ರಾಜ್ಯ ಬಜೆಟ್

ರಾಜ್ಯ ಬಜೆಟ್ 2023: ಸ್ವಿಗ್ಗಿ, ಅಮೆಜಾನ್ ನಂತಹ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ 4 ಲಕ್ಷ ರೂ. ಜೀವ ಮತ್ತು ಅಪಘಾತ ವಿಮೆ!

Sumana Upadhyaya

ಬೆಂಗಳೂರು: ನಗರವಾಸಿಗಳು ಸ್ವಿಗ್ಗಿ, ಝೊಮ್ಯಾಟೊ ಮತ್ತು ಅಮೆಜಾನ್ ನಂತಹ ಇ-ಕಾಮರ್ಸ್ ವೇದಿಕೆಗಳ ಮೂಲಕ ಆನ್ ಲೈನ್ ನಲ್ಲಿ ತಮ್ಮ ಇಷ್ಟದ ತಿಂಡಿ ತಿನಿಸುಗಳನ್ನು ಆರ್ಡರ್ ಮಾಡುವುದು ಹೆಚ್ಚಾಗುತ್ತಿದೆ. 

ಶರವೇಗದಲ್ಲಿ ನಾಗರಿಕರಿಗೆ ಆನ್ ಲೈನ್ ಸೇವೆ ತಲುಪಿಸಲು ಇ ಕಾಮರ್ಸ್ ವೇದಿಕೆಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತವೆ. ಫುಡ್ ಡೆಲಿವರಿ ಬಾಯ್ಸ್ ಗಳು ನಗರದ ಸಂಚಾರ ದಟ್ಟಣೆ ಮಧ್ಯೆ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ.

ಹೀಗೆ ಆನ್ ಲೈನ್ ಮೂಲಕ ಫುಡ್ ಡೆಲಿವರಿ ಮಾಡುವ ವೇಳೆ ಅಪಘಾತಕ್ಕೀಡಾದರೆ ಅಂತವರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ನಲ್ಲಿ ಇ ಕಾಮರ್ಸ್ ವೇದಿಕೆಗಳಾದ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್ ನಂತಹ ಕಂಪೆನಿಗಳಲ್ಲಿ ರೆಲಸ ಮಾಡುವ ಉದ್ಯೋಗಿಗಳಿಗೆ 4 ಲಕ್ಷ ರೂಪಾಯಿಗಳ ಜೀವ ಮತ್ತು ಅಪಘಾತ ವಿಮೆಯನ್ನು ಘೋಷಿಸಿದೆ.

SCROLL FOR NEXT