ಕಚ್ಚಾ ತೈಲ ಬೆಲೆ ಇಳಿಕೆ (ಸಾಂದರ್ಭಿಕ ಚಿತ್ರ) 
ವಾಣಿಜ್ಯ

West Asia conflict: ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ಭಾರೀ ಕುಸಿತ..!

ಸುಮಾರು 35 ದಿನಗಳ ಕಾಲ ನಡೆದ ಈ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿತ್ತು. ಯುದ್ಧಕ್ಕೂ ಮುನ್ನ ಬ್ರೆಂಟ್ ಕಚ್ಚಾ ತೈಲದ ಬೆಲೆ 62 ರಿಂದ 65 ಡಾಲರ್ ನಡುವೆಯೇ ಇತ್ತು. ಆದರೆ ಉದ್ವಿಗ್ನತೆ ಹೆಚ್ಚಾದಂತೆ ಬೆಲೆಗಳು ವೇಗವಾಗಿ ಏರಿಕೆಯಾಗಿ, ಒಂದು ಹಂತದಲ್ಲಿ 119 ಡಾಲರ್ ಮಟ್ಟಕ್ಕೂ ತಲುಪಿದ್ದವು.

ಮಧ್ಯಪ್ರಾಚ್ಯ ಯುದ್ಧ ಪರಿಣಾಮ ಗಗನಕ್ಕೇರಿದ್ದ ಜಾಗತಿಕ ಕಚ್ಚಾ ತೈಲ ಬೆಲೆಗಳು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ಘೋಷಣೆ ಮಾಡಿದ ತಕ್ಷಣವೇ ತೀವ್ರ ಕುಸಿತ ಕಂಡಿವೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ 13 ಶೇಕಡಕ್ಕೂ ಹೆಚ್ಚು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 94.94 ಡಾಲರ್ ಮಟ್ಟದಲ್ಲಿ ವಹಿವಾಟಾಗುತ್ತಿದೆ. ಇದು 13.62 ಶೇಕಡಾ ಅಥವಾ ಸುಮಾರು 14.88 ಡಾಲರ್ ಇಳಿಕೆಯಾಗಿದೆ. ಇದೇ ವೇಳೆ ಅಮೆರಿಕದ ಡಬ್ಲ್ಯುಟಿಐ ಕಚ್ಚಾ ತೈಲವೂ 14.60 ಶೇಕಡಾ ಅಥವಾ 16.49 ಡಾಲರ್ ಕುಸಿದು, ಪ್ರತಿ ಬ್ಯಾರೆಲ್‌ಗೆ 96.46 ಡಾಲರ್ ಮಟ್ಟಕ್ಕೆ ತಲುಪಿದೆ.

ಸುಮಾರು 35 ದಿನಗಳ ಕಾಲ ನಡೆದ ಈ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿತ್ತು. ಯುದ್ಧಕ್ಕೂ ಮುನ್ನ ಬ್ರೆಂಟ್ ಕಚ್ಚಾ ತೈಲದ ಬೆಲೆ 62 ರಿಂದ 65 ಡಾಲರ್ ನಡುವೆಯೇ ಇತ್ತು. ಆದರೆ ಉದ್ವಿಗ್ನತೆ ಹೆಚ್ಚಾದಂತೆ ಬೆಲೆಗಳು ವೇಗವಾಗಿ ಏರಿಕೆಯಾಗಿ, ಒಂದು ಹಂತದಲ್ಲಿ 119 ಡಾಲರ್ ಮಟ್ಟಕ್ಕೂ ತಲುಪಿದ್ದವು. ಇತ್ತೀಚಿನ ವಾರಗಳಲ್ಲಿ 110 ಡಾಲರ್ ತಲುಪಿತ್ತು.

ಈ ಏರಿಕೆಗೆ ಪ್ರಮುಖ ಕಾರಣ ಯುದ್ಧದಿಂದ ಉಂಟಾದ ಸರಬರಾಜು ಅಡಚಣೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ತೈಲ ಸರಬರಾಜು ಮೇಲೆ ಆತಂಕ ಹೆಚ್ಚಾಗಿತ್ತು. ಜಗತ್ತಿನ ಮಹತ್ವದ ತೈಲ ಸಾಗಣೆ ಈ ಮಾರ್ಗದ ಮೂಲಕ ನಡೆಯುವುದರಿಂದ, ಇಲ್ಲಿ ಎದುರಾಗುವ ಯಾವುದೇ ವ್ಯತ್ಯಯವು ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಆದರೆ ಕದನ ವಿರಾಮದ ಘೋಷಣೆಯಿಂದ ಈ ಆತಂಕ ತಗ್ಗಿದಂತಾಗಿದ್ದು, ಮಾರುಕಟ್ಟೆಯಿಂದ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ಈ ನಡುವೆ ಬೆಲೆಗಳು ಕುಸಿದ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಚೇತರಿಕೆ ಕಂಡುಬಂದಿದೆ. ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳಿಗೆ ಇದು ಒಳ್ಳೆಯ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ. ಭಾರತದಲ್ಲಿಯೂ ಇಂಧನ ದರಗಳು ಇಳಿಯುವ ನಿರೀಕ್ಷೆಗಳು ಮೂಡಿವೆ. ಆದರೆ, ಈ ಇಳಿಕೆ ದೀರ್ಘಕಾಲಿಕವಾಗಿರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಸ್ಲಾಮಾಬಾದ್‌ನಲ್ಲಿ ಇರಾನ್-ಅಮೆರಿಕಾ ನಡುವೆ ಶುಕ್ರವಾರ (ಏ.10) ಮಾತುಕತೆಗೆ ನಡೆಯಲಿದ್ದು, ಈ ಬೆಳವಣಿಗೆ ವಿಶ್ವದ ಗಮನ ಸೆಳೆದಿದೆ.

ಈ ನಡುವೆ ಜಾಗತಿಕ ಷೇರುಪೇಟೆಯಲ್ಲಿ ಗೂಳಿ ಓಟ ಆರಂಭವಾಗಿದ್ದು, ಎನ್‌ಎಸ್‌ಇ ನಿಫ್ಟಿ 800ಕ್ಕೂ ಅಧಿಕ ಪಾಯಿಂಟ್'ಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.

ಜಪಾನ್‌ನ ನಿಕ್ಕಿ 225 ಪಾಯಿಂಟ್ ಶೇ 4.8 ರಷ್ಟು, ದಕ್ಷಿಣ ಕೊರಿಯಾದ ಕಾಸ್ಪಿ ಶೇ 5.6ರಷ್ಟು ಏರಿಕೆ ಕಂಡಿವೆ. ರಾತ್ರಿ 9:30ರ ಹೊತ್ತಿಗೆ ಅಮೆರಿಕ ಎಸ್ ಅಂಡ್ ಪಿ 500 ಪಾಯಿಂಟ್ ಏರಿಕೆ ಕಂಡಿತ್ತು. ಡೌ ಫ್ಯೂಚರ್ಸ್ ಶೇ 2 ರಷ್ಟು ಏರಿಕೆ ಕಂಡಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದಿಂದ ಹಿಂದೆ ಸರಿದ ಅಮೆರಿಕಾ-ಇರಾನ್: ಪಾಕ್ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ, ಹಾರ್ಮುಜ್ ಮಾರ್ಗ ಮತ್ತೆ ರೀಓಪನ್..!

West-Asia war: 2 ವಾರಗಳ ಕದನ ವಿರಾಮಕ್ಕೆ ಅಮೆರಿಕಾ-ಇರಾನ್ ಒಪ್ಪಿಗೆ, ಟೆಹ್ರಾನ್ ಮುಂದಿಟ್ಟಿರುವ ಡಿಮ್ಯಾಂಡ್ ಗಳು ಇವೇ ನೋಡಿ..!

ಇರಾನ್ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ: ಲೆಬನಾನ್ ಹೊರಗುಳಿಸಿದ ಬೆಂಜಮಿನ್ ನೆತನ್ಯಾಹು; ಇಸ್ರೇಲ್ ದ್ವಂದ್ವ ನಿಲುವು..!

ಅಮೆರಿಕ- ಇರಾನ್ ನಡುವೆ ಯಶಸ್ವಿ ಸಂಧಾನ: ಏ.10ಕ್ಕೆ ಇಸ್ಲಾಮಾಬಾದ್ ನಲ್ಲಿ ಮಹತ್ವದ ಮಾತುಕತೆ, ಪಾಕಿಸ್ತಾನದಿಂದ ಅಧಿಕೃತ ಆಹ್ವಾನ!

ಯುದ್ಧ ಇನ್ನೂ ಮುಗಿದಿಲ್ಲ, ನಿಮ್ಮ ಕೈಗಳು ಸದಾ ಟ್ರಿಗರ್ ಮೇಲಿರಲಿ: ಕದನ ವಿರಾಮ ಬಳಿಕವೂ ಕಠಿಣ ಸಂದೇಶ ನೀಡಿದ ಇರಾನ್ ಸರ್ವೋಚ್ಛ ನಾಯಕ

SCROLL FOR NEXT