ಭಾರತೀಯ ಷೇರುಮಾರುಕಟ್ಟೆ 
ವಾಣಿಜ್ಯ

Indian Stock markets: ಇರಾನ್ ಗೊಂದಲದ ನಡುವೆ ಸೆನ್ಸೆಕ್ಸ್ 1260 ಅಂಕ ಏರಿಕೆ; 9.41 ಲಕ್ಷ ಕೋಟಿ ರೂ ಲಾಭ

ಇರಾನ್ ಗೊಂದಲದ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಬುಧವಾರವೂ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತು ಗೊಂದಲಗಳ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ವಹಿವಾಟು ನಡೆಸಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 9.41 ಲಕ್ಷ ಕೋಟಿ ಲಾಭವಾಗಿದೆ.

ಹೌದು.. ಇರಾನ್ ಗೊಂದಲದ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಬುಧವಾರವೂ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.64ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.63ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 1,263.67ಅಂಕಗಳ ಏರಿಕೆಯೊಂದಿಗೆ 78,111.24 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 388.65 ಅಂಕಗಳ ಏರಿಕೆಯೊಂದಿಗೆ 24,231.30 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಇಂಟರ್‌ಗ್ಲೋಬ್ ಏವಿಯೇಷನ್, ಎಟರ್ನಲ್, ಪವರ್ ಗ್ರಿಡ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಮತ್ತು ಲಾರ್ಸೆನ್ & ಟೂಬ್ರೊ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

9.41 ಲಕ್ಷ ಕೋಟಿ ಲಾಭ

ಇಂದಿನ ಮಾರುಕಟ್ಟೆ ಏರಿಕೆಯಿಂದಾಗಿ ಹೂಡಿಕೆದಾರರಿಗೆ ಇಂದು ಒಂದೇ ದಿನ 9.41 ಲಕ್ಷ ಕೋಟಿ ಲಾಭಾಂಶ ಬಂದಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣಕ್ಕೆ 9 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತ ಲಾಭವಾಗಿ ಬಂದಿದ್ದು, ಆ ಮೂಲಕ ಮಾರುಕಟ್ಟೆ ಬಂಡವಾಳೀಕರಣ ಸುಮಾರು 458 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಚೀನಾ, ಇಡೀ ಜಗತ್ತಿಗೆ' ಹಾರ್ಮುಜ್ ಅನ್ನು 'ಶಾಶ್ವತವಾಗಿ' ತೆರೆಯುತ್ತೇವೆ; ಜಿನ್ ಪಿಂಗ್ ನನಗೆ ದೊಡ್ಡ ಅಪ್ಪುಗೆ ನೀಡುತ್ತಾರೆ: ಟ್ರಂಪ್

BJP ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಅಪರಾಧಿ, ಕೋರ್ಟ್ ತೀರ್ಪು!

ಮಧ್ಯಪ್ರದೇಶದ ರಾಜಕೀಯ ಚಿತ್ರಣವನ್ನು ಬದಲಿಸಲಿವೆ ಕೇರಳ, ತಮಿಳುನಾಡಿನ ವಿಧಾನಸಭಾ ಚುನಾವಣೆ: ಹೇಗೆ?: ಇಲ್ಲಿದೆ ಮಾಹಿತಿ

180 ಅಪ್ರಾಪ್ತ ಬಾಲಕಿಯರೊಂದಿಗೆ ಸೆಕ್ಸ್: ಕಾಮುಕ ಅಯಾಜ್‌ ವಿರುದ್ಧ ಬುಲ್ಡೋಜರ್ ಕ್ರಮ; ಘರ್ಜಿಸಿದ JCB, Viedo ನೋಡಿ

CBSE 10ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟ: ಎಂದಿನಂತೆ ಬಾಲಕಿಯರೇ ಮೇಲುಗೈ; ಯಾವ ನಗರಕ್ಕೆ ಮೊದಲ ಸ್ಥಾನ?

SCROLL FOR NEXT