ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತೆ ಕುಸಿತವಾಗಿದ್ದು, ಡಾಲರ್ ಎದುರು 87.66 ರೂಗೆ ಕುಸಿತವಾಗಿದೆ.
ಭಾರತದ ಎದುರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿರುವ ಹೆಚ್ಚುವರಿ ಸುಂಕದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಭಾರತೀಯ ರೂಪಾಯಿ ಮೌಲ್ಯ ಕುಸಿತವಾಗಿದೆ. ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆಯಷ್ಟು ಕುಸಿತವಾಗಿದ್ದು, 87.66 ರೂಗೆ ಮೌಲ್ಯ ಇಳಿಕೆಯಾಗಿದೆ.
ಆಮದುದಾರರಿಂದ ಡಾಲರ್ ಬೇಡಿಕೆ ಮುಂದುವರಿದಿರುವುದು ಮತ್ತು ಕಚ್ಚಾ ತೈಲ ಬೆಲೆಗಳಲ್ಲಿ ಚೇತರಿಕೆ ಕಂಡುಬಂದ ಕಾರಣ ರೂಪಾಯಿ ಮೌಲ್ಯ ಸೋಮವಾರ ಡಾಲರ್ ವಿರುದ್ಧ ಇಳಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ಕಚ್ಚಾ ತೈಲ ಬೆಲೆಗಳು, ಆಮದುದಾರರಿಂದ ಡಾಲರ್ ಬೇಡಿಕೆ ಮತ್ತು ವಿದೇಶಿ ನಿಧಿಯ ಹೊರಹರಿವು ಧನಾತ್ಮಕವಾಗಿದ್ದರಿಂದ ರೂಪಾಯಿ ಆರಂಭಿಕ ಲಾಭವನ್ನು ಕಡಿಮೆ ಮಾಡಿಕೊಂಡಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂದು ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ತನ್ನ ವಹಿವಾಟನ್ನು 87.56 ರೂನೊಂದಿಗೆ ತೆರೆದು ದಿನದಲ್ಲಿ 87.48 ರಿಂದ 87.66 ರ ವ್ಯಾಪ್ತಿಯಲ್ಲಿ ಚಲಿಸಿ ಅಂತಿಮವಾಗಿ 87.66ರೂ ಗೆ ಕುಸಿತವಾಗಿ ತನ್ನ ದೈನಂದಿನ ವಹಿವಾಟು ಕೊನೆಗೊಳಿಸಿತು. ಆ ಮೂಲಕ ರೂಪಾಯಿ ದಿನದ ವಹಿವಾಟು ಅಂತ್ಯದ ವೇಳೆಗೆ 8 ಪೈಸೆ ಕುಸಿತವಾದಂತಾಗಿದೆ.