

ನ್ಯೂಯಾರ್ಕ್: ಇನ್‌ಸ್ಟಾಗ್ರಾಮ್ "ಹುಡುಗಿಯರಿಗಾಗಿ" ಎಂದು ಹೇಳಿಕೆ ನೀಡಿ ತಮ್ಮ ಪ್ರೊಫೈಲ್‌ಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಪುರುಷರನ್ನು ಅಪಹಾಸ್ಯ ಮಾಡುವ ಮೂಲಕ ಟೆಕ್ ಉದ್ಯಮಿ ಎಲೋನ್ ಮಸ್ಕ್ ವಿವಾದಕ್ಕೆ ಕಾರಣರಾಗಿದ್ದಾರೆ.
"ಇನ್‌ಸ್ಟಾಗ್ರಾಮ್ ಹುಡುಗಿಯರಿಗಾಗಿ ಇರುವ ಸಾಮಾಜಿಕ ಜಾಲತಾಣ ಮಾಧ್ಯಮವಾಗಿದೆ" ಎಂದು ಮಸ್ಕ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಅಭ್ಯಾಸಗಳು ಮತ್ತು ಆನ್‌ಲೈನ್ ಪ್ರವೃತ್ತಿಗಳ ಕುರಿತು ವೈರಲ್ ಥ್ರೆಡ್‌ಗೆ ಉತ್ತರಿಸುತ್ತಾ ಬರೆಯಬೇಕಾದರೆ ಮಸ್ಕ್ ತಮ್ಮ ಈ ಅಭಿಪ್ರಾಯ ಹೊರಹಾಕಿದ್ದಾರೆ. ಜನರ ಆನ್‌ಲೈನ್ ಅಭ್ಯಾಸಗಳು ಅವರ ಜೀವನದ ವಿಭಿನ್ನ "ಹಂತಗಳನ್ನು" ಹೇಗೆ ಪ್ರತಿಬಿಂಬಿಸಬಹುದು ಎಂಬುದರ ಕುರಿತ ಚರ್ಚೆಯನ್ನು ಪೋಸ್ಟ್ ಒಳಗೊಂಡಿತ್ತು.
ಥ್ರೆಡ್ "thirst traps" ಪೋಸ್ಟ್ ಮಾಡುವುದು, ದಿನವಿಡೀ ಸ್ಟೋರೀಸ್ ನ್ನು ಅಪ್‌ಲೋಡ್ ಮಾಡುವುದು ಮತ್ತು ಮನೆಯಲ್ಲಿ ತಯಾರಿಸಿದ ಆಹಾರದ ಚಿತ್ರಗಳನ್ನು ಹಂಚಿಕೊಳ್ಳುವಂತಹ ಸಾಮಾನ್ಯ ಇನ್‌ಸ್ಟಾಗ್ರಾಮ್ ಪ್ರವೃತ್ತಿಗಳನ್ನು ಹೈಲೈಟ್ ಮಾಡಿದೆ.
ನಂತರ, ಮಸ್ಕ್ ಮತ್ತೊಂದು ಕಾಮೆಂಟ್ ನ್ನು ಸೇರಿಸಿದ್ದಾರೆ. ವಯಸ್ಕ ಪುರುಷರು ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳನ್ನು ತಮಗೆ ಕಳುಹಿಸಿದಾಗ, ಅವರು "ಪರಿವರ್ತನೆಯಾಗುತ್ತಿದ್ದಾರೆಯೇ ಅಥವಾ ಏನು" ಎಂದು ಮಸ್ಕ್ ಆಶ್ಚರ್ಯಚಕಿತರಾಗ್ತಾರಂತೆ. ಅವರು "ಕೆಲವೊಮ್ಮೆ ವಯಸ್ಕ ಪುರುಷರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳನ್ನು ನನಗೆ ಕಳುಹಿಸುತ್ತಾರೆ ಆಗ ನಾನು ಅವರು ಪರಿವರ್ತನೆಯಾಗುತ್ತಿದ್ದೀರಾ ಅಥವಾ ಏನು ಕಥೆ ಎಂದು ನಾನು ಭಾವಿಸುತ್ತೇನೆ?" ಎಂದು ಮಸ್ಕ್ ತಿಳಿಸಿದ್ದಾರೆ.
ಪೋಸ್ಟ್ ತ್ವರಿತವಾಗಿ ವೈರಲ್ ಆಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಕಾಮೆಂಟ್‌ಗಳನ್ನು ಲಿಂಗ ತಾರತಮ್ಯದ್ದಾಗಿದ್ದು ಆಕ್ರಮಣಕಾರಿ ಪೋಸ್ಟ್ ಆಗಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
"ಈ ಪುರುಷರು ನಿಮ್ಮನ್ನು ವಂಚಿಸಲು ಪ್ರಯತ್ನಿಸುತ್ತಿರುವ ಮಹಿಳೆಯರಾಗಿರಬಹುದು. ನಕಲಿ ಮಾತ್ರ ನೀವು ಕಂಡುಕೊಳ್ಳಬಹುದು" ಎಂದು ಮತ್ತೊಬ್ಬರು ಎಲಾನ್ ಮಸ್ಕ್ ಗೆ ಕಾಮೆಂಟ್ ಮಾಡಿದ್ದಾರೆ.
ಎಲೋನ್ ಮಸ್ಕ್ ಆಗಾಗ್ಗೆ ಮೆಟಾ ಪ್ಲಾಟ್‌ಫಾರ್ಮ್‌ಗಳ ಒಡೆತನದ ಪ್ಲಾಟ್‌ಫಾರ್ಮ್‌ಗಳನ್ನು ಟೀಕಿಸುತ್ತಾ X ಅನ್ನು ಹೆಚ್ಚು ಮುಕ್ತ ಮತ್ತು ಗಂಭೀರ ಪರ್ಯಾಯ ವೇದಿಕೆ ಎಂದು ಪ್ರಚಾರ ಮಾಡುತ್ತಿದ್ದಾರೆ.
Advertisement