ನವದೆಹಲಿ: ಜಾಗತಿಕ ಚಿನ್ನದ ಬೆಲೆ ಔನ್ಸ್ ಗೆ 1300 ಅಮೆರಿಕನ್ ಡಾಲರ್ ಗೂ ಹೆಚ್ಚಿದೆ. ಅಮೆರಿಕಾ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ಪರಿಣಾಮ, ಹಣಕಾಸಿನ ನೀತಿ ಬದಲಾವಣೆಯಾಗುವ ನಿಟ್ಟಿನಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದ ಈ ಹಳದಿ ಲೋಹದ ಹೂಡಿಕೆಯಲ್ಲಿ ಅತ್ಯಾಸಕ್ತಿ ಕಂಡುಬಂದಿದ್ದು ಈ ಹೆಚ್ಚಿನ ಬೆಲೆಗೆ ಕಾರಣವಾಗಿದೆ ಎಂದು ವಿಶ್ವ ಚಿನ್ನದ ಸಮಿತಿ ತಿಳಿಸಿದೆ.
ರಾಷ್ಟ್ರದ ರಾಜಧಾನಿಯಲ್ಲಿ 10 ಗ್ರಾಮ್ ಚಿನ್ನದ ಬೆಲೆ 31,750 ಕ್ಕೆ ಏರಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಕಂಡ ಅತಿ ಹೆಚ್ಚು ಬೆಲೆ ಎಂದು ತಿಳಿದುಬಂದಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಇಂದು ಟ್ರಂಪ್ ಅವರ ಗೆಲುವು ಘೋಷಣೆಯಾಗಿದ್ದು, ರಾಜಕೀಯ ಮತ್ತು ಹಣಕಾಸು ನೀತಿಗಳಲ್ಲಿ ಬದಲಾವಣೆಯ ಸಾಧ್ಯತೆ ಈ ಏರಿಕೆಗೆ ಕಾರಣ ಎಂದು ಊಹಿಸಲಾಗಿದೆ.