ಏರ್ಟೆಲ್ Online Desk
ವಾಣಿಜ್ಯ

ಇನ್ಮೇಲೆ Airtel Appನಲ್ಲೆ ಲಕ್ಷ ಲಕ್ಷ ಸಾಲ! NBFC ಪರವಾನಗಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಏರ್‌ಟೆಲ್ ಭರ್ಜರಿ ಎಂಟ್ರಿ

ಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ Airtel, ಬ್ಯಾಂಕಿಂಗ್ ಕ್ಷೇತ್ರಕ್ಕೂ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿದ್ದು, RBIನಿಂದ NBFC ಪರವಾನಗಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಏರ್‌ಟೆಲ್ ಈಗ ತನ್ನ ಅಪ್ಲಿಕೇಶನ್ ಮೂಲಕ ಸಾಲ ಸೇವೆಗಳನ್ನು ನೇರವಾಗಿ ನೀಡಲು ಸಿದ್ಧತೆ ನಡೆಸಿದೆ.

ನವದೆಹಲಿ: ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ಏರ್ಟೆಲ್ (Airtel), ಬ್ಯಾಂಕಿಂಗ್ (Banking) ಕ್ಷೇತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಬ್ಯಾಂಕೇತರ ಹಣಕಾಸು ಕಂಪನಿ (NBFC) ಪರವಾನಗಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಏರ್‌ಟೆಲ್ ಈಗ ತನ್ನ ಅಪ್ಲಿಕೇಶನ್ ಮೂಲಕ ಬ್ಯಾಂಕುಗಳು ನೀಡುವ ಸಾಲ (Loan) ಸೇವೆಗಳನ್ನು ನೇರವಾಗಿ ನೀಡಲು ಸಿದ್ಧತೆ ನಡೆಸಿದೆ. ಆ ಕುರಿತ ವರದಿ ಇಲ್ಲಿದೆ.

ಇನ್ಮೇಲೆ ಏರ್‌ಟೆಲ್ ಆಪ್‌ನಲ್ಲೆ ಲಕ್ಷ ಲಕ್ಷ ಸಾಲ!

ಇಲ್ಲಿಯವರೆಗೆ, ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಹಣ ಕಳುಹಿಸುವುದು ಮತ್ತು ಬಿಲ್‌ಗಳನ್ನು ಪಾವತಿಸುವುದು ಮುಂತಾದ ಕೆಲವೇ ಕೆಲವು ಸೇವೆಗಳು ಮಾತ್ರ ಲಭ್ಯವಿದ್ದವು. ಆದರೆ, ಪೇಮೆಂಟ್ ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕರಿಗೆ ಸಾಲಗಳನ್ನು ನೀಡಲು ಸಾಧ್ಯವಾರಲಿಲ್ಲ. ಆದರೆ ಈಗ ಏರ್‌ಟೆಲ್ ಮನಿ NBFC ಪರವಾನಗಿಯನ್ನು ಪಡೆದಿರುವುದರಿಂದ, ಡಿಜಿಟಲ್ ಸಾಲ ವಿತರಣಾ ಕ್ಷೇತ್ರದಲ್ಲಿ ಭಾರಿ ಕ್ರಾಂತಿ ಸೃಷ್ಟಿಸಲು, ಮುಂಬರುವ ವರ್ಷಗಳಲ್ಲಿ ₹20,000 ಕೋಟಿ ಹೂಡಿಕೆ ಮಾಡಲು ಪ್ಲಾನ್ ಮಾಡಿದೆ. ಅದರಂತೆ, ಈವರೆಗೆ ಕೇವಲ ಸಾಲದ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಏರ್‌ಟೆಲ್, ಇನ್ನುಮುಂದೆ ಗ್ರಾಹಕರಿಗೆ ನೇರವಾಗಿ ಡಿಜಿಟಲ್ ಸಾಲ ನೀಡಲಿದೆ. ಜೊತೆಗೆ, FD ಮತ್ತು ವಿವಿಧ ರೀತಿಯ ವಿಮಾ ಸೇವೆಗಳು ಸಹ ಸಿಗಲಿದೆ.

ಹಳೇಯ ಗ್ರಾಹಕರೇ ಟಾರ್ಗೆಟ್

ಏರ್‌ಟೆಲ್ ಕಂಪನಿಯು ಈಗಾಗಲೇ ದೇಶಾದ್ಯಂತ 368 ಮಿಲಿಯನ್ ಅಂದರೆ ಸುಮಾರು 36.80 ಲಕ್ಷಕ್ಕೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಆದ್ದರಿಂದ, ಹೊಸ ಗ್ರಾಹಕರನ್ನು ಹುಡುಕದೆಯೇ ತನ್ನ ಅಸ್ತಿತ್ವದಲ್ಲಿರುವ ಏರ್‌ಟೆಲ್ ಗ್ರಾಹಕರಿಗೆ ಈ ಹೊಸ ಡಿಜಿಟಲ್ ಹಣಕಾಸು ಸೇವೆಗಳನ್ನು ನೀಡಲು ಸಾಧ್ಯವಾಗುವುದು ಕಂಪನಿಗೆ ಮೊದಲ ಹಾಗೂ ದೊಡ್ಡ ಪ್ಲಾನ್. ಇದರೊಂದಿಗೆ, ಏರ್ಟೆಲ್ನ ಈ ಪ್ಲಾನ್ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಫೈನಾನ್ಶಿಯಲ್ ಸರ್ವಿಸ್‌ಗೆ ಇದು ನೇರ ಪೈಪೋಟಿ ನೀಡಲಿದೆ.

ಏತನ್ಮಧ್ಯೆ, ಏರ್‌ಟೆಲ್ ಹಣಕಾಸು ವಲಯದಲ್ಲಿ ಮಾತ್ರವಲ್ಲದೆ ಭವಿಷ್ಯದ ತಂತ್ರಜ್ಞಾನದ ಕ್ಷೇತ್ರಗಳಲ್ಲಿಯೂ ಭಾರಿ ಹೂಡಿಕೆ ಮಾಡುತ್ತಿದೆ. ಅದರಂತೆ, ಏರ್‌ಟೆಲ್ ಅಂಗಸಂಸ್ಥೆ ನೆಕ್ಸ್ಟ್ 1 ಗಿಗಾವ್ಯಾಟ್ ಡೇಟಾ ಸೆಂಟರ್ ನೆಟ್‌ವರ್ಕ್ ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಮತ್ತು ಇತ್ತೀಚೆಗೆ ಈ ಉದ್ದೇಶಕ್ಕಾಗಿ $1 ಬಿಲಿಯನ್ (ಸುಮಾರು ₹8,400 ಕೋಟಿ) ಸಂಗ್ರಹಿಸಿದೆ. ಅದರಲ್ಲೂ, ಇದು ಭಾರತೀಯ ಕಂಪನಿಗಳ ಡೇಟಾವನ್ನು ದೇಶದೊಳಗೆ ಹೆಚ್ಚು ಸುರಕ್ಷಿತವಾಗಿಸಲು ಕ್ಲೌಡ್ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಜೊತೆಗೆ ಇದು ಸೈಬರ್ ಭದ್ರತೆ ಮತ್ತು ಇಂಟರ್ನೆಟ್ ಆಧಾರಿತ ವ್ಯವಹಾರಗಳ ಮೇಲೂ ಗಮನಹರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!