ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಚಿನ್ನದ ಬೆಲೆ ಭಾರೀ ಏರಿಕೆ: ಇಂದಿನ ದರ ಇಂತಿದೆ

ಸತತ 2 ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರತೀ ಗ್ರಾಂಗೆ 27 ರೂ ಏರಿಕೆ ಕಂಡಿದೆ.

ಚಿನ್ನದ ದರ ಏರಿಕೆ
Srinivasa Murthy VN
Updated On : 14 Mar 2024, 12:38 pm

ಬೆಂಗಳೂರು: ಸತತ 2 ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರತೀ ಗ್ರಾಂಗೆ 27 ರೂ ಏರಿಕೆ ಕಂಡಿದೆ.

ಹೌದು.. ಕಳೆದ ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಚಿನ್ನದ ಬೆಲೆ ಗುರುವಾರ (ಮಾರ್ಚ್‌ 14) ಏರಿಕೆ (Gold Rate Today) ಕಂಡಿದೆ.

ಬೆಂಗಳೂರಿನಲ್ಲಿ (Gold Rate In Bengaluru) 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ. ಏರಿಕೆಯಾಗಿದ್ದು, 24 ಕ್ಯಾರಟ್‌ನ ಚಿನ್ನದ ಬೆಲೆಯು 27 ರೂ. ಏರಿಕೆಯಾಗಿದೆ. ಇದರೊಂದಿಗೆ 22 ಕ್ಯಾರಟ್‌ನ ಗ್ರಾಂ ಚಿನ್ನಕ್ಕೆ 6,060 ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದರ 6,611 ರೂ. ಆಗಿದೆ

Advertisement

Advertisement

Also Read

ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಕೆ, ಗಗನಕ್ಕೇರುತ್ತಿರುವ ಚಿನ್ನದ ದರ: ಹಳ್ಳ ಹಿಡಿಯಿತಾ ಸರ್ಕಾರದ 'ಸಪ್ತಪದಿ'!

ಬೆಂಗಳೂರಿನಲ್ಲಿ ಬುಧವಾರ (ಮಾರ್ಚ್‌ 13) ಚಿನ್ನದ ಬೆಲೆ ಇಳಿಕೆಯಾಗಿತ್ತು. ಪ್ರತಿ ಗ್ರಾಂ 22 ಕ್ಯಾರಟ್‌ ಚಿನ್ನಕ್ಕೆ 39 ರೂ. ಹಾಗೂ 24 ಕ್ಯಾರಟ್‌ಗೆ 42 ರೂ. ಇಳಿಕೆಯಾಗಿತ್ತು. ಮಂಗಳವಾರ (ಮಾರ್ಚ್‌ 12) ಕೇವಲ ಒಂದು ರೂ. ಇಳಿಕೆಯಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಇಂದು ಕೂಡ ಬೆಳ್ಳಿಯ ಬೆಲೆಯು ಒಂದು ಗ್ರಾಂಗೆ 74.50 ರೂ. ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments