ಸಂಗ್ರಹ ಚಿತ್ರ 
ರಾಜ್ಯ ಬಜೆಟ್

ರಾಜ್ಯ ಬಜೆಟ್ 2018: ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು?

ಸಿಎಂ ಕುಮಾರಸ್ವಾಮಿ ಅವರು ಗುರುವಾರ ಮಂಡಿಸುತ್ತಿರುವ ರಾಜ್ಯ ಬಜೆಟ್ 2018ರಲ್ಲಿ ರಾಜಧಾನಿ ಬೆಂಗಳೂರಿಗೆ ಸಾಕಷ್ಟು ಯೋಜನೆಗಳು ಘೋಷಣೆಯಾಗಿದ್ದು, ಈ ಯೋಜನೆಗಳ ಸಂಕ್ಷಿಪ್ತ ವಿವರ ಇಂತಿದೆ.

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಗುರುವಾರ ಮಂಡಿಸುತ್ತಿರುವ ರಾಜ್ಯ ಬಜೆಟ್ 2018ರಲ್ಲಿ ರಾಜಧಾನಿ ಬೆಂಗಳೂರಿಗೆ ಸಾಕಷ್ಟು ಯೋಜನೆಗಳು ಘೋಷಣೆಯಾಗಿದ್ದು, ಈ ಯೋಜನೆಗಳ ಸಂಕ್ಷಿಪ್ತ ವಿವರ ಇಂತಿದೆ.
ಕೊಳಗೇರಿ ವಾಸಿಗಳಿಗೆ ಸೂರು ಕಲ್ಪಿಸುವ ಯೋಜನೆ. ಬೆಂಗಳೂರಿನಲ್ಲಿ ಬಡವರಿಗೆ ಸೂರು ಕಲ್ಪಿಸಲು ಬಹುಮಹಡಿ ಮನೆ ಯೋಜನೆ ಜಾರಿ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನ ಬಾರ್​ ಕೌನ್ಸಿಲ್​ ಚಟುವಟಿಕೆಗೆ 5 ಕೋಟಿ ಆರ್ಥಿಕ ನೆರವು, ಪೀಣ್ಯದಲ್ಲಿ ತ್ಯಾಜ್ಯವಸ್ತುಗಳ ಶುದ್ಧೀಕರಣ ಘಟಕ ಸ್ಥಾಪನೆ. ಇದಕ್ಕಾಗಿ ಸರ್ಕಾರದಿಂದ 10 ಕೋಟಿ ಹಣ ಮೀಸಲಿಡುವುದಾಗಿ ಘೋಷಣೆ ಮಾಡಲಾಗಿದೆ.
ಇನ್ನು ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ ಪ್ರಗತಿಯಲ್ಲಿದ್ದು, ಎರಡನೇ ಹಂತದಲ್ಲಿ 3000 ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳರು ನಗರ ಹೊರವಲಯದಲ್ಲಿ ಪೆರಿಫೆರಲ್​ ರಸ್ತೆ ನಿರ್ಮಾಣ, ಇದಕ್ಕಾಗಿ ಸರ್ಕಾರದಿಂದ ಅಂದಾಜು 11,950 ಕೋಟಿ ಸಂಗ್ರಹಕ್ಕೆ ಕ್ರಮ. ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ. ಮೀಸಲು. ಅಂತರ ಗಂಗಾ ಸೂಕ್ಷ್ಮ ನೀರಾವರಿ ನಿಗಮ ಸಹಭಾಗಿತ್ವದಲ್ಲಿ ಹನಿ ನೀರಾವರಿ. ಬೆಳ್ಳಂದೂರು ಕೆರೆಯ ನೀರನ್ನೂ ಬೆಂಗಳೂರು ಗ್ರಾಮಾಂತರ ಕೃಷಿಗೆ ಬಳಸಲು ಕ್ರಮ.
ಡಾ. ರಾಜಕುಮಾರ್​ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ ಸ್ಥಾಪನೆ. ಏಕೀಕೃತ ಭೂ ಸಾರಿಗೆ ಪ್ರಾಧಿಕಾರ ಸ್ಥಾಪನೆ ಉದ್ದೇಶ ಹೊಂದಲಾಗಿದೆ. ಬಿಎಂಆರ್​ಸಿಎಲ್​, ಬಿಎಂಟಿಸಿ, ಬಿಡಿಎ, ಬಿಬಿಎಂಪಿ ಇತ್ಯಾದಿ ಸಂಸ್ಥೆಗಳ ನಡುವೆ ಸಮನ್ವಯಕ್ಕೆ ಕ್ರಮ.
ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಯೂ ಸೇರಿದಂತೆ ಮೆಟ್ರೋ ಯೋಜನೆಗಾಗಿ 1 ಸಾವಿರ ಕೋಟಿ ಮೀಸಲು. ಜೆ.ಪಿ.ನಗರದಿಂದ ಕೆ.ಆರ್.ಪುರಂ 42.75 ಕಿ.ಮೀ, ಟೋಲ್ ಗೇಟ್​ನಿಂದ ಕಡಬಗೆರೆ 12.5 ಕಿ.ಮೀ, ಗೊಟ್ಟಿಗೆರೆಯಿಂದ ಬಸವಪುರ 3.07 ಕಿ.ಮೀ, ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್ 18.95 ಕಿ.ಮೀ, ಕೋಗಿಲು ಕ್ರಾಸ್​ನಿಂದ ರಾಜಾನುಕುಂಟೆ 10.6. ಕಿ.ಮೀ ಹಾಗೂ ಇಬ್ಬಲೂರಿನಿಂದ ಕರ್ಮಲ್ ರಾಮ್ 6.67 ಕಿ.ಮೀ, ಒಟ್ಟು 95 ಕಿ.ಮೀ ಮೆಟ್ರೊ ವಿಸ್ತರಣೆಗೆ ಸಮ್ಮತಿ ಸೂಚಿಸಲಾಗಿದೆ.
ಪರಿಸರ ಸ್ನೇಹಿ ಎಲೆಕ್ಟಿಕ್ ವಾಹನಗಳ ಉತ್ತೇಜನಕ್ಕಾಗಿ ಬೆಂಗಳೂರಿನಲ್ಲಿ 4 ಕೋಟಿ ವೆಚ್ಚದಲ್ಲಿ 100 ಚಾರ್ಜಿಂಗ್ ಘಟಕ ಸ್ಥಾಪನೆ.
ಬೆಂಗಳೂರಿನಲ್ಲಿ 6 ಎಲಿವೇಟೆಡ್​ ಕಾರಿಡಾರ್ ನಿರ್ಮಾಣ. 15,825 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಜಾರಿ. ಟ್ರಾಫಿಕ್​ ಕಂಟ್ರೋಲ್​​ಗೆ ಸಿಗ್ನಲ್​ ಫ್ರೀ ಕಾರಿಡಾರ್. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ಮೀಸಲು. ಬೆಂಗಳೂರು ಹೊರವಲಯದಲ್ಲಿ ಫೆರಿಫೆರಲ್​ ರಿಂಗ್ ರಸ್ತೆ  ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; ಮುಖ್ಯ CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ