ಆದಾಯ ತೆರಿಗೆ-ನಿರ್ಮಲಾ ಸೀತಾರಾಮನ್ 
ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2023: ಆದಾಯ ತೆರಿಗೆ ವಿನಾಯಿತಿ ಮಿತಿ ರೂ.7 ಲಕ್ಷಕ್ಕೆ ಹೆಚ್ಚಳ, ತೆರಿಗೆಗೆ ಸಂಬಂಧಿಸಿದ 5 ಮುಖ್ಯ ಘೋಷಣೆಗಳು ಇಲ್ಲಿವೆ

ಕೇಂದ್ರ  ಬಜೆಟ್ 2023ರ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೂತನ ತೆರಿಗೆ ಸ್ಲಾಬ್ ಗಳನ್ನು ವಿವರಿಸಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷರೂ ಗೆ ಹೆಚ್ಚಳ ಮಾಡಿದ್ದಾರೆ.

ನವದೆಹಲಿ: ಕೇಂದ್ರ  ಬಜೆಟ್ 2023ರ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೂತನ ತೆರಿಗೆ ಸ್ಲಾಬ್ ಗಳನ್ನು ವಿವರಿಸಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷರೂ ಗೆ ಹೆಚ್ಚಳ ಮಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದು, ಹೊಸ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ  7 ಲಕ್ಷ ರೂ ವರೆಗೆ ತೆರಿಗೆ ವಿನಾಯ್ತಿ ಘೋಷಿಸಿದ್ದು ಮಧ್ಯಮ ವರ್ಗದಲ್ಲಿ ಹರ್ಷ ತಂದಿದೆ. 

ಆದಾಯ ತೆರಿಗೆಗೆ ಸಂಬಂಧಿಸಿದ 5 ಮುಖ್ಯ ಘೋಷಣೆಗಳು
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಮಹತ್ವದ ಕ್ರಮಗಳನ್ನು ಘೋಷಿಸಿದ್ದು ಅವುಗಳ ವಿವರ ಇಂತಿದೆ.

1) ವಿನಾಯ್ತಿ: 7 ಲಕ್ಷ ರೂ ವರೆಗೆ ಆದಾಯ ತೆರಿಗೆ ವಿನಾಯ್ತಿ

2) ಟ್ಯಾಕ್ಸ್​ ಸ್ಲ್ಯಾಬ್​ಗಳು: 
ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್​ ಸ್ಲ್ಯಾಬ್​ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದ್ದು, 3 ಲಕ್ಷ ರೂ ದಿಂದ ತೆರಿಗೆ ಹಂತ ಆರಂಭವಾಗಲಿದೆ. ಹೊಸ ತೆರಿಗೆ ಪದ್ಧತಿ (New Tax Regime) ಆದಾಯ ತೆರಿಗೆ ವಿನಾಯ್ತಿ ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ತೆರಿಗೆ ವಿವರಗಳನ್ನು ನೀಡಿದರು. ವಾರ್ಷಿಕ ₹ 9 ಲಕ್ಷ ವೇತನ ಪಡೆಯುವವರು ₹ 45,000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು.

ಹೊಸ ತೆರಿಗೆ ಪದ್ಧತಿಯೇ ಡಿಫಾಲ್ಟ್
ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ. ತೆರಿಗೆ ಸ್ಲ್ಯಾಬ್​ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಬದಲಿಸಲಾಗಿದೆ. ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ  7 ಲಕ್ಷ ರೂ ವರೆಗಿನ ತೆರಿಗೆ ವಿನಾಯ್ತಿ ಲಭ್ಯವಾಗಲಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಅತಿ ಹೆಚ್ಚು ಸರ್ಚಾರ್ಜ್ ದರವನ್ನು 37% ರಿಂದ 25% ಕ್ಕೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ.

ಹೊಸ ತೆರಿಗೆ ದರಗಳು
1. 3 ಲಕ್ಷ ರೂವರೆಗೆ – ತೆರಿಗೆ ಇಲ್ಲ

2. 3 ಲಕ್ಷ ರೂ ಯಿಂದ 6 ಲಕ್ಷ ರೂ ವರೆಗೆ – ಶೇ 5ರಷ್ಟು ತೆರಿಗೆ

3. 6 ರಿಂದ 9 ಲಕ್ಷ ರೂವರೆಗೆ – ಶೇ 10 ರಷ್ಟು ತೆರಿಗೆ

4. 9 ರಿಂದ 12 ಲಕ್ಷ ರೂ ವರೆಗೆ– ಶೇ 15ರಷ್ಟು ತೆರಿಗೆ

5.12 ರಿಂದ 15 ಲಕ್ಷ ರೂವರೆಗೆ – ಶೇ 20ರಷ್ಟು ತೆರಿಗೆ

6. 15 ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ ಹೇರಲಾಗಿದೆ.

3) ಸ್ಟಾಂಡರ್ಡ್​ ಡಿಡಕ್ಷನ್: 15.5 ಲಕ್ಷ ರೂ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ 52,500 ರೂ ಸ್ಟಾಂಡರ್ಡ್​ ಡಿಡಕ್ಷನ್ ಸೌಲಭ್ಯ ಸಿಗಲಿದೆ.

4) ಗರಿಷ್ಠ ತೆರಿಗೆ ಇಳಿಕೆ:
ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್​ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ ದೇಶದಲ್ಲಿರುವ ಗರಿಷ್ಠ ತೆರಿಗೆ ದರವು ಶೇ 39ಕ್ಕೆ ಮಿತಗೊಳ್ಳಲಿದೆ. ಪ್ರಸ್ತುತ ಅತಿ ಹೆಚ್ಚು ವೈಯಕ್ತಿಕ ತೆರಿಗೆ ದರ 42% ವಿಶ್ವದಲ್ಲೇ ಅತ್ಯಧಿಕವಾಗಿದೆ. ಅತಿ ಹೆಚ್ಚು ಆದಾಯ ಗಳಿಸುವವರಿಗೆ ಸರ್ಚಾರ್ಜ್ ನ್ನು 37% ರಿಂದ 25% ಕ್ಕೆ ಇಳಿಸಲಾಗಿದೆ. ಗರಿಷ್ಠ ತೆರಿಗೆ ಪ್ರಮಾಣವನ್ನು ಶೇಕಡಾ 39ಕ್ಕೆ ಇಳಿಸಲಾಗಿದೆ. “ನಮ್ಮ ದೇಶದಲ್ಲಿ ಅತ್ಯಧಿಕ ತೆರಿಗೆ ದರವು 42.74 ಶೇಕಡಾ. ಇದು ವಿಶ್ವದಲ್ಲೇ ಅತಿ ಹೆಚ್ಚು ಎನ್ನಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಅತ್ಯಧಿಕ ಸರ್ಚಾರ್ಜ್ ದರವನ್ನು ಶೇಕಡಾ 37 ರಿಂದ ಶೇಕಡಾ 25 ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ. ಇದು ಗರಿಷ್ಠ ತೆರಿಗೆ ದರವನ್ನು ಶೇಕಡಾ 39ಕ್ಕೆ ಇಳಿಸಲು ಕಾರಣವಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

5) ಲೀವ್ ಎನ್​ಕ್ಯಾಶ್​ಮೆಂಟ್ (ರಜೆ ನಗದೀಕರಣ): 
ನಿವೃತ್ತರಾದಾಗ ಸಿಗುವ ರಜೆ ನಗದೀಕರಣ (ಲೀವ್ ಎನ್​ಕ್ಯಾಶ್​ಮೆಂಟ್) ಸೌಲಭ್ಯದ ಮೇಲೆ ಈವರೆಗೆ  3 ಲಕ್ಷ ರೂಗೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು  25 ಲಕ್ಷ ರೂಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
 
ವಿಮಾ ಪಾಲಿಸಿಗಳು, ಆಸ್ತಿ ಮಾರಾಟದ ಮೇಲೆ ತೆರಿಗೆ
ದೊಡ್ಡಮೊತ್ತದ ವಿಮಾ ಪಾಲಿಸಿಗಳಿಗೆ ಇನ್ನು ಮುಂದೆ ತೆರಿಗೆ ವಿಧಿಸಲಾಗುವುದು. 10 ಕೋಟಿ ರೂಗೂ ಅಧಿಕ ಮೊತ್ತದ ಆಸ್ತಿ ಮಾರಾಟದಿಂದ ಸಿಗುವ ಲಾಭದ ಮೇಲೆ (ಕ್ಯಾಪಿಟನ್ ಗೇನ್) ತೆರಿಗೆ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ (Monthly income scheme - MIS) ಹೂಡಿಕೆ ಮಿತಿಯನ್ನು 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು 4.5 ಲಕ್ಷ ಹೂಡಿಕೆಗೆ ಮಾತ್ರ ಅವಕಾಶವಿತ್ತು. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ 15 ಲಕ್ಷದ ಮಿತಿಯನ್ನು ಹಾಲಿ ವರ್ಷದಿಂದ  30 ಲಕ್ಷ ರೂಗೆ ಕೇಂದ್ರ ಸರ್ಕಾರವು ವಿಸ್ತರಿಸಿದೆ. ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇಕಡಾ 7.5 ಬಡ್ಡಿ ನಿಗದಿಪಡಿಸಲಾಗಿದೆ. ಸುಲಭವಾಗಿ ಐಟಿ ರಿಟರ್ನ್ಸ್ ಸಲ್ಲಿಸಲು ಸರ್ಕಾರ ಹೊಸ ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್‌ಗಳನ್ನು ಪರಿಚಯಿಸಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT