IOCL Recruitment 2026: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲಸ ಮಾಡುವುದು ಹಲವು ಉದ್ಯೋಗಾಕಾಂಕ್ಷಿಯ ಕನಸು. ಇದೀಗ ಆ ಕನಸನ್ನು ನನಸು ಮಾಡಿಕೊಳ್ಳಲು ಸುವರ್ಣಾವಕಾಶ ಒದಗಿಬಂದಿದೆ. ಅದರಂತೆ, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಬರೋಬ್ಬರಿ 470 ಹುದ್ದೆಗಳ ಭರ್ತಿಗೆ IOCL ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಮೆಕ್ಯಾನಿಕಲ್ ಇಂಜಿನಿಯರಿಂಗ್: 118
ಎಲೆಕ್ಟ್ರಿಕಲ್ ಇಂಜಿನಿಯರಿಂಗ್: 75
ಸಿವಿಲ್ ಇಂಜಿನಿಯರಿಂಗ್: 62
ಮಾರ್ಕೆಟಿಂಗ್: 41
ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್: 35
ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ: 32
ಕಂಪ್ಯೂಟರ್ ಸೈನ್ಸ್ ಮತ್ತು ಐಟಿ: 22
ಕೆಮಿಕಲ್ ಇಂಜಿನಿಯರಿಂಗ್: 9
ಸಹಾಯಕ ಗುಣಮಟ್ಟ ನಿಯಂತ್ರಣ ಅಧಿಕಾರಿ (ರಸಾಯನಶಾಸ್ತ್ರ): 9
ಡಿಪ್ಲೊಮಾ ಮೆಕ್ಯಾನಿಕಲ್: 21
ಡಿಪ್ಲೊಮಾ ಸುರಕ್ಷತೆ: 15
ಡಿಪ್ಲೊಮಾ ಎಲೆಕ್ಟ್ರಿಕಲ್: 14
ಒಟ್ಟು ಹುದ್ದೆಗಳು: 470
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 14, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 3, 2026 (ಸಂಜೆ 5:00 ಗಂಟೆಯವರೆಗೆ)
ಪ್ರವೇಶ ಪತ್ರ ಬಿಡುಗಡೆ: ಸೆಪ್ಟೆಂಬರ್ 15, 2026
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: ಸೆಪ್ಟೆಂಬರ್ 24, 2026
ಆಯ್ಕೆ ಪ್ರಕ್ರಿಯೆಯ ಹಂತಗಳು
ಅಭ್ಯರ್ಥಿಗಳನ್ನು ಒಟ್ಟು ಮೂರು ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ
ಗುಂಪು ಚರ್ಚೆ ಮತ್ತು ಗ್ರೂಪ್ ಟಾಸ್ಕ್
ವೈಯಕ್ತಿಕ ಸಂದರ್ಶನ
ಸಂಬಳ: ₹30,000 – ₹1,60,000 ಹುದ್ದೆಗಳ ಅನುಗುಣವಾಗಿ ಬದಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ, OBC/EWS ಅಭ್ಯರ್ಥಿಗಳಿಗೆ: ₹1,000 + ಜಿಎಸ್‌ಟಿ
SC/ST/PwBD ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಸೇವಾ ಬಾಂಡ್:
ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ.
Grade A: ಸಾಮಾನ್ಯ ವರ್ಗಕ್ಕೆ ₹3,00,000 (ಮೀಸಲಾತಿ ವರ್ಗಕ್ಕೆ ₹50,000).
Grade A0 / E0: ಸಾಮಾನ್ಯ ವರ್ಗಕ್ಕೆ ₹2,00,000 (ಮೀಸಲಾತಿ ವರ್ಗಕ್ಕೆ ₹35,000).
ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ
ಅರ್ಜಿಯನ್ನು IOCL ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು.
ನೋಂದಣಿ: ವೆಬ್‌ಸೈಟ್‌ನಲ್ಲಿರುವ "APPLY ONLINE" ಲಿಂಕ್ ಕ್ಲಿಕ್ ಮಾಡಿ "Click here for New Registration" ಆಯ್ಕೆಮಾಡಿ. ಹೆಸರು, ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಪಡೆದುಕೊಳ್ಳಿ.
ವಿವರಗಳನ್ನು ಭರ್ತಿ ಮಾಡುವುದು: ಅರ್ಜಿಯಲ್ಲಿ ಅಗತ್ಯವಿರುವ ಶೈಕ್ಷಣಿಕ ವಿವರಗಳು, ವಿಳಾಸ ಮತ್ತು ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ 'Save & Next' ನೀಡಿ.
ದಾಖಲೆಗಳ ಅಪ್‌ಲೋಡ್: ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಇದರ ಜೊತೆಗೆ ವೆಬ್‌ಕ್ಯಾಮ್ ಅಥವಾ ಮೊಬೈಲ್ ಮೂಲಕ ಲೈವ್ ಫೋಟೋ (Live Photo) ಕ್ಯಾಪ್ಚರ್ ಮಾಡಬೇಕು.
ಸಹಿ: ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯ ಪೆನ್ನಿನಿಂದ ಮಾಡಿದ ಸಹಿ. ಕ್ಯಾಪಿಟಲ್ ಅಕ್ಷರಗಳಲ್ಲಿ ಸಹಿ ಮಾಡುವಂತಿಲ್ಲ.
ಎಡಗೈ ಹೆಬ್ಬೆರಳಿನ ಗುರುತು: ಬಿಳಿ ಹಾಳೆಯ ಮೇಲೆ ಕಪ್ಪು ಅಥವಾ ನೀಲಿ ಶಾಯಿಯ ಗುರುತು.
ಪರಿಶೀಲನೆ: 'Preview' ಟ್ಯಾಬ್ ಬಳಸಿ ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ 'Complete Registration' ಕ್ಲಿಕ್ ಮಾಡಿ (ಒಮ್ಮೆ ಸಬ್ಮಿಟ್ ಮಾಡಿದ ನಂತರ ಬದಲಾವಣೆಗೆ ಅವಕಾಶವಿರುವುದಿಲ್ಲ).
ಶುಲ್ಕ ಪಾವತಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಶುಲ್ಕ ಪಾವತಿಸಿ
ಪ್ರಿಂಟ್‌ಔಟ್: ಶುಲ್ಕ ಪಾವತಿಯ ನಂತರ ಇ-ರಶೀದಿ ಮತ್ತು ಅಪ್ಲಿಕೇಶನ್ ಫಾರ್ಮ್ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸುವ ಲಿಂಕ್: https://www.iocl.com/