ಹಾರ್ಮುಜ್ ಜಲಸಂಧಿಯಲ್ಲಿ ತೈಲ ನೌಕೆ ಮೇಲೆ ಕ್ಷಿಪಣಿ ದಾಳಿ: 11 ಭಾರತೀಯ ನಾವಿಕರಿಗೆ ಗಂಭೀರ ಗಾಯ, ಒಮಾನ್‌ನಲ್ಲಿ ಚಿಕಿತ್ಸೆ

ಒಮಾನ್ ಕರಾವಳಿಯ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಪನಾಮ ಧ್ವಜಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ 11 ಭಾರತೀಯ ನಾವಿಕರು ಸೇರಿದಂತೆ 12 ಸಿಬ್ಬಂದಿ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Vessels at the Strait of Hormuz, as seen from Musandam, Oman, October 2, 2026
ಅಕ್ಟೋಬರ್ 2, 2026 ರಂದು ಓಮನ್‌ನ ಮುಸಂಡಮ್‌ನಿಂದ ಕಂಡಂತೆ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳುReuters
Updated on: 

ಮಸ್ಕತ್ (ಓಮನ್): ಒಮಾನ್ ಕರಾವಳಿಯ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಪನಾಮ ಧ್ವಜಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ 11 ಭಾರತೀಯ ನಾವಿಕರು ಸೇರಿದಂತೆ 12 ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಒಮಾನ್ ಅಧಿಕಾರಿಗಳ ನೆರವಿನೊಂದಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಸದ್ಯ ಅವರಿಗೆ ಒಮಾನ್‌ನ ಖಸಬ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಹಾರ್ಮುಜ್ ಜಲಸಂಧಿ ಮಾರ್ಗವಾಗಿ ಚಲಿಸುತ್ತಿದ್ದ ಎಂ.ಟಿ ಆನ್ ಪೀಸ್ ಎಂಬ ವಾಣಿಜ್ಯ ತೈಲ ನೌಕೆಯ ಮೇಲೆ ಅಪರಿಚಿತ ದಿಕ್ಕಿನಿಂದ ಕ್ಷಿಪಣಿ ಅಥವಾ ಶೆಲ್ ಮಾದರಿಯ ವಸ್ತುವೊಂದು ಭೀಕರವಾಗಿ ಬಂದು ಅಪ್ಪಳಿಸಿದೆ. ಇನ್ನು, ಹಡಗಿನಲ್ಲಿದ್ದ ಒಟ್ಟು 19 ಸಿಬ್ಬಂದಿ ಪೈಕಿ 17 ಮಂದಿ ಭಾರತೀಯ ನಾವಿಕರಾಗಿದ್ದರು. ಅದರಲ್ಲಿ 12 ಜನರಿಗೆ ಗಾಯಗಳಾಗಿದ್ದು, ಅವರಲ್ಲಿ 11 ಮಂದಿ ಭಾರತೀಯರಾಗಿದ್ದಾರೆ.

ಮುಂದುವರೆದು, ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, "ಮಧ್ಯಪ್ರಾಚ್ಯ ವಲಯದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ನಿರಂತರ ದಾಳಿಗಳು ಭಾರತಕ್ಕೆ ತೀವ್ರ ಕಳವಳ ತಂದಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನಾಗರಿಕ ಮೂಲಸೌಕರ್ಯ ಹಾಗೂ ನಾವಿಕರ ಮೇಲಿನ ಇಂತಹ ಕೃತ್ಯಗಳು ತಕ್ಷಣವೇ ನಿಲ್ಲಬೇಕು" ಎಂದು ಆಗ್ರಹಿಸಿದ್ದಾರೆ. ಏತನ್ಮಧ್ಯೆ, ಗಾಯಗೊಂಡ ನಾವಿಕರನ್ನು ತಕ್ಷಣವೇ ಹೆಲಿಕಾಪ್ಟರ್ ಹಾಗೂ ಬೋಟ್‌ಗಳ ಮೂಲಕ ಸುರಕ್ಷಿತವಾಗಿ ದಡಕ್ಕೆ ತಂದು, ಚಿಕಿತ್ಸೆ ಕಲ್ಪಿಸುವಲ್ಲಿ ಶ್ಲಾಘನೀಯ ನೆರವು ನೀಡಿದ ಒಮಾನ್ ಅಧಿಕಾರಿಗಳಿಗೆ ಭಾರತ ಸರ್ಕಾರ ಧನ್ಯವಾದಗಳನ್ನು ಸಲ್ಲಿಸಿದೆ. 

Vessels at the Strait of Hormuz, as seen from Musandam, Oman, October 2, 2026
ದೋಣಿಗಳ ನಡುವೆ ಡಿಕ್ಕಿ ಪರಿಣಾಮ ಕನಿಷ್ಠ 30 ಜನರು ಸಾವು; ಡಜನ್‌ಗಟ್ಟಲೆ ಜನರು ನಾಪತ್ತೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com