ಕ್ಯಾರೆಟ್ ಸಮಾಚಾರ

ಗಜ್ಜರಿ (ಕ್ಯಾರೆಟ್) ಭಾರತವಷ್ಟೇ ಅಲ್ಲದೆ ಜಗತ್ತಿನ ಹಲವು ದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಾರೆ. ವಿಟಾಮಿನ್ ಎ ಜೀವಸತ್ವದ ಗಣಿಯಾಗಿರುವ ಇದು ಭಾರತೀಯರ ಪ್ರಮುಖ ತರಕಾರಿಯೂ ಹೌದು.
ಕ್ಯಾರೆಟ್ ಸಮಾಚಾರ
Updated on: 

ಮಣ್ಣು/ಹವಾಗುಣ
ಸಾಮಾನ್ಯವಾಗಿ ಇದನ್ನು ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯಬಹುದು. ಮರಳುಮಿಶ್ರಿತ ನೀರು ಬಸಿದು ಹೋಗುವಂಥ ಜಮೀನಲ್ಲಿ ಗಜ್ಜರಿ ಚೆನ್ನಾಗಿ ಬೆಳೆಯಬಲ್ಲದು. 6.0 ರಿಂದ 6.5 ರಸಸಾರವಿದ್ದರೆ ಉತ್ತಮ. ಬೇರುಗಳು ಆಳಕ್ಕಿಳಿಯಲು ಜಮೀನನ್ನು ಚೆನ್ನಾಗಿ ಹರಗಿ ಸಡಿಲು ಮಾಡಿರಬೇಕು. ಇದಕ್ಕೆ ತಂಪು ವಾತಾವರಣ ಬೇಕು. 15ರಿಂದ 20 ಸೆ. ಉಷ್ಣಾಂಶದಲ್ಲಿ ಇರಬೇಕು. ಜಾಸ್ತಿ ಇದ್ದರೆ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ತಳಿಗಳು
ಊಟಿ- 1, ನ್ಯೂ ಕರೋಡಾ, ಇಂಡಿಯಾ ಗೋಲ್ಡ್ ಪೂಸಾ ಕೇಸರ್ ಚಾಲ್ತಿಯಲ್ಲಿರುವ ಪ್ರಮುಖ ತಳಿಗಳು. ಅಲ್ಲದೆ, ಅಲ್ಲಲ್ಲಿ ಸ್ಥಳೀಯ ತಳಿಗಳು ಬಳಕೆಯಲ್ಲಿವೆ.

ಬೆಳೆಯುವ ವಿಧಾನ
ಗಜ್ಜರಿ ಬೆಳೆಯುವುದಕ್ಕಿಂತ ಪೂರ್ವದಲ್ಲಿ ಜಮೀನನ್ನು ಹೆಚ್ಚು ಆಳದವರೆಗೆ ಉಳುಮೆ ಮಾಡಬೇಕು. ಏಕೆಂದರೆ ಗಜ್ಜರಿ ಹೆಚ್ಚು ಆಳಕ್ಕೆ ಇಳಿಯುವುದರಿಂದ ಚೆನ್ನಾಗಿ ಫಸಲು ಬರಲು ಅನುಕೂಲ. 25- 30 ಸೆಂ.ಮೀ. ಅಂತರದಲ್ಲಿ ಬೀಜ ಬಿತ್ತಬೇಕು. ಬೀಜ ಬಿತ್ತಿದ ನಂತರ ತಜ್ಞರ ಸಲಹೆ ಮೇರೆಗೆ ಗೊಬ್ಬರ ಹಾಕಬೇಕು. ದಿನಕ್ಕೆ ಒಂದು ಬಾರಿಯಾದರೂ ನೀರು ಹಾಯಿಸಬೇಕು. ಕಳೆ ಬಾರದಂತೆ ಎಚ್ಚರ ವಹಿಸಬೇಕು. ಒಂದು ಹೆಕ್ಟೇರ್‌ಗೆ 4 ಕೆಜಿಯಷ್ಟು ಬೀಜ ಬೇಕಾಗುತ್ತದೆ. ಗಜ್ಜರಿಯನ್ನು ವರ್ಷದ ಎಲ್ಲ ತಿಂಗಳಲ್ಲೂ ಬೆಳೆಯಬಹುದು. ಜುಲೈದಿಂದ- ಫೆಬ್ರವರಿಯಲ್ಲಿ ಬೆಳೆಯುವುದರಿಂದ ಉತ್ತಮ ಫಸಲು ಪಡೆಯಬಹುದು. 100ರಿಂದ 120 ದಿನಗಳಲ್ಲಿ ಫಸಲು ಕೈಗೆ ಬರುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಪ್ರತಿ ಹೆಕ್ಟೇರ್‌ಗೆ 25ರಿಂದ 30 ಟನ್ ಇಳುವರಿ ಪಡೆಯಬಹುದು.

ರೋಗಗಳು
ಎಲೆಕೊಳೆ, ಬೇರು ಕೊಳೆ ರೋಗಗಳು ಪ್ರಮುಖವಾಗಿ ಬರಬಹುದು. ಹಲವು ಕೀಟಬಾಧೆ ಕಾಡಬಹುದು ಸೂಕ್ತ ನಿಯಂತ್ರಣ ಕ್ರಮ ಶೀಘ್ರ ಕೈಗೊಳ್ಳಬೇಕು.

-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com