಿಕೆಗಳ ಅಂತಿಮ ಪಟ್ಟಿ ಸಿದ್ಧಪಡಿಸಿದೆ ಮತ್ತು ಅದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.

“ನಮ್ಮ ಸ್ವಂತ ಹಿತಾಸಕ್ತಿಗಳು ಮತ್ತು ಪರಿಗಣನೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದೇವೆ,” ಎಂದು ಬಘಾಯಿ ಹೇಳಿದ್ದಾರೆ. ಅಗತ್ಯವಿದ್ದಾಗ ಇರಾನ್ ತನ್ನ ನಿಲುವನ್ನು ಅಧಿಕೃತವಾಗಿ ತಿಳಿಸುವುದಾಗಿ ಸೇರಿಸಿದರು.

ಈ ಹೇಳಿಕೆಗಳು, ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸಲು ಉದ್ದೇಶಿಸಿರುವ, ಅಮೆರಿಕ ಬೆಂಬಲಿತ “15 ಅಂಶಗಳ ಯೋಜನೆ” ಕುರಿತ ವರದಿಗಳ ನಡುವೆ ಬಂದಿವೆ. ಬಘಾಯಿ, ಆ ಯೋಜನೆಯನ್ನು “ಅತಿಯಾಗಿ ಮಹತ್ವಾಕಾಂಕ್ಷಿ, ಅಪರೂಪದ ಮತ್ತು ತಾರ್ಕಿಕವಲ್ಲದ್ದು” ಎಂದು ತಳ್ಳಿ ಹಾಕಿ, ಪ್ರಸ್ತುತ ರೂಪದಲ್ಲಿ ಟೆಹ್ರಾನ್ ಅದನ್ನು ಅಂಗೀಕರಿಸುವ ಸಾಧ್ಯತೆ ಕಡಿಮೆ ಎಂಬ ಸಂದೇಶ ನೀಡಿದರು.

ಮಧ್ಯವರ್ತಿಗಳೊಂದಿಗೆ ಇರಾನ್ ನಡೆಸುತ್ತಿರುವ ಸಂವಾದವನ್ನು ದುರ್ಬಲತೆಯ ಸೂಚಕವೆಂದು ವ್ಯಾಖ್ಯಾನಿಸುವ ಅಭಿಪ್ರಾಯಗಳನ್ನೂ ಅವರು ತಿರಸ್ಕರಿಸಿದರು. “ನಮ್ಮ ಅಭಿಪ್ರಾಯಗಳನ್ನು ತ್ವರಿತವಾಗಿ ಮತ್ತು ಸ್ಪಷ್ಟವಾಗಿ ಮಂಡಿಸುವುದನ್ನು ಶರಣಾಗತಿಯ ಲಕ್ಷಣವೆಂದು ಪರಿಗಣಿಸಬಾರದು,” ಎಂದು ಅವರು ಹೇಳಿದರು. ಇರಾನ್, ಅಮೆರಿಕ ತನ್ನ ಸೈನಿಕ ಕ್ರಮಗಳ ಹೆಸರಿನಲ್ಲಿ ತನ್ನ ಅಣು ಕಾರ್ಯಕ್ರಮವನ್ನು ಗುರಿಯಾಗಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಯುರೇನಿಯಂ ಕಳುವು ಯತ್ನ

ವಿದೇಶಾಂಗ ಸಚಿವಾಲಯ, ಇತ್ತೀಚಿನ ಇಸ್ಫಹಾನ್ ಕಾರ್ಯಾಚರಣೆ ಯುರೇನಿಯಂ ಕಳವುಗೊಳಿಸುವ ಉದ್ದೇಶದ ಮೋಸ ಕಾರ್ಯವಾಗಿರುವ ಸಾಧ್ಯತೆಯನ್ನು “ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ಹೇಳಿದ್ದು, ಆ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದೆ.

ಈ ಕಾರ್ಯಾಚರಣೆಯನ್ನು “ವಿಪತ್ತು” ಮತ್ತು “ಅಪಮಾನ” ಎಂದು ವರ್ಣಿಸಿದ ಇರಾನ್ ಅಧಿಕಾರಿಗಳು, ಅಮೆರಿಕ ಈ ಘಟನೆಯಿಂದ “ಪಾಠ ಕಲಿಯಬೇಕು” ಎಂದು ಎಚ್ಚರಿಸಿದರು. ಇರಾನ್ ಸೇನೆ ಈ ಕಾರ್ಯಾಚರಣೆಯನ್ನು “ಮೋಸ ಮತ್ತು ಪಲಾಯನ ಮಿಷನ್” ಎಂದು ಹೇಳಿರುವ ಇರಾನ್ ಕಾರ್ಯಾಚರಣೆ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಟೀಕಿಸಿದೆ.

ಸೋಲುಗಳನ್ನು ಅನುಭವಿಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋಸದ ಹಿಂದೆ ಅಡಗಿಕೊಳ್ಳುತ್ತಿದ್ದಾರೆ ಎಂದು ಇರಾನ್ ಆರೋಪಿಸಿದೆ. ಬಘಾಯಿ ಅವರು ಅಮೆರಿಕಾದ ಕಾರ್ಯಾಚರಣೆಯ ಬಗ್ಗೆ “ಅನೇಕ ಪ್ರಶ್ನೆಗಳು ಮತ್ತು ಅನಿಶ್ಚಿತತೆಗಳು” ಇವೆ ಎಂದು ಹೇಳಿದರು.

Donald Trump
ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ; ಡೊನಾಲ್ಡ್ ಟ್ರಂಪ್!

“ಅಮೆರಿಕನ್ ಪೈಲಟ್ ಇದ್ದಾರೆ ಎಂದು ಹೇಳಲಾಗಿರುವ ಕೊಹ್ಗಿಲುಯೆ ಮತ್ತು ಬೊಯರ್-ಅಹ್ಮದ್ ಪ್ರಾಂತ್ಯದ ಪ್ರದೇಶ, ಅವರು ಮಧ್ಯ ಇರಾನಿನಲ್ಲಿ ತಮ್ಮ ಪಡೆಗಳನ್ನು ಇಳಿಸಲು ಯತ್ನಿಸಿದ ಅಥವಾ ಇಳಿಸಲು ಬಯಸಿದ ಸ್ಥಳದಿಂದ ಬಹಳ ದೂರದಲ್ಲಿದೆ,” ಎಂದು ಬಘಾಯಿ ಹೇಳಿದರು.

“ಇದು ಸಂವರ್ಧಿತ ಯುರೇನಿಯಂ ಕಳವು ಮಾಡಲು ರೂಪಿಸಲಾದ ಮೋಸ ಕಾರ್ಯಾಚರಣೆ ಆಗಿರಬಹುದೆಂಬ ಸಾಧ್ಯತೆಯನ್ನು ಯಾವತ್ತೂ ನಿರ್ಲಕ್ಷಿಸಬಾರದು” ಎಂದು ಅವರು ಹೇಳಿದರು. ಈ ಕಾರ್ಯಾಚರಣೆ ಅಮೆರಿಕಕ್ಕೆ ವಿಪತ್ತು" ಎಂದು ಕೂಡ ಅವರು ಹೇಳಿದ್ದಾರೆ.

ಯುದ್ಧ ವಿರಾಮ ತಿರಸ್ಕಾರ, ಕಠಿಣ ನಿಲುವಿನ ಸೂಚನೆ ತಾತ್ಕಾಲಿಕ ಯುದ್ಧ ವಿರಾಮದ ಆಲೋಚನೆಯನ್ನು ತೆಹ್ರಾನ್ ತಳ್ಳಿಹಾಕಿ, ಅದು ಕೇವಲ ಸಂಘರ್ಷ ಪುನರಾರಂಭಕ್ಕೆ ಮುಂಚಿನ ವಿರಾಮ ಮಾತ್ರವಾಗುತ್ತದೆ ಎಂದು ಹೇಳಿದೆ.

“ತಾತ್ಕಾಲಿಕ ಯುದ್ಧ ವಿರಾಮ ಎಂದರೆ ಅಪರಾಧವನ್ನು ಮರುಪ್ರಾರಂಭಿಸಲು ಸಿದ್ಧತೆ ನಡೆಸುವುದೇ,” ಎಂದು ವಿದೇಶಾಂಗ ಸಚಿವಾಲಯ ಪ್ರಶ್ನಿಸಿದ್ದು, ಇರಾನ್‌ಗೆ ಸಂಪೂರ್ಣ ಶತ್ರುತ್ವದ ಅಂತ್ಯ ಮತ್ತು ಸಂಘರ್ಷ ಮರುಕಳಿಸದಂತೆ ಭರವಸೆ ಬೇಕು ಎಂದು ಸ್ಪಷ್ಟಪಡಿಸಿದೆ.

ಇತ್ತೀಚಿನ ಅಮೆರಿಕದ ಕ್ರಮಗಳು, ವಾಷಿಂಗ್ಟನ್ ರಾಜತಾಂತ್ರಿಕತೆಯನ್ನು ಪಕ್ಕಕ್ಕಿಟ್ಟುಬಿಟ್ಟಿದೆ ಎಂದು ಮತ್ತಷ್ಟು ಆರೋಪಿಸಿದ ಇರಾನ್, ತನ್ನ ಕಾರ್ಯಸೂಚಿಯಿಂದ ರಾಜತಾಂತ್ರಿಕತೆಯನ್ನು ‘ತೆಗೆದುಹಾಕಿದೆ’ ಎಂದು ಟೀಕಾ ಪ್ರಹಾರ ನಡೆಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com