ಗಂಡನ ಜತೆ ಜಗಳ: ಕೋಪದಲ್ಲಿ ಬಾಲ್ಕನಿಯಿಂದ 1.5 ಕೋಟಿ ರೂ ಕ್ಯಾಶ್ ಎಸೆದ ಮಹಿಳೆ; Video ನೋಡಿ

ಗಂಡ ಮತ್ತು ಹೆಂಡತಿಯ ನಡುವೆ ತೀವ್ರ ಜಗಳವಾಗಿದೆ. ಜಗಳದ ಕೋಪದಲ್ಲಿ ಹೆಂಡತಿ ತನ್ನ ಕೈಯಲ್ಲಿದ್ದ ನೋಟುಗಳ ಕಂತೆಗಳನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾಳೆ. ಇದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Chinese woman tosses out ₹1.5 crore cash from balcony after argument with husband
ಕ್ಯಾಶ್ ಎಸೆದ ಮಹಿಳೆ
Updated on

ಬೀಜಿಂಗ್‌: ಮಹಿಳೆಯೊಬ್ಬರು ತನ್ನ ಗಂಡನ ಜೊತೆ ಜಗಳ ಮಾಡಿದ ನಂತರ ಕೋಪದಿಂದ ಮನೆಯಲ್ಲಿದ್ದ ಹಣವನ್ನೆಲ್ಲಾ ರಸ್ತೆಗೆ ಎಸದಿರುವ ಘಟನೆ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಶಾಂಟೌ ನಗರದಲ್ಲಿ ನಡೆದಿದೆ.

ಮಹಿಳೆ, ಅತಿ ದೊಡ್ಡ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ 1,000 ಮುಖಬೆಲೆಯ 162 ಸಾವಿರ ಹಾಂಗ್ ಕಾಂಗ್ ಡಾಲರ್(ಸುಮಾರು 1.5 ಕೋಟಿ ರೂ.) ನೋಟುಗಳನ್ನು ಕೆಳಗೆ ಎಸಿದ್ದಾರೆ. ಈ ಹಣವನ್ನು ಸಂಗ್ರಹಿಸಿದ ಅಲ್ಲಿನ ನಿವಾಸಿಗಳು ಅದು ನಿಜವಾದ ಬ್ಯಾಂಕ್ ನೋಟುಗಳು ಎಂದು ದೃಢಪಡಿಸಿದ್ದಾರೆ.

ವರದಿಗಳ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವೆ ತೀವ್ರ ಜಗಳ ನಡೆದಿದೆ. ಜಗಳದ ಕೋಪದಲ್ಲಿ ಹೆಂಡತಿ ತನ್ನ ಕೈಯಲ್ಲಿದ್ದ ನೋಟುಗಳ ಕಂತೆಗಳನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾಳೆ. ಇದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Chinese woman tosses out ₹1.5 crore cash from balcony after argument with husband
ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ನಮ್ಮ ಬೆಕ್ಕು ಪ್ರೆಗ್ನೆಂಟ್ ಆಗಲು ನಿಮ್ಮ ಗಂಡು ಬೆಕ್ಕೇ ಕಾರಣ; ಮಾರಾಮಾರಿ! Video ನೋಡಿ

ಮೇಲಿನಿಂದ ಹಣ ಬೀಳುತ್ತಿರುವುದನ್ನು ಕಂಡು ರಸ್ತೆಯಲ್ಲಿದ್ದ ಜನ ಆ ಹಣವನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಆ ಪ್ರದೇಶದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಹಣವನ್ನು ಸಂಗ್ರಹಿಸಿದವರು ಅದನ್ನು ವಾಪಸ್ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com