Online Desk
ವಾಣಿಜ್ಯ

ರಾಜ್ಯಗಳಿಗೆ ಡಬಲ್ ಧಮಾಕ! ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ. ಹೆಚ್ಚುವರಿ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ ಸಿಕ್ಕಿದ್ದು ಎಷ್ಟು?

ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯಲ್ಲಿ ರಾಜ್ಯಗಳಿಗೆ ಒಟ್ಟು 1 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಉತ್ತರ ಪ್ರದೇಶ ರಾಜ್ಯವು 19,208 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದರೆ, ಸಿಕ್ಕಿಂ ₹365 ಕೋಟಿ ಪಡೆದಿದೆ. ಹಾಗಾದ್ರೆ, ಕರ್ನಾಟಕ ಪಡೆದ ಹಣ ಎಷ್ಟು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ NDA ಸರ್ಕಾರವು ಅವಧಿಗೂ ಮುಂಚಿತವಾಗಿ, ಹೆಚ್ಚುವರಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಗಳಿಗೆ ಒಟ್ಟು 1,09,019 ಕೋಟಿ ರೂಪಾಯಿ ಹಣವನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಉತ್ತರ ಪ್ರದೇಶ ರಾಜ್ಯವು ಅತ್ಯಧಿಕ ಅಂದರೆ 19,208 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದರೆ, ಸಿಕ್ಕಿಂ ₹365 ಕೋಟಿ ರೂಪಾಯಿಯೊಂದಿಗೆ ಅತಿ ಕಡಿಮೆ ಹಣ ಪಡೆದಿದೆ. ಹಾಗಾದ್ರೆ, ಕರ್ನಾಟಕ ಪಡೆದ ಹಣ ಎಷ್ಟು? ಇಲ್ಲಿದೆ ಆ ಕುರಿತ ವರದಿ:

ರಾಜ್ಯಗಳಿಗೆ ಡಬಲ್ ಧಮಾಕ!

ಹಣಕಾಸು ಆಯೋಗದ ಶಿಫಾರಸಿನ ಅನ್ವಯ, ಕೇಂದ್ರ ಸರ್ಕಾರವು ತಾನು ಸಂಗ್ರಹಿಸುವ ಒಟ್ಟು ತೆರಿಗೆಯ ಶೇ. 41 ರಷ್ಟು ಮೊತ್ತವನ್ನು ಒಂದು ಆರ್ಥಿಕ ವರ್ಷದಲ್ಲಿ 14 ಕಂತುಗಳ ಮೂಲಕ ರಾಜ್ಯಗಳಿಗೆ ವಿತರಿಸುತ್ತದೆ. ಇನ್ನು, ಈಗ ಬಿಡುಗಡೆಯಾಗಿರುವ 1.09 ಲಕ್ಷ ಕೋಟಿ ರೂಪಾಯಿ ಹಣವು, ಆಗಸ್ಟ್ 10 ರಂದು ಬಿಡುಗಡೆಯಾಗಬೇಕಿರುವ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೆ, ರಾಜ್ಯಗಳ ಮೂಲಸೌಕರ್ಯ ಮತ್ತು ಅಭಿವೃದ್ಧಿ ವೆಚ್ಚಗಳನ್ನು ವೇಗಗೊಳಿಸಲು ಹೆಚ್ಚುವರಿ ಹಣವಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

ಕರ್ನಾಟಕಕ್ಕೆ ಎಷ್ಟು ಹಣ?

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಒಟ್ಟು 1,09,019 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಲಭಿಸಿದ್ದರೆ, ದೇಶದ ಇತರ ಪ್ರಮುಖ ರಾಜ್ಯಗಳಿಗೆ ಹಂಚಿಕೆಯಾಗಿರುವ ಮೊತ್ತದ ವಿವರಗಳು ಈ ಕೆಳಗಿನಂತಿವೆ:

  • ಅತಿ ಹೆಚ್ಚು ತೆರಿಗೆ ಪಾಲು ಪಡೆದ ಪ್ರಮುಖ ರಾಜ್ಯಗಳು

    • ಉತ್ತರ ಪ್ರದೇಶ: ₹19,208 ಕೋಟಿ

    • ಬಿಹಾರ: ₹10,845 ಕೋಟಿ

    • ಮಧ್ಯಪ್ರದೇಶ: ₹8,010 ಕೋಟಿ

    • ಪಶ್ಚಿಮ ಬಂಗಾಳ: ₹7,866 ಕೋಟಿ

    • ಮಹಾರಾಷ್ಟ್ರ: ₹7,022 ಕೋಟಿ

  • ಇತರ ಪ್ರಮುಖ ರಾಜ್ಯಗಳ ಹಂಚಿಕೆ ವಿವರ

    • ರಾಜಸ್ಥಾನ: ₹6,460 ಕೋಟಿ

    • ಒಡಿಶಾ: ₹4,819 ಕೋಟಿ

    • ಆಂಧ್ರಪ್ರದೇಶ: ₹4,597 ಕೋಟಿ

    • ತಮಿಳುನಾಡು: ₹4,466 ಕೋಟಿ

    • ಗುಜರಾತ್: ₹4,094 ಕೋಟಿ

    • ಅಸ್ಸಾಂ: ₹3,552 ಕೋಟಿ

    • ಅರುಣಾಚಲ ಪ್ರದೇಶ: ₹1,476 ಕೋಟಿ

  • ಕಡಿಮೆ ಅನುದಾನ ಪಡೆದ ಸಣ್ಣ ರಾಜ್ಯಗಳು

    • ನಾಗಾಲ್ಯಾಂಡ್: ₹524 ಕೋಟಿ

    • ಗೋವಾ: ₹398 ಕೋಟಿ

    • ಸಿಕ್ಕಿಂ: ₹365 ಕೋಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!

ಸಕಲೇಶಪುರ: ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ರೈಲು ಸಂಚಾರ ಸಂಪೂರ್ಣ ಸ್ಥಗಿತ; ಕಾನ್ಸ್ಟೇಬಲ್ ಪರೀಕ್ಷಾರ್ಥಿಗಳ ಪರದಾಟ

ಬೆದರಿಕೆಗಳಿಗೆ ಹೆದರಲ್ಲ, ಮತ್ತೆ ದಾಳಿ ನಡೆದರೆ ತಕ್ಕ ಪ್ರತಿಕ್ರಿಯೆ: ಅಮೆರಿಕಾಗೆ ಇರಾನ್ ತಿರುಗೇಟು, ನೆರೆಹೊರೆಯ ರಾಷ್ಟ್ರಗಳೊಂದಿಗೆ ತುರ್ತು ಮಾತುಕತೆ..!