ಇರಾನ್‌ನ ಅಣುಕೇಂದ್ರ ಇಸ್ಫಹಾನ್ ಮೇಲೆ ಅಮೆರಿಕ ದಾಳಿ; ದುಬೈ ಕರಾವಳಿಯ ತೈಲ ಟ್ಯಾಂಕರ್‌ ಹೊಡೆದು ಟೆಹ್ರಾನ್ ಪ್ರತೀಕಾರ

ಈ ದಾಳಿಗಳು, ಅಮೆರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ಪ್ರಾರಂಭಿಸಿದ ತಿಂಗಳ ಕಾಲದ ಯುದ್ಧದ ತೀವ್ರತೆಯನ್ನು ತೋರಿಸುತ್ತವೆ. ಇರಾನ್ ಹಾರ್ಮೊಜ್ ನೌಕಾಮಾರ್ಗದ ಮೇಲಿನ ತನ್ನ ನಿಯಂತ್ರಣವನ್ನು ಮುಂದುವರಿಸಿಕೊಂಡಿದೆ.
A screengrab from a video shared by US President Donald Trump which shows a US military strike in Isfahan, host to one of Iran's key nuclear facilities.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿರುವ ವಿಡಿಯೋದಿಂದ ತೆಗೆದ ಸ್ಕ್ರೀನ್‌ಗ್ರ್ಯಾಬ್‌ನಲ್ಲಿ, ಇರಾನ್‌ನ ಪ್ರಮುಖ ಅಣು ತಾಣಗಳಲ್ಲಿ ಒಂದನ್ನು ಹೊಂದಿರುವ ಇಸ್ಫಹಾನ್‌ನಲ್ಲಿ ನಡೆದ ಅಮೆರಿಕಾ ಸೇನಾ ದಾಳಿ ಕಾಣಿಸುತ್ತದೆ.
Updated on

ದುಬೈ: ಇಂದು ಮಂಗಳವಾರ ಬೆಳಗಿನ ಜಾವ, ಅಮೆರಿಕದ ಸಂಭವನೀಯ ದಾಳಿ ಇರಾನ್‌ನ ಕೇಂದ್ರ ನಗರವಾದ ಇಸ್ಫಹಾನ್ ಮೇಲೆ ನಡೆದಿದೆ. ಇದೇ ವೇಳೆ, ಟೆಹ್ರಾನ್ ಪರ್ಷಿಯನ್ ಗಲ್ಫ್‌ನಲ್ಲಿ ಸಂಪೂರ್ಣವಾಗಿ ಇಂಧನ ತುಂಬಿಕೊಂಡಿದ್ದ ಕುವೈತ್ ತೈಲ ಟ್ಯಾಂಕರ್‌ ಮೇಲೆ ದಾಳಿ ನಡೆಸಿತು.

ಈ ದಾಳಿಗಳು, ಅಮೆರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ಪ್ರಾರಂಭಿಸಿದ ತಿಂಗಳ ಕಾಲದ ಯುದ್ಧದ ತೀವ್ರತೆಯನ್ನು ತೋರಿಸುತ್ತವೆ. ಇರಾನ್ ಹಾರ್ಮೊಜ್ ನೌಕಾಮಾರ್ಗದ ಮೇಲಿನ ತನ್ನ ನಿಯಂತ್ರಣವನ್ನು ಮುಂದುವರಿಸಿಕೊಂಡಿದ್ದು, ಜಾಗತಿಕ ಇಂಧನ ಸಾಗಣೆಗೆ ಅತಿ ಪ್ರಮುಖವಾದ ಈ ಮಾರ್ಗವನ್ನು ಮುಚ್ಚಿದ ಕಾರಣ ತೈಲದ ಬೆಲೆಗಳು ಏರಿಕೆಯಾಗಿದ್ದು, ಜಾಗತಿಕ ಮಾರುಕಟ್ಟೆಗಳು ಅಸ್ಥಿರಗೊಂಡಿವೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧ ವಿರಾಮದ ಕುರಿತು ರಾಜತಾಂತ್ರಿಕ ಮಾತುಕತೆಯಲ್ಲಿ ಪ್ರಗತಿ ನಡೆಯುತ್ತಿದೆ ಎಂದು ಹೇಳುತ್ತಿದ್ದರೂ, ಇಸ್ಫಹಾನ್ ಮೇಲಿನ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಸ್ಫಹಾನ್ ನಗರವು ಜೂನ್‌ನಲ್ಲಿ ಅಮೆರಿಕಾ ಸೇನೆ ದಾಳಿ ನಡೆಸಿದ ಮೂರು ಸ್ಥಳಗಳಲ್ಲಿ ಒಂದಾಗಿದ್ದು, ಇರಾನ್‌ನ ಅತ್ಯಧಿಕ ಸಾಂದ್ರತೆಯ ಯುರೇನಿಯಂ ಅಲ್ಲಿ ಸಂಗ್ರಹಿತವಾಗಿರಬಹುದು ಅಥವಾ ಹೂತುಬಿಟ್ಟಿರಬಹುದು, ಇದರಿಂದಾಗಿ ಅಮೆರಿಕ ದಾಳಿ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ, ಲೆಬನಾನ್‌ನ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಇನ್ನೂ ನಾಲ್ಕು ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಜೊತೆಗೆ, ಇಬ್ಬರು ಯುಎನ್ ಶಾಂತಿಪಾಲಕರು ಕೂಡ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಯುಎನ್ ಭದ್ರತಾ ಮಂಡಳಿ ತುರ್ತು ಸಭೆ ಕರೆದಿದೆ.

A screengrab from a video shared by US President Donald Trump which shows a US military strike in Isfahan, host to one of Iran's key nuclear facilities.
Hormuz ತೆರೆಯದಿದ್ದರೂ ಪರವಾಗಿಲ್ಲ, ಯುದ್ಧ ಕೊನೆಯಾಗಬೇಕು..: ಇರಾನ್ ಎದುರು ಮಂಡಿಯೂರಿದ್ರಾ ಅಮೆರಿಕ ಅಧ್ಯಕ್ಷ Donald Trump?

ಅಂತರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಸ್ಪಾಟ್ ಬೆಲೆಗಳು ಬ್ಯಾರಲ್‌ಗೆ ಸುಮಾರು 107 ಡಾಲರ್‌ಗಳ ಮಟ್ಟದಲ್ಲಿ ಇವೆ. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ನಂತರದಿಂದ ಇದು 45 ಶೇಕಡಾಕ್ಕೂ ಹೆಚ್ಚು ಏರಿಕೆಯಾಗಿದೆ.

ಹಾರ್ಮ್ ಜ್ ನೌಕಾಮಾರ್ಗದ ಮೇಲಿನ ಇರಾನ್‌ನ ಹಿಡಿತ, ಶಾಂತಿಯ ಕಾಲದಲ್ಲಿ ವಿಶ್ವದ ಐದನೇ ಭಾಗದ ತೈಲ ಸಾಗುವ ಈ ಮಾರ್ಗವನ್ನು ಅಡ್ಡಗಟ್ಟಿರುವುದರಿಂದ ಜಾಗತಿಕ ತೈಲ ಬೆಲೆಗಳು ಹೆಚ್ಚಾಗಿವೆ. ಜೊತೆಗೆ, ಗಲ್ಫ್ ಪ್ರದೇಶದ ಇಂಧನ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳೂ ಬೆಲೆ ಏರಿಕೆಗೆ ಕಾರಣವಾಗಿವೆ.

ಗಲ್ಫ್ ಅರಬ್ ರಾಷ್ಟ್ರಗಳ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಟೆಹ್ರಾನ್ ಕೇವಲ ಅಮೆರಿಕಾ ಪಡೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೆಲವು ರಾಷ್ಟ್ರಗಳು ಅಮೆರಿಕಾವನ್ನು ಯುದ್ಧವನ್ನು ಮುಂದುವರಿಸಲು ಪ್ರೇರೇಪಿಸುತ್ತಿವೆ.

ನಮ್ಮ ಕಾರ್ಯಾಚರಣೆಗಳು ಶತ್ರು ದಾಳಿಕೋರರ ವಿರುದ್ಧವೇ ಆಗಿವೆ. ಅವರಿಗೆ ಅರಬ್ ಅಥವಾ ಇರಾನಿಯನ್ ಜನರ ಬಗ್ಗೆ ಗೌರವವಿಲ್ಲ ಎಂದು ಅರಘ್ಚಿ ಎಕ್ಸ್‌ ಪೋಸ್ಟ್ ನಲ್ಲಿ ಬರೆದಿದ್ದಾರೆ. ನಾಗರಿಕ ಗುರಿಗಳ ಮೇಲೆ ದಾಳಿಗಳು ಮುಂದುವರಿದಿವೆ. ದುಬೈ ಸಮುದ್ರಪ್ರದೇಶದಲ್ಲಿ ಇರಾನ್‌ನ ಡ್ರೋನ್ ಕುವೈತ್ ತೈಲ ಟ್ಯಾಂಕರ್‌ಗೆ ತಾಗಿದ್ದು, ಬೆಂಕಿ ಕಾಣಿಸಿಕೊಂಡಿತು. ನಂತರ ಅದನ್ನು ನಂದಿಸಲಾಗಿದೆ ಎಂದು ದುಬೈ ಮೀಡಿಯಾ ಕಚೇರಿ ತಿಳಿಸಿದೆ.

ದುಬೈನಲ್ಲಿ ತಡೆಹಿಡಿದ ಡ್ರೋನ್‌ನ ಅವಶೇಷಗಳು ನಿವಾಸಿ ಪ್ರದೇಶಕ್ಕೆ ಬಿದ್ದು ನಾಲ್ವರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com