ಭಾರತೀಯ ಮೂಲದ ವನ್ಯಾ ಚೈಲ್ಡ್ ಜೀನಿಯಸ್

ಅಮೆರಿಕದ ಪ್ರತಿಷ್ಠಿತ ಲೈಫ್ ಟೈಮ್ ಚಾನೆಲ್ ನ `ಚೈಲ್ಡ್ ಜೀನಿಯಸ್ 2014' ಸ್ಪರ್ಧೆಯಲ್ಲಿ ಭಾರತೀಯ ಮೂಲದ ವನ್ಯಾ ಶಿವಶಂಕರ್ (13) ಗೆಲುವು ಸಾಧಿಸಿದ್ದಾಳೆ...
ಭಾರತೀಯ ಮೂಲದ ವನ್ಯಾ ಶಿವಶಂಕರ್
ಭಾರತೀಯ ಮೂಲದ ವನ್ಯಾ ಶಿವಶಂಕರ್

ವಾಷಿಂಗ್ಟನ್: ಅಮೆರಿಕದ ಪ್ರತಿಷ್ಠಿತ ಲೈಫ್  ಟೈಮ್ ಚಾನೆಲ್ ನ `ಚೈಲ್ಡ್ ಜೀನಿಯಸ್ 2014' ಸ್ಪರ್ಧೆಯಲ್ಲಿ ಭಾರತೀಯ ಮೂಲದ ವನ್ಯಾ ಶಿವಶಂಕರ್ (13) ಗೆಲುವು ಸಾಧಿಸಿದ್ದಾಳೆ.

ಆಕೆ ವನ್ಯಾ ಕನ್ಸಾಸ್ ನ ಒಲಾಥೆಯ ಮಾಧ್ಯಮಿಕ ಶಾಲೆ ವಿದ್ಯಾರ್ಥಿನಿ. ಈಕೆ ರು. 61.80 ಲಕ್ಷ ಮೊತ್ತದ ಸ್ಕಾಲರ್ ಶಿಪ್ ಅನ್ನು ಪ್ರಶಸ್ತಿ ರೂಪದಲ್ಲಿ ಗಳಿಸಿದ್ದಾಳೆ. ಚೈಲ್ಡ್ ಜೀನಿಯಸ್ ಪ್ರತಿಷ್ಠಿತ ಸ್ಪರ್ಧೆಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಕ್ಕಳ ಬುದ್ಧಿಮತ್ತೆಯನ್ನು ಪರೀಕ್ಷಿಸಲಾಗುತ್ತದೆ. ಈ ಸ್ಪರ್ಧೆಗೆ ರಾಷ್ಟ್ರಮಟ್ಟದಲ್ಲಿ ಒಟ್ಟು 20 ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಅಂತಿಮವಾಗಿ ನಾಲ್ಕು ಮಕ್ಕಳು ಫೈನಲ್ಗೆ ಆಯ್ಕೆಯಾಗುತ್ತಾರೆ.

ವನ್ಯಾ ಸತತ ನಾಲ್ಕು ಬಾರಿ ಒಲಾಥೆ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಳು. ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲೂ ವನ್ಯಾ ಪಾಲ್ಗೊಳ್ಳಲಿದ್ದಾಳೆ. ವನ್ಯಾ ಹೃದಯರೋಗ ತಜ್ಞೆಯಾಗುವ ಹಂಬಲ ಇಟ್ಟುಕೊಂಡಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com