1946 ಜೂನ್ 14-ಅಮೆರಿಕದಲ್ಲಿ ನ್ಯೂಯೋರ್ಕಿನಲ್ಲಿ ಡೊನಾಲ್ಡ್ ಟ್ರಂಪ್ ಜನಿಸಿದರು. ಜೇಷ್ಠಾ ನಕ್ಷತ್ರದ ವೃಶ್ಚಿ ರಾಶಿಯಲ್ಲಿ ಟ್ರಂಪ್ ಜನಿಸಿದ್ದು ಚಂದ್ರರಾಶಿಯೂ ಇದರ ಜೊತೆಗೂಡಿದೆ. ಟ್ರಂಪ್ ಜಾತಕದಲ್ಲಿ ಕಾಳಸರ್ಪಯೋಗವಿದೆ.
ಅವರ ಕುಂಡಲಿಯಲ್ಲಿ ಎಲ್ಲಾ ಪ್ರಮುಖ ಗ್ರಹಗಳು ರಾಹು ಮತ್ತು ಕೇತು ಎಂಬ ಛಾಯಾಗ್ರಹಗಳ ಮಧ್ಯೆ ಇರುವುದರಿಂದ ಈ ಯೋಗ ನಿರ್ಮಾಣವಾಗಿದೆ. ಕಾಳ ಸರ್ಪಯೋಗ ಹೊಂದಿರುವವರ ಜೀವನವು ತೀವ್ರವಾದ ಏರಿಳಿತಗಳಿಂದ ಕೂಡಿರುತ್ತದೆ. ಟ್ರಂಪ್ ಅವರ ಜೀವನದಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.
ಅವರು ಉದ್ಯಮಿಯಾಗಿ, ಕೋಟ್ಯಧಿಪತಿಯಾಗಿ ಬೆಳೆದು, ನಂತರ ದಿವಾಳಿತನ ಅನುಭವಿಸಿ, ಮತ್ತೆ ಅನಿರೀಕ್ಷಿತವಾಗಿ ಅಮೆರಿಕದ ಅಧ್ಯಕ್ಷ ಗದ್ದುಗೆಗೇರಿದರು. 2020ರ ಚುನಾವಣೆಯಲ್ಲಿ ಸೋತರೂ, 2024ರಲ್ಲಿ ಮತ್ತೆ ಜಯಭೇರಿ ಬಾರಿಸಿ ಅಧಿಕಾರಕ್ಕೆ ಮರಳಿದ್ದು ಈ ಯೋಗದ ತೀವ್ರ ಪ್ರಭಾವಕ್ಕೆ ಉದಾಹರಣೆಯಾಗಿದೆ.
ಟ್ರಂಪ್ ಜಾತಕದಲ್ಲಿ ರಾಹು ವೃಷಭ ರಾಶಿಯಲ್ಲಿ (10ನೇ ಮನೆ - ಕರ್ಮ ಸ್ಥಾನ) ಮತ್ತು ಕೇತು ವೃಶ್ಚಿಕ ರಾಶಿಯಲ್ಲಿ (4ನೇ ಮನೆ) ಇದ್ದಾರೆ.
ರಾಹುವಿನ ಪ್ರಭಾವ: 10ನೇ ಮನೆಯಲ್ಲಿರುವ ರಾಹು ಇವರಿಗೆ ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗುವ ಶಕ್ತಿ ನೀಡಿದ್ದರೂ, ಅವರ ಅಧಿಕಾರ ಮತ್ತು ಖ್ಯಾತಿಯು ಸದಾ ವಿವಾದಗಳು, ಕಾನೂನು ಹೋರಾಟಗಳು ಹಾಗೂ ಪಿತೂರಿಗಳಿಂದ ಸುತ್ತುವರೆದಿರುವಂತೆ ಮಾಡುತ್ತದೆ.
ಸವಾಲುಗಳು ಗೆಲುವಿನ ಸಮೀಪ ಬಂದಾಗ ಅಡೆತಡೆಗಳು ಎದುರಾಗುವುದು ಮತ್ತು ಪಡೆದ ಸ್ಥಾನವನ್ನು ಉಳಿಸಿಕೊಳ್ಳಲು ನಿರಂತರ ಹೋರಾಟ ಮಾಡಬೇಕಾಗುವುದು ಕಾಳ ಸರ್ಪಯೋಗದ ಪ್ರಭಾವವಾಗಿದೆ.
ಕಾಳ ಸರ್ಪಯೋಗದ ಜೊತೆಗೆ ಟ್ರಂಪ್ ಅವರ ಜಾತಕದಲ್ಲಿ ಸಿಂಹ ಲಗ್ನವಿದ್ದು, ಅಲ್ಲಿ ಸಾಹಸದ ಗ್ರಹ ಮಂಗಳನಿದ್ದಾನೆ. ಹೀಗಾಗಿ ದೋಷದ ನಕಾರಾತ್ಮಕ ಫಲಗಳಿದ್ದರೂ, ಅವರು ಯಾವುದೇ ಸವಾಲಿಗೆ ಮಣಿಯದೆ, ತಂತ್ರಗಾರಿಕೆಯಿಂದ ಎದುರಾಳಿಗಳನ್ನು ಮಣಿಸಿ ಕಠಿಣ ಪರಿಸ್ಥಿತಿಯಿಂದಲೂ ಮತ್ತೆ ಪುಟಿದೇಳುವ ಅದ್ಭುತ ಮನಃಶಕ್ತಿಯನ್ನು ಹೊಂದಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾಳ ಸರ್ಪಯೋಗವನ್ನು ಕೇವಲ ದೋಷವಾಗಿ ನೋಡದೆ ಒಂದು ಶಕ್ತಿಯಾಗಿಯೂ ನೋಡಲಾಗುತ್ತದೆ. ಟ್ರಂಪ್ ಅವರ ಜಾತಕದಲ್ಲಿರುವ ಇತರ ಬಲಿಷ್ಠ ರಾಜಯೋಗಗಳು ಮತ್ತು ಗ್ರಹಗಳ ಸ್ಥಾನಗಳು ಈ ಕಾಳ ಸರ್ಪದೋಷದ ನಕಾರಾತ್ಮಕತೆಯನ್ನು ಮೀರಿ ಅವರು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಯಶಸ್ಸು ಗಳಿಸಲು ಕಾರಣವಾಗಿವೆ.
2027 ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಅನುಕೂಲಕರವಾದ ಬದಲಾವಣೆಗಳು ಸಾಧ್ಯತೆಯಿದೆ. ಜೂನ್ ತಿಂಗಳಿನಲ್ಲಿ ಶನಿ ಪ್ರಭಾವದಿಂದ ಪ್ರತಿಸ್ಪರ್ಧಿಗಳನ್ನು ಎದುರಿಸಲು ಮತ್ತು ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಲು ಮತ್ತು ಆರ್ಥಿಕ ಮಟ್ಟವನ್ನು ಸುಧಾರಣೆಯಾಗುತ್ತದೆ.
ಡಾ. ಪಿ.ಬಿ ರಾಜೇಶ್
ಜ್ಯೋತಿಷಿಗಳು ಮತ್ತು ಸಂಖ್ಯಾ ಶಾಸ್ತ್ರಜ್ಞರು