ವಾಣಿಜ್ಯ

ಸೆನ್ಸೆಕ್ಸ್ ಕುಸಿತದ ನಡುವೆಯೂ ಡಾಲರ್ ಎದುರು ಚೇತರಿಕೆ ಕಂಡ ರುಪಾಯಿ

Srinivasamurthy VN

ನವದೆಹಲಿ: ಷೇರುಮಾರುಕಟ್ಟೆ ಕುಸಿತದ ನಡುವೆಯೂ ಅಮೆರಿಕ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯದಲ್ಲಿ ಮಂಗಳವಾರ ಚೇತರಿಕೆ ಕಂಡುಬಂದಿದೆ.

ಸೆನ್ಸೆಕ್ಸ್ ಸೋಮವಾರದಿಂದ ಸತತ ಇಳಿಕೆಯತ್ತ ಮುಖ ಮಾಡಿದ್ದು, ಮಂಗಳವಾರ ಕೂಡ ಬೆಳಗಿನ ವಹಿವಾಟಿನ ವೇಳೆ ಸೆನ್ಸೆಕ್ಸ್ ನಲ್ಲಿ 100 ಅಂಕಗಳ ಕುಸಿತಕಂಡಿತ್ತು. ಆದರೆ ಈ ಬೆಳವಣಿಗೆ  ರುಪಾಯಿ ಮೌಲ್ಯದ ಮೇಲೆ ಯಾವುದೇ ಪರಿಣಾಮ ಉಂಟುಮಾಡಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದಿರುವ ಹಿನ್ನಲೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 11  ಪೈಸೆಯಷ್ಟು ಚೇತರಿಸಿಕೊಂಡಿದೆ.

ಚೀನಾದ ಯುವಾನ್ ಕೂಡ 0.12ರಷ್ಟು ಚೇತರಿಸಿಕೊಂಡಿದ್ದು, ಜಪಾನ್ ನ ಯೆನ್ ಶೇ.015ರಷ್ಟು ಚೇತರಿಸಿಕೊಂಡಿದೆ. ಆದರೆ ಥಾಯ್ಲ್ ಲೆಂಡ್ ಮತ್ತು ಸಿಂಗಾಪುರ ಕರೆನ್ಸಿಗಳ ಮೌಲ್ಯದಲ್ಲಿ ಅಲ್ಪ  ಪ್ರಮಾಣದ ಇಳಿಕೆ ಕಂಡುಬಂದಿದೆ.

ಮತ್ತೆ 100 ಅಂಕ ಕಳೆದುಕೊಂಡ ಸೆನ್ಸೆಕ್ಸ್
ಸೋಮವಾರದ ವಹಿವಾಟಿನಲ್ಲಿ ಬರೊಬ್ಬರಿ 500 ಅಂಕಗಳಷ್ಟು ಕಳೆದುಕೊಂಡಿದ್ದ ಸೆನ್ಸೆಕ್ಸ್ ಮಂಗಳವಾರದ ಬೆಳಗಿನ ವಹಿವಾಟಿನ ವೇಳೆಗೆ ಮತ್ತೆ 104.15 ಅಂಕಗಳಷ್ಟು ಕುಸಿತಕಂಡು, 25,596  ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿಯಲ್ಲಿಯೂ ಕೂಡ 50 ಅಂಕಗಳ ಇಳಿಕೆ ಕಂಡುಬಂದಿದ್ದು, 7,770ಕ್ಕೆ ತಲುಪಿದೆ.

SCROLL FOR NEXT