ಒಂದೇ ದಿನ ಚಿನ್ನದ ಬೆಲೆ ಸಾವಿರಾರು ರೂಪಾಯಿ ಇಳಿಕೆ: ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರಿಗೆ ಬಿಗ್ ರಿಲೀಫ್!
ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಇಂದು ಸುವರ್ಣಾವಕಾಶ! ನವೆಂಬರ್ 25ರಂದು ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಖರೀದಿದಾರರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.! ಹಾಗಾದ್ರೆ, ಬೆಂಗಳೂರಿನಲ್ಲಿ ಇಂದಿನ ಮಾರುಕಟ್ಟೆಯ ದರ ಎಷ್ಟಿದೆ? ಆ ಕುರಿತ ವರದಿ ಇಲ್ಲಿದೆ:
ಬೆಂಗಳೂರು: ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ! ಕಳೆದ ಎರಡು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇಂದು, ನವೆಂಬರ್ 25ರಂದು ಒಂದೇ ಸಮನೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಚೇತರಿಕೆ ಮತ್ತು ಫೆಡರಲ್ ರಿಸರ್ವ್ ಬಡ್ಡಿದರಗಳ ನಿರೀಕ್ಷೆಯ ನಡುವೆ, ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹3,220 ರೂ. ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹2,950 ರೂ.ಗಳಷ್ಟು ಭಾರಿ ಕುಸಿತ ಕಂಡಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ ನಿಖರ ದರ ಎಷ್ಟಿದೆ? ಆ ಕುರಿತ ವರದಿ ಇಲ್ಲಿದೆ:
ಕರ್ನಾಟಕದ ನಗರಗಳಲ್ಲಿ ಇಂದಿನ ದರ (1 ಗ್ರಾಂಗೆ) ಎಷ್ಟು?
ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು 1 ಗ್ರಾಂ ಚಿನ್ನದ ದರವನ್ನು ಗಮನಿಸುವುದಾದರೆ, ಬೆಂಗಳೂರು ಮತ್ತು ಮಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನಕ್ಕೆ ₹12,458 ಮತ್ತು 22 ಕ್ಯಾರೆಟ್ ಆಭರಣ ಚಿನ್ನಕ್ಕೆ ₹11,420 ಹಾಗೂ 18 ಕ್ಯಾರೆಟ್ ಚಿನ್ನಕ್ಕೆ ₹9,344 ಬೆಲೆ ಇದೆ. ಮೈಸೂರಿನಲ್ಲಿ 24 ಕ್ಯಾರೆಟ್ ಚಿನ್ನ ₹12,632 ಹಾಗೂ 22 ಕ್ಯಾರೆಟ್ ₹11,571 ಮತ್ತು 18 ಕ್ಯಾರೆಟ್ ₹9,474 ರಷ್ಟಿದ್ದರೆ, ಬೆಳಗಾವಿಯಲ್ಲಿ 24 ಕ್ಯಾರೆಟ್ ₹12,781 ಮತ್ತು 22 ಕ್ಯಾರೆಟ್ ₹11,716 ಹಾಗೂ 18 ಕ್ಯಾರೆಟ್ ಚಿನ್ನ ₹9,586 ಕ್ಕೆ ಮಾರಾಟವಾಗುತ್ತಿದೆ. ಇನ್ನು ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ಕಲಬುರಗಿ ಮತ್ತು ಬಳ್ಳಾರಿ ನಗರಗಳಲ್ಲಿ ಏಕರೂಪದ ದರವಿದ್ದು, ಇಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ₹12,672 ಹಾಗೂ 22 ಕ್ಯಾರೆಟ್ ಚಿನ್ನಕ್ಕೆ ₹11,616 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ₹9,504 ನಿಗದಿಯಾಗಿದೆ.
ಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?
ಏತನ್ಮಧ್ಯೆ, ಮೇಲೆ ತಿಳಿಸಿದ ದರಗಳು ಮಾರುಕಟ್ಟೆ ಮೂಲ ದರಗಳಾಗಿದ್ದು, ಇವುಗಳಲ್ಲಿ ಜಿಎಸ್‌ಟಿ ಮತ್ತು ಇತರೆ ತೆರಿಗೆಗಳು ಸೇರಿಲ್ಲ. ಖರೀದಿ ಸಮಯದಲ್ಲಿ 3% ಜಿಎಸ್‌ಟಿ ಹಾಗೂ ತಯಾರಿಕಾ ವೆಚ್ಚ ಹೆಚ್ಚುವರಿಯಾಗಿ ಸೇರುತ್ತದೆ.