ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ 
ವಾಣಿಜ್ಯ

ನೆಟ್​ಫ್ಲಿಕ್ಸ್ ನಲ್ಲಿ ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಪ್ರಸಾರ: ಅಮೆಜಾನ್ ವಿಡಿಯೋ ದಲ್ಲೂ ನೋಡಬಹುದು!

ತಲೈವಿ ಸಿನೆಮಾವನ್ನು ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​​ ಎರಡೂ ಒಟಿಟಿ ಸಂಸ್ಥೆಗಳು ಖರೀದಿ ಮಾಡಿವೆ. ನೆಟ್ ಫ್ಲಿಕ್ಸ್ ನಲ್ಲಿ ಹಿಂದಿ ಅವತರಣಿಕೆ ತೆರೆ ಕಾಣುತ್ತಿದ್ದರೆ, ತಮಿಳು ಭಾಷೆಯ ಅವತರಣಿಕೆ ಅಮೆಜಾನ್​ನಲ್ಲಿ ಪ್ರಸಾರ ಕಾಣಲಿದೆ.

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತಾದ ತಲೈವಿ ಸಿನಿಮಾ ಇಂದಿನಿಂದ ನೆಟ್​ಫ್ಲಿಕ್ಸ್ ನಲ್ಲಿ ಪ್ರಸಾರಗೊಳ್ಳುತ್ತಿದೆ. ಈ ಕುರಿತು ತಲೈವಿ ನಾಯಕಿ ಬಾಲಿವುಡ್ ನಟಿ ಕಂಗನಾ ರಣಾವತ್ 'ಕೊ'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸೆ.10, ಗಣೇಶ ಚತುರ್ಥಿ ದಿನದಂದೇ ‘ತಲೈವಿ’ ಸಿನಿಮಾ ಥಿಯೇಟರುಗಳಲ್ಲಿ ಬಿಡುಗಡೆಗೊಂಡಿತ್ತು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಲೈವಿ ಮೂಡಿ ಬಂದಿದೆ. 

ತಲೈವಿ ಸಿನೆಮಾವನ್ನು ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​​ ಎರಡೂ ಒಟಿಟಿ ಸಂಸ್ಥೆಗಳು ಖರೀದಿ ಮಾಡಿವೆ. ಸಾಮಾನ್ಯವಾಗಿ ಒಂದು ಸಿನಿಮಾ ಒಂದೇ ಡಿಜಿಟಲ್​ ಫ್ಲಾರ್ಟ್​ಫಾರ್ಮ್​ನಲ್ಲಿ ಪ್ರಸಾರ ಕಾಣುತ್ತಿತ್ತು. ಇದೇ ಮೊದಲ ಬಾರಿಗೆ ತಲೈವಿ ಸಿನಿಮಾ ಎರಡು ಒಟಿಟಿ ಫ್ಲಾರ್ಟ್​ಫಾರ್ಮ್​ನಲ್ಲಿ ತೆರೆ ಕಾಣುತ್ತಿವೆ. 

ನೆಟ್ ಫ್ಲಿಕ್ಸ್ ನಲ್ಲಿ ಹಿಂದಿ ಅವತರಣಿಕೆ ತೆರೆ ಕಾಣುತ್ತಿದ್ದರೆ, ತಮಿಳು ಭಾಷೆಯ ಅವತರಣಿಕೆ ಅಮೆಜಾನ್​ನಲ್ಲಿ ಪ್ರಸಾರ ಕಾಣಲಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ಅಭಿನಯಿಸಿದ್ದರೆ,  ಎಂ.ಜಿ. ರಾಮಚಂದ್ರನ್​ ಪಾತ್ರದಲ್ಲಿ ಅರವಿಂದ್​ ಸ್ವಾಮಿ ಹಾಗೂ ಎಂ. ಕರುಣಾನಿಧಿಯಾಗಿ ನಾಸರ್​ ಬಣ್ಣ ಹಚ್ಚಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಚುನಾವಣಾ ಆಯೋಗಕ್ಕೆ ಸಲ್ಲಿಸಿದ 89 ಲಕ್ಷ ದೂರುಗಳು ತಿರಸ್ಕೃತ; ಮತ್ತೆ ಎಸ್‌ಐಆರ್ ನಡೆಸಿ: ಕಾಂಗ್ರೆಸ್ ಆಗ್ರಹ

ಉಪ್ಪಾರ ಸಮುದಾಯ STಗೆ ಸೇರ್ಪಡೆ: ಶೀಘ್ರದಲ್ಲೇ ಕೇಂದ್ರಕ್ಕೆ ಶಿಫಾರಸು - ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

SCROLL FOR NEXT