ಲಂಡನ್: ಹಿಂದೂಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ ಅವರು ಲಂಡನ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಆಪ್ತ ಮೂಲಗಳು ಮಂಗಳವಾರ ತಿಳಿಸಿವೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ವ್ಯವಹಾರ ವಲಯದಲ್ಲಿ 'ಜಿಪಿ' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಗೋಪಿಚಂದ್ ಪಿ. ಹಿಂದೂಜಾ ಅವರು ಕಳೆದ ಕೆಲವು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಅವರು ಹೇಳಿದ್ದಾರೆ.
ಹಿಂದೂಜಾ ಕುಟುಂಬದ ಎರಡನೇ ತಲೆಮಾರಿಗೆ ಸೇರಿದ ಗೋಪಿಚಂದ್ ಅವರು, ಮೇ 2023 ರಲ್ಲಿ ತಮ್ಮ ಹಿರಿಯ ಸಹೋದರ ಶ್ರೀಚಂದ್ ಅವರ ಮರಣದ ನಂತರ ಹಿಂದುಜಾ ಗ್ರೂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಗೋಪಿಚಂದ್ ಹಿಂದುಜಾ ಅವರು ಪತ್ನಿ ಸುನೀತಾ, ಪುತ್ರರಾದ ಸಂಜಯ್ ಮತ್ತು ಧೀರಜ್ ಹಾಗೂ ಮಗಳು ರೀಟಾ ಅವರನ್ನು ಅಗಲಿದ್ದಾರೆ.