'ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆ ಮಾಡುವ ಉದ್ದೇಶ ನನಗಿಲ್ಲ': ಪೋಪ್ ಲಿಯೋ XIV

ಪೋಪ್ ಲಿಯೋ ಅವರನ್ನು ಟ್ರಂಪ್ ಸಾರ್ವಜನಿಕವಾಗಿ ಟೀಕಿಸಿದರು. ಇರಾನ್ ಯುದ್ಧದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಪೋಪ್ ಮಾಡಿದ ಮನವಿಗಳನ್ನು ವಿರೋಧಿಸಿದರು.
Pope Leo XIV speaks to journalists aboard his flight bound for Algiers’ Houari Boumédiène International Airport on Monday
ಪೋಪ್ ಲಿಯೋ XIVPhoto| AP
Updated on

ವಾಷಿಂಗ್ಟನ್: ಇರಾನ್‌ನ ನಾಗರಿಕತೆಯನ್ನು ನಾಶ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವುದು ಸ್ವೀಕಾರಾರ್ಹವಲ್ಲ ಎಂದು ಇತ್ತೀಚೆಗೆ ಅಮೆರಿಕ-ಇರಾನ್ ಯುದ್ಧದ ಕುರಿತು ಮಾತನಾಡಿದ್ದ ಪೋಪ್ ಲಿಯೋ XIV ಅವರನ್ನು ಅಮೆರಿಕ ಅಧ್ಯಕ್ಷರು ಟೀಕಿಸಿದ್ದು, ಟ್ರಂಪ್ ಅವರೊಂದಿಗೆ ಚರ್ಚಿಸುವ ಉದ್ದೇಶ ನನಗಿಲ್ಲ ಎಂದು ಸೋಮವಾರ ಹೇಳಿದ್ದಾರೆ.

'ನಾನು ರಾಜಕಾರಣಿಯಲ್ಲ'. ಟ್ರಂಪ್ ಜೊತೆ ಚರ್ಚೆ ಮಾಡುವ ಉದ್ದೇಶ ನನಗಿಲ್ಲ. ನಾನು ನೀಡುವ ಸಂದೇಶ ಒಂದೇ: ಅದು ಶಾಂತಿಯನ್ನು ಉತ್ತೇಜಿಸುವುದು ಎಂದು ಮೊದಲ ಆಫ್ರಿಕಾ ಭೇಟಿಗಾಗಿ ಅಲ್ಜೀರಿಯಾಕ್ಕೆ ತೆರಳುತ್ತಿದ್ದಾಗ ಪೋಪ್ ವಿಮಾನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

11 ದಿನಗಳ ಆಫ್ರಿಕಾ ಪ್ರವಾಸದಲ್ಲಿರುವ ಅಮೆರಿಕದಲ್ಲಿ ಜನಿಸಿದ ಪೋಪ್ ಸೋಮವಾರ ಅಲ್ಜೀರಿಯಾಕ್ಕೆ ಬಂದಿಳಿದರು. ಮುಸ್ಲಿಂ ಬಹುಸಂಖ್ಯಾತ ದೇಶಕ್ಕೆ ಪೋಪ್ ಒಬ್ಬರು ಮಾಡಿದ ಮೊದಲ ಪ್ರವಾಸ ಇದು.

ಪೋಪ್ ಲಿಯೋ ಅವರನ್ನು ಟ್ರಂಪ್ ಸಾರ್ವಜನಿಕವಾಗಿ ಟೀಕಿಸಿದರು. ಇರಾನ್ ಯುದ್ಧದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಪೋಪ್ ಮಾಡಿದ ಮನವಿಗಳನ್ನು ವಿರೋಧಿಸಿದರು.

Pope Leo XIV speaks to journalists aboard his flight bound for Algiers’ Houari Boumédiène International Airport on Monday
ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ'ನಾನು ಪೋಪ್ ಲಿಯೋ ಅವರ ಅಭಿಮಾನಿಯಲ್ಲ. ಪರಮಾಣು ಶಸ್ತ್ರಾಸ್ತ್ರವನ್ನು ಬಯಸುವ ದೇಶದ (ಇರಾನ್) ಪರ ಮಾತನಾಡುವ ಪೋಪ್ ಅವರಿಗೆ ವಿದೇಶಾಂಗ ನೀತಿಯ ಕುರಿತು ಏನೂ ಗೊತ್ತಿಲ್ಲ. ಅವರು ಪೋಪ್ ಆಗಿ ತನ್ನ ಕೆಲಸವನ್ನು ಮಾಡಿದರೆ ಸಾಕು' ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚೆಗೆ ಇರಾನ್ ಮೇಲಿನ ಯುದ್ಧದ ಕುರಿತು ಪ್ರತಿಕ್ರಿಯಿಸಿದ್ದ ಪೋಪ್ ಲಿಯೋ, 'ಇರಾನ್‌ನ ನಾಗರಿಕತೆಯನ್ನು ನಾಶಪಡಿಸುತ್ತೇನೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದು ಸ್ವೀಕಾರಾರ್ಹವಲ್ಲ, ಅವರ ಆಡಳಿತದಲ್ಲಿ ವಲಸೆ ನೀತಿಗಳಿಂದ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರವನ್ನು ಪ್ರದರ್ಶಿಸಿದ್ದು ಸಾಕು, ಈ ಯುದ್ಧ ಸಾಕು' ಎಂದು ಟೀಕಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com