ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

Gold ಮೇಲೆ Investment ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ಬೆಸ್ಟ್ ಆಪ್ಷನ್‌ಗಳು!

ಹಬ್ಬದ ಸೀಸನ್ ಬಂದರೆ ಸಾಕು ಚಿನ್ನ ಖರೀದಿಗೆ ಮುಗಿಬೀಳುತ್ತೇವೆ! ಆದರೆ, ಚಿನ್ನ ಕೇವಲ ಆಭರಣವಲ್ಲ, ಅದೊಂದು ಉತ್ತಮ ಹೂಡಿಕೆ ಕೂಡ. ಹಾಗಾದರೆ, ಚಿನ್ನವನ್ನು ಹೇಗೆಲ್ಲ ಖರೀದಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ.! ಹಾಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುವ 5 ಸುಲಭ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ:

ಚಿನ್ನ — AI Image
Hruthin H P
Updated On : 26 Aug 2026, 5:58 pm

Gold Investment: ಚಿನ್ನದ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಎಲ್ಲರಿಗೂ ಸಾವಿರಾರು ರೂಪಾಯಿ ಕೊಟ್ಟು ಗ್ರಾಂ ಗಟ್ಟಲೇ ಖರೀದಿಸಲು ಸಾಧ್ಯವಿಲ್ಲ. ಆದರೆ, ನಿಮಗೆ ಗೊತ್ತಾ? ಕೇವಲ ನೂರು ರೂಪಾಯಿಗೆ ನೀವು ಚಿನ್ನ ಖರೀದಿಸಬಹುದು ಎಂದು? ಹೌದು, ಕಾಲ ಬದಲಾದಂತೆ ಬಂಗಾರ ಖರೀದಿ ಮಾಡುವ ಶೈಲಿಯೂ ಬದಲಾಗಿದೆ. ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಆಸ್ತಿಯಾಗಿದ್ದ ಹಳದಿ ಲೋಹ ಇಂದು ಎಲ್ಲ ಸಾಮಾನ್ಯ ಜನರಿಗೂ ಸುಲಭವಾಗಿ ಕೈಗೆಟುಕುವ ಹೂಡಿಕೆ ಆಸ್ತಿಯಾಗಿ ಮಾರ್ಪಟ್ಟಿದೆ. ಅದರಂತೆ, ನೀವು ಅಂದುಕೊಂಡಂತೆ ಬರೀ ಫಿಸಿಕಲ್ ಚಿನ್ನ ಹಾಗೂ ಡಿಜಿಟಲ್ ಚಿನ್ನ ಮಾತ್ರವಲ್ಲ! ಈ ದೇಶದಲ್ಲಿ ಒಟ್ಟು 5 ರೀತಿಯಲ್ಲಿ ನೀವು ಚಿನ್ನವನ್ನು ಖರೀದಿಸಬಹುದು. ಹೌದು, ಒಂದಲ್ಲಾ ಎರಡಲ್ಲಾ, ಒಟ್ಟು 5 ವಿಧಾನದಲ್ಲಿ ಚಿನ್ನ ಖರೀದಿಸಬಹುದಾದ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ:

ಫಿಸಿಕಲ್ ಚಿನ್ನ:

ಸಾಮಾನ್ಯವಾಗಿ, ಇದು ನಾಣ್ಯಗಳು, ಬಿಸ್ಕತ್‌ಗಳು ಅಥವಾ ಆಭರಣಗಳ ರೂಪದಲ್ಲಿ ಚಿನ್ನವನ್ನು ಖರೀದಿಸುವ ಸಾಂಪ್ರದಾಯಿಕ ವಿಧಾನವಾಗಿದೆ.

Advertisement

Advertisement

ಕೇವಲ 100 ರೂಪಾಯಿಗೆ ಡಿಜಿಟಲ್ ಗೋಲ್ಡ್

ತಕ್ಷಣವೇ ಮತ್ತು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಹೂಡಿಕೆ ಆರಂಭಿಸಲು ಡಿಜಿಟಲ್ ಚಿನ್ನ ಅತ್ಯಂತ ಜನಪ್ರಿಯ ಆಪ್ಷನ್ ಆಗಿದೆ. ವಿವಿಧ ಮೊಬೈಲ್ ಪೇಮೆಂಟ್ ಆಪ್‌ಗಳು ಮತ್ತು ನಂಬಿಕಸ್ಥ ಜ್ಯುವೆಲ್ಲರಿ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ಕೇವಲ ನೂರು ರೂಪಾಯಿಗೂ ಅಪ್ಪಟ 24 ಕ್ಯಾರೆಟ್ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಕೊಳ್ಳಬಹುದು. ಈ ಚಿನ್ನವನ್ನು ಸುರಕ್ಷಿತ ಕಂಪನಿಗಳ ಲಾಕರ್‌ನಲ್ಲಿ ಇಡಲಾಗುತ್ತದೆ ಮತ್ತು ನಿಮಗೆ ಬೇಕಾದಾಗ ಹಣವಾಗಿ ಬದಲಾಯಿಸಿಕೊಳ್ಳಬಹುದು.

Also Read

ಕಡಿಮೆ ರೇಟ್ ಅಂತ ದುಬೈನಿಂದ ಬಂಗಾರ ತರುವ ಪ್ಲಾನ್ ಇದೆಯಾ? ಇಲ್ಲಿದೆ ನೋಡಿ.. ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಎನ್ನುವುದರ ಕಂಪ್ಲೀಟ್ ಮಾಹಿತಿ

ಸೊವರೇನ್ ಗೋಲ್ಡ್ ಬಾಂಡ್‌ಗಳು (SGB)

ಇದು ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಜಂಟಿಯಾಗಿ ಹೊರಡಿಸುವ ಡಿಜಿಟಲ್ ಬಾಂಡ್ ಆಗಿದೆ.

ಗೋಲ್ಡ್ ETF ಮತ್ತು ಮ್ಯೂಚುವಲ್ ಫಂಡ್‌ಗಳು

ಷೇರು ಮಾರುಕಟ್ಟೆಯ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡುವ ಅತ್ಯಾಧುನಿಕ ವಿಧಾನಗಳಿವು.

Also Read

Gold Types: ಯಾವ ಕ್ಯಾರೆಟ್ ಚಿನ್ನ ಪರಿಶುದ್ಧ ಗೊತ್ತಾ? ಈ ವಿಷಯ ಗೊತ್ತಿಲ್ಲದೆ ಬಂಗಾರ ಖರೀದಿಸಲೇಬೇಡಿ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement