ಹೆಚ್ ಎಎಲ್ ಸಾಂದರ್ಭಿಕ ಚಿತ್ರ 
ವಾಣಿಜ್ಯ

2030ರ ವೇಳೆಗೆ 2.2 ಲಕ್ಷ ಕೋಟಿ ರೂ ಮೊತ್ತದ ಆರ್ಡರ್ ಮೇಲೆ HAL ಕಣ್ಣು!

ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಕಂಪನಿಯು ರೂ. 55,000 ಕೋಟಿ ಮೊತ್ತದ ಆರ್ಡರ್‌ಗಳನ್ನು ಸ್ವೀಕರಿಸಿದೆ. ಮುಂದಿನ ಐದರಿಂದ ಆರು ತಿಂಗಳಲ್ಲಿ ಇನ್ನೂ ರೂ. 1.2 ಲಕ್ಷ ಕೋಟಿ ಮೊತ್ತದ ಆರ್ಡರ್ ಅಂತಿಮಗೊಳಿಸುವ ನಿರೀಕ್ಷೆ.

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ರೂ. 1.2 ಲಕ್ಷ ಕೋಟಿ ಮೊತ್ತದ ಆರ್ಡರ್ ಸ್ವೀಕರಿಸಿದ್ದು, ಮುಂಬರುವ ವರ್ಷಗಳಲ್ಲಿ ಮತ್ತೆ ರೂ. 1 ಲಕ್ಷ ಕೋಟಿ ಆರ್ಡರ್ ಬರುವ ನಿರೀಕ್ಷೆಯಿದೆ. ಒಟ್ಟಾರೇ 2030 ರ ವೇಳೆಗೆ ರೂ. 2.2 ಲಕ್ಷ ಕೋಟಿ ಮೊತ್ತದ ಆರ್ಡರ್ ಮೇಲೆ ಗುರಿ ಹೊಂದಲಾಗಿದೆ ಎಂದು ಮಂಗಳವಾರ ಪ್ರಕಟಿಸಿದೆ.

ಏರೋ ಇಂಡಿಯಾ 2025ರ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೆಚ್ ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಕೆ ಸುನಿಲ್, ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಕಂಪನಿಯು ರೂ. 55,000 ಕೋಟಿ ಮೊತ್ತದ ಆರ್ಡರ್‌ಗಳನ್ನು ಸ್ವೀಕರಿಸಿದೆ. ಮುಂದಿನ ಐದರಿಂದ ಆರು ತಿಂಗಳಲ್ಲಿ ಇನ್ನೂ ರೂ. 1.2 ಲಕ್ಷ ಕೋಟಿ ಮೊತ್ತದ ಆರ್ಡರ್ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದರು.

ತನ್ನ ಉತ್ಪನ್ನಗಳ ನವೀಕರಣಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವಾರ್ಷಿಕವಾಗಿ ರೂ. 2.500 ಕೋಟಿಯನ್ನು ಹೆಚ್ಎಎಲ್ ವೆಚ್ಚ ಮಾಡುತ್ತಿದ್ದು, ನಾವೀನ್ಯತೆಗೆ ಕಂಪನಿ ಬದ್ಧವಾಗಿರುವುದಾಗಿ ಅವರು ತಿಳಿಸಿದರು.

ಎರಡು ಪ್ರಮುಖ ಒಪ್ಪಂದಗಳ ಬಗ್ಗೆ ವಿವರಗಳನ್ನು ಹಂಚಿಕೊಂಡ ಸುನಿಲ್, ಅವುಗಳಲ್ಲಿ ಒಂದು 97 ಲಘು ಯುದ್ಧ ವಿಮಾನ (ತೇಜಸ್) ಮತ್ತು 156 ಲಘು ಯುದ್ಧ ಹೆಲಿಕಾಪ್ಟರ್‌ಗಳಿಗಾಗಿ (ಪ್ರಚಂಡ) ಆರ್ಡರ್ ಬಂದಿದೆ. ಎರಡೂ ಕಡೆಯೂ ಮಾತುಕತೆ ಮುಂದುವರೆದಿದ್ದು, ಮುಂದಿನ ಐದರಿಂದ ಆರು ತಿಂಗಳೊಳಗೆ ಅವುಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದರು.

ಕಂಪನಿಯು ಸುಖೋಯ್ ವಿಮಾನಕ್ಕಾಗಿ 240 ಎಂಜಿನ್‌ಗಳನ್ನು ತಯಾರಿಸುತ್ತಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು HAL ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಲಘು ಯುದ್ಧ ವಿಮಾನ (ಎಲ್‌ಸಿಎ) ತಯಾರಿಕೆಗಾಗಿ ಬೆಂಗಳೂರಿನಲ್ಲಿ ಎರಡು ಮತ್ತು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೂರು ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೇ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅದರ ಗುರಿಗಳನ್ನು ಸಾಧಿಸಲು ಟಾಟಾ ಮತ್ತು L&T ಸೇರಿದಂತೆ ಖಾಸಗಿ ಸಂಸ್ಥೆಗಳೊಂದಿಗೆ ಕಂಪನಿ ಸಹಯೋಗ ಹೊಂದಿದೆ. ಆರ್ಡರ್ ಕಾರ್ಯಗತಗೊಳಿಸಲು ಮೂರು ಹೊಸ ಘಟಕಗಳನ್ನು ಸ್ಥಾಪಿಸುವ ಮೂಲಕ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿದ್ದೇವೆ. ಇದರೊಂದಿಗೆ 2026 ರ ವೇಳೆಗೆ 26 ವಿಮಾನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಸುನಿಲ್ ಹೇಳಿದರು.

2028ರ ಆರಂಭದಲ್ಲಿ ಮೊದಲ ವಿಮಾನ ತಯಾರಾಗುವ ನಿರೀಕ್ಷೆಯಿದೆ. ತದನಂತರ ಪರೀಕ್ಷೆ ನಡೆಸಲಾಗುವುದು, 2034 ರ ವೇಳೆಗೆ ವಿಮಾನಗಳ ಉತ್ಪಾದನೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೂ ಇದು ಅಭಿವೃದ್ಧಿಯ ವೇಗ ಮತ್ತು ಹಾರಾಟದ ಪರೀಕ್ಷೆಯನ್ನು ಅವಲಂಬಿಸಿರುತ್ತದೆ. ಯೋಜನೆಗೆ ಮಂಜೂರಾತಿ ದೊರೆತಿದ್ದು, ತ್ವರಿತ ವೇಗದಲ್ಲಿ ಮುನ್ನಡೆಯುತ್ತಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT