US highway car crash: ತೆಲಂಗಾಣದ ಭಾರತೀಯ ವಿದ್ಯಾರ್ಥಿನಿ ಸಾವು! ಆರು ಮಂದಿಗೆ ಗಾಯ

ಇಂಡಿಯಾನಾದ ಲೇಕ್ ಕೌಂಟಿಯ ಕ್ರೌನ್ ಪಾಯಿಂಟ್ ಬಳಿ ಇಂಟರ್‌ಸ್ಟೇಟ್ 65 ರಲ್ಲಿ ಶನಿವಾರ ತಡರಾತ್ರಿ ಅಪಘಾತ ಸಂಭವಿಸಿದೆ.
Navya Gadusu
ನವ್ಯಾ ಗಡುಸು
Updated on

ಚಿಕಾಗೋ: ಅಮೆರಿಕದ ಚಿಕಾಗೋ ಬಳಿ ನಡೆದ ರಸ್ತೆ ಅಪಘಾತದಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಮೃತ ಯುವತಿಯನ್ನು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಕಾಗೋ ನಿವಾಸಿ 25 ವರ್ಷದ ನವ್ಯಾ ಗಡುಸು ಎಂದು ಗುರುತಿಸಲಾಗಿದೆ. ಇಂಡಿಯಾನಾದ ಲೇಕ್ ಕೌಂಟಿಯ ಕ್ರೌನ್ ಪಾಯಿಂಟ್ ಬಳಿ ಇಂಟರ್‌ಸ್ಟೇಟ್ 65 ರಲ್ಲಿ ಶನಿವಾರ ತಡರಾತ್ರಿ ಅಪಘಾತ ಸಂಭವಿಸಿದೆ.

ಲೇಕ್ ಕೌಂಟಿ ಕರೋನರ್ ಕಚೇರಿ ಭಾನುವಾರ ಬೆಳಿಗ್ಗೆ 12:16 ಕ್ಕೆ (ಸ್ಥಳೀಯ ಸಮಯ) ಗಡುಸು ಅವರು ಮೃತಪಟ್ಟಿರುವುದಾಗಿ ಘೋಷಿಸಿತು. ಅಪಘಾತದಲ್ಲಿ ಉಂಟಾದ ತೀವ್ರ ಗಾಯಗಳು ಸಾವಿಗೆ ಕಾರಣ ಎಂದು ದೃಢಪಡಿಸಲಾಗಿದೆ. ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಸಂತಾಪ ವ್ಯಕ್ತಪಡಿಸಿದ್ದು, ಆಕೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚಿಕಾಗೋ ಬಳಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ವಿದ್ಯಾರ್ಥಿನಿ ನವ್ಯಾ ಗಡುಸು ನಿಧನದಿಂದ ತೀವ್ರ ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸಿರುವುದಾಗಿ ಹೇಳಿದೆ.

ಇಂಡಿಯಾನಾ ರಾಜ್ಯ ಪೊಲೀಸರ ಪ್ರಕಾರ, ರಾತ್ರಿ 11:15 ರ ಸುಮಾರಿಗೆ ಏಳು ಯುವತಿಯರಿದ್ದ ಕೆಂಪು ಮಿನಿವ್ಯಾನ್ ನಲ್ಲಿ ತಾಂತ್ರಿಕ ಸಮಸ್ಯೆಗಳಿಂದ ನಿಧಾನವಾಗಿ ಚಲಿಸುವಾಗ ಅಪಘಾತ ಸಂಭವಿಸಿದೆ. ಹಿಂದೆ ಬರುತ್ತಿದ್ದ ಕಾರಿಗೆ ಡಿಕ್ಕಿಯನ್ನು ತಪ್ಪಿಸಲು ಹೋಗಿ ಎಡಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆಯಿಂದ ಕಂದಕಕ್ಕೆ ಉರುಳಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಸಮಯದಲ್ಲಿ ಮಿನಿ ವ್ಯಾನ್ ನಲ್ಲಿ ಇದ್ದವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com