ಪ್ರಿಯಕರನ ಕೊಲೆ ಆರೋಪ: ದುಬೈನಲ್ಲಿ ಬ್ರಿಟಿಷ್ Tiktok ಪ್ರಭಾವಿ ಬ್ರೂಕ್ ಜಾರ್ಜ್‌ಗೆ ಮರಣದಂಡನೆ?

ದುಬೈನಲ್ಲಿರುವ ಬ್ರಿಟಿಷ್ ಟಿಕ್‌ಟಾಕ್ ಪ್ರಭಾವಿಯೊಬ್ಬರು ತನ್ನ ಗೆಳೆಯನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Brooke George
ಬ್ರೂಕ್ ಜಾರ್ಜ್
Updated on

ದುಬೈನಲ್ಲಿರುವ ಬ್ರಿಟಿಷ್ ಟಿಕ್‌ಟಾಕ್ ಪ್ರಭಾವಿಯೊಬ್ಬರು ತನ್ನ ಗೆಳೆಯನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಂಟ್‌ನ ಗ್ರೇವ್‌ಸೆಂಡ್‌ನ 23 ವರ್ಷದ ಟಿಕ್‌ಟಾಕ್ ಪ್ರಭಾವಿ ಬ್ರೂಕ್ ಜಾರ್ಜ್ ಅವರನ್ನು ಜೂನ್ 22ರ ಬೆಳಿಗ್ಗೆ ಬಂಧಿಸಲಾಯಿತು. ಆನ್‌ಲೈನ್ ಮೂಲಕ ಪರಿಚಯವಾಗಿದ್ದ ಯುವಕನೊಂದಿಗೆ ಬ್ರೂಕ್ ಪ್ರೀತಿಯಲ್ಲಿದ್ದರು. ಇಬ್ಬರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು.

ಬ್ರೂಕ್ ಪರವಾಗಿ ಕಾನೂನು ನೆರವು ನೀಡುತ್ತಿರುವ ‘ಡಿಟೈನ್ಡ್ ಇನ್ ದುಬೈ’ ಸಂಸ್ಥೆಯ ಪ್ರಕಾರ, ಅಪಾರ್ಟ್‌ಮೆಂಟ್‌ನಲ್ಲಿ ಗೆಳೆಯ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದನು. ಈ ವೇಳೆ ಆಕೆ ತನ್ನ ಜೀವ ಉಳಿಸಿಕೊಳ್ಳಲು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಚುಚ್ಚಿದ್ದಾಳೆ ಎಂದು ತಿಳಿಸಿದ್ದಾರೆ. ಆತ ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದನು. ಆಕೆಯ ಪಾಸ್‌ಪೋರ್ಟ್ ಕಿತ್ತುಕೊಂಡು ದೇಶ ಬಿಟ್ಟು ಹೋಗದಂತೆ ತಡೆದಿದ್ದನು. ಅಂದು ಜಗಳದ ಸಮಯದಲ್ಲಿ ಆಕೆ ತನ್ನ ಜೀವ ಉಳಿಸಿಕೊಳ್ಳಲು ಎದುರು ದಾಳಿ ನಡೆಸಬೇಕಾಯಿತು ಎಂದು ಹೇಳಿದ್ದಾರೆ. ಈ ಹೈಪ್ರೊಫೈಲ್ ಪ್ರಕರಣ ಈಗ ಬ್ರಿಟನ್ ಮತ್ತು ಯುಎಇ ನಡುವೆ ತೀವ್ರ ಕುತೂಹಲ ಮೂಡಿಸಿದೆ.

Brooke George
Pak ಮಾಜಿ ವೇಗಿ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ LeT ಉಗ್ರರು ಭಾಗಿ, Video!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com