

ಸುಮಾರು ಎರಡು ವರ್ಷಗಳ ಹಿಂದೆ ಹೆಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಸಂಘಟಿತ ದಾಳಿಯಲ್ಲಿ ಲೆಬನಾನ್‌ನಾದ್ಯಂತ ಸಾವಿರಾರು ಪೇಜರ್‌ಗಳು ಪರಸ್ಪರ ಸೆಕೆಂಡುಗಳ ಅಂತರದಲ್ಲಿ ಸ್ಫೋಟಗೊಂಡಿದ್ದವು.
ಈ ಸ್ಫೋಟಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 32 ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಂಭೀರ ಗಾಯಗಳಿಗೆ ತುತ್ತಾಗಿದ್ದರು. ಇದು ಜಗತ್ತು ಕಂಡ ಯಾವುದೇ ದಾಳಿಗಿಂತ ಭಿನ್ನವಾಗಿತ್ತು. ಈಗ ಹೆಜ್ಬೊಲ್ಲಾ ತನ್ನದೇ ಆದ ಹೊಸ ಮಾರಕ ಶಸ್ತ್ರಾಸ್ತ್ರವನ್ನು ಬಳಸುತ್ತಿದೆ. ಅದು ಸದ್ದಿಲ್ಲದೆ ಇಸ್ರೇಲಿಗರ ಜೀವಗಳನ್ನು ತೆಗೆದುಕೊಳ್ಳುತ್ತಿದೆ.
ಯಾವುದು ಈ ವೆಪನ್?
ಇದು ಫೈಬರ್-ಆಪ್ಟಿಕ್ ಕ್ವಾಡ್‌ಕಾಪ್ಟರ್ ಡ್ರೋನ್ ಆಗಿದ್ದು, ಬಹಳಷ್ಟು ಚಿಕ್ಕದಾಗಿದೆ. ಆದರೆ ನಿಖರವಾಗಿ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. ಅದನ್ನು ತುಂಬಾ ಅಪಾಯಕಾರಿಯಾಗಿಸುವುದು ಅದರ ಗಾತ್ರವಲ್ಲ, ಆದರೆ ಅದನ್ನು ನಿಯಂತ್ರಿಸೋದು ಹೇಗೆ ಎಂಬುದಾಗಿದೆ.
ವೈರ್‌ಲೆಸ್ ಸಿಗ್ನಲ್‌ಗಳನ್ನು ಅವಲಂಬಿಸಿರುವ ಸಾಂಪ್ರದಾಯಿಕ ಡ್ರೋನ್‌ಗಳಿಗಿಂತ ಭಿನ್ನವಾಗಿ, ಫೈಬರ್-ಆಪ್ಟಿಕ್ ಡ್ರೋನ್ ತನ್ನ ಆಪರೇಟರ್‌ಗೆ ಭೌತಿಕ ಕೇಬಲ್ ಮೂಲಕ ಸಂಪರ್ಕ ಹೊಂದಿದೆ. ಆ ಒಂದೇ ವ್ಯತ್ಯಾಸವು ಎಲ್ಲವನ್ನೂ ಬದಲಾಯಿಸುತ್ತದೆ. ಪ್ರತಿಬಂಧಿಸಲು ಅಥವಾ ನಿರ್ಬಂಧಿಸಲು ಯಾವುದೇ ರೇಡಿಯೋ ಸಿಗ್ನಲ್ ಇಲ್ಲದ ಕಾರಣ, ಇಸ್ರೇಲ್‌ನ ಎಲೆಕ್ಟ್ರಾನಿಕ್ ಜಾಮಿಂಗ್ ವ್ಯವಸ್ಥೆಯಿಂದ ಏನನ್ನೂ ಮಾಡಲು ಸಾಧ್ಯವಾಗಲ್ಲ. ಇದರಿಂದ
ಅವುಗಳನ್ನು ಯಾವ ಸ್ಥಳದಿಂದ ಉಡಾಯಿಸಲಾಗಿದೆ ಎಂಬುದನ್ನು ಕಂಡುಹಿಡಿಯುವುದು ಅಸಾಧ್ಯ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಅಧ್ಯಯನ ಸಂಸ್ಥೆಯ ಹಿರಿಯ ಸಂಶೋಧಕ ಯೆಹೋಶುವಾ ಕಲಿಸ್ಕಿ ತಿಳಿಸಿದ್ದಾರೆ.
ಈ ಡ್ರೋನ್‌ಗಳಲ್ಲಿ ಒಂದರ ಕಾರ್ಯಾಚರಣೆಯಲ್ಲಿ ವಿಡಿಯೋವನ್ನು ಹಿಜ್ಬೋಲ್ಲಾ ಭಾನುವಾರ ಬಿಡುಗಡೆ ಮಾಡಿದೆ. ಡ್ರೋನ್ ಬೆದರಿಕೆಯ ಬಗ್ಗೆ ಇಸ್ರೇಲಿ ಸೈನಿಕರಿಗೆ ಸ್ಪಷ್ಟ ಅರಿವು ಇರಲಿಲ್ಲ ಎಂಬುದನ್ನು ದೃಶ್ಯಗಳು ತೋರಿಸಿವೆ. ಈ ದಾಳಿಯಲ್ಲಿ 19 ವರ್ಷದ ಸಾರ್ಜೆಂಟ್ ಇಡಾನ್ ಫೂಕ್ಸ್ ಸಾವನ್ನಪ್ಪಿದ್ದಾರೆ ಮತ್ತು ಇತರ ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ದೃಢಪಡಿಸಿವೆ. ಗಾಯಾಳುಗಳನ್ನು ಸ್ಥಳಾಂತರಿಸಲು ರಕ್ಷಣಾ ಹೆಲಿಕಾಪ್ಟರ್ ಬಂದಾಗ, ಹಿಜ್ಬೊಲ್ಲಾ ಅದರ ಮೇಲೆ ಮತ್ತಷ್ಟು ಡ್ರೋನ್‌ಗಳನ್ನು ಹಾರಿಸಿದೆ.
Advertisement