ಅದಾನಿ 
ವಾಣಿಜ್ಯ

ಅದಾನಿ ಡೇಟಾ ನೆಟ್ವರ್ಕ್ ಗೆ ಪೂರ್ಣ ಪ್ರಮಾಣದ ಟೆಲಿಕಾಮ್ ಸೇವೆಗಳ ಪರವಾನಗಿ 

ಅದಾನಿ ಡೇಟಾ ನೆಟ್ವರ್ಕ್ ಗೆ ಪೂರ್ಣ ಪ್ರಮಾಣದ ಟೆಲಿಕಾಮ್ ಸೇವೆಗಳ ಪರವಾನಗಿಯನ್ನು ನೀಡಲಾಗಿದೆ. 

ನವದೆಹಲಿ: ಅದಾನಿ ಡೇಟಾ ನೆಟ್ವರ್ಕ್ ಗೆ ಪೂರ್ಣ ಪ್ರಮಾಣದ ಟೆಲಿಕಾಮ್ ಸೇವೆಗಳ ಪರವಾನಗಿಯನ್ನು ನೀಡಲಾಗಿದೆ. ಈ ಪರವಾನಗಿ ಮೂಲಕ ದೇಶದಲ್ಲಿ ಟೆಲಿಕಾಮ್ ಸೇವೆಗಳನ್ನು ಅದಾನಿ ಡೇಟಾ ನೆಟ್ವರ್ಕ್ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. 

ಅದಾನಿ ಸಮೂಹ ಇತ್ತೀಚಿನ ಹರಾಜು ಪ್ರಕ್ರಿಯೆಯಲ್ಲಿ ಸ್ಪೆಕ್ಟ್ರಮ್ ಖರೀದಿಯ ಮೂಲಕ ಟೆಲಿಕಾಮ್ ಕ್ಷೇತ್ರಕ್ಕೆ ಎಂಟ್ರಿ ನೀಡಿದೆ. ಮತ್ತೊಬ್ಬ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಪರವಾನಗಿಯನ್ನು ಸೋಮವಾರ ನೀಡಲಾಗಿದೆ. ಈ ಕುರಿತ ಇ-ಮೇಲ್ ಪ್ರಶ್ನೆಗಳಿಗೆ ಅದಾನಿ ಸಮೂಹ ಪ್ರತಿಕ್ರಿಯೆ ನೀಡಿಲ್ಲ. 

ಅದಾನಿ ಡೇಟಾ ನೆಟ್ವರ್ಕ್ ಲಿಮಿಟೆಡ್ (ಎಡಿಎನ್ಎಲ್) 26 ಜಿಹೆಚ್ ಝೆಡ್ ಮಿಲಿಮೀಟರ್ ವೇವ್ ಬ್ಯಾಂಡ್ ನಲ್ಲಿ 400 ಎಂಹೆಚ್ ಝೆಡ್ ಸ್ಪೆಕ್ಟ್ರಮ್ ನ್ನು 20 ವರ್ಷಗಳಿಗೆ 212 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. 

ಏರ್ ವೇವ್ ಗಳನ್ನು ತನ್ನ ಡೇಟಾ ಸೆಂಟರ್ ಗಳಿಗೆ ಹಾಗೂ ತನ್ನ ಉದ್ಯಮಗಳಿಗೆ ನೆರವಾಗುವಂತೆ ಸೂಪರ್ ಆಪ್ ಗಳಿಗೆ ಬಳಕೆ ಮಾಡಲು ಯೋಜನೆ ಹೊಂದಿರುವುದಾಗಿ ಅದಾನಿ ಸಮೂಹ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli

IPL 2026: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಕಾಡೆ ಮಲಗಿದ LSG, ಗೆದ್ದ RR ಪ್ಲೇ ಆಫ್ ಕನಸು ಜೀವಂತ!

ಮಾರ್ತಾಂಡ ಆನೆ ಕೊಂದ ಕಂಜನ್ ದಸರಾದಿಂದ ಶಾಶ್ವತ ನಿಷೇಧ: ಸಚಿವ ಈಶ್ವರ್ ಖಂಡ್ರೆ ಆದೇಶ

SCROLL FOR NEXT