ಪರೀಕ್ಷೆಯಿಲ್ಲದೆ ಸರ್ಕಾರಿ ಕೆಲಸ Online Desk
ವೃತ್ತಿ & ಉದ್ಯೋಗ ಅವಕಾಶಗಳು

PUC ಪಾಸಾದವರಿಗೆ ಪರೀಕ್ಷೆಯಿಲ್ಲದೆ ಸರ್ಕಾರಿ ಕೆಲಸ! ಲೋಕಾಯುಕ್ತದಲ್ಲಿ Clerk-cum-Typist ಹುದ್ದೆಗಳ ನೇಮಕಾತಿ; ಭರ್ಜರಿ ಸಂಬಳ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಖಾಲಿ ಇರುವ ಗ್ರೂಪ್-ಸಿ 'ಕ್ಲರ್ಕ್-ಕಮ್-ಟೈಪಿಸ್ಟ್' ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಇಂದೇ ಅಪ್ಲೈ ಮಾಡಿ, ಆ ಕುರಿತ ವರದಿ ಇಲ್ಲಿದೆ.

Karnataka Lokayukta Recruitment 2026: ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವ ಕರ್ನಾಟಕದ ಯುವಕರಿಗೆ ಸುವರ್ಣಾವಕಾಶ ಎದುರಾಗಿದೆ. ಅದರಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಖಾಲಿ ಇರುವ ಗ್ರೂಪ್-ಸಿ 'ಕ್ಲರ್ಕ್-ಕಮ್-ಟೈಪಿಸ್ಟ್' (Clerk-cum-Typist) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆ ಕುರಿತ ವರದಿ ಇಲ್ಲಿದೆ.

ಹುದ್ದೆಗಳ ವಿವರ:

  • ಖಾಲಿ ಹುದ್ದೆಗಳ ವಿವರ: ಒಟ್ಟು 26 ಹುದ್ದೆಗಳು.

  • ಉಳಿಕೆ ಮೂಲ ವೃಂದ (RPC): 25 ಹುದ್ದೆಗಳು

  • ಕಲ್ಯಾಣ ಕರ್ನಾಟಕ (KKR): 1 ಹುದ್ದೆ

ಅರ್ಹತೆ:

ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಜೊತೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಜೂನಿಯರ್ ಗ್ರೇಡ್ ಬೆರಳಚ್ಚು (Typewriting) ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು.

ವಯೋಮಿತಿ:

18 ವರ್ಷ ದಿಂದ ಗರಿಷ್ಠ 40 ವರ್ಷಗಳು {SC / ST / Cat-I ಅಭ್ಯರ್ಥಿಗಳಿಗೆ: 5 ವರ್ಷ ಹಾಗೂ Cat-2A / 2B / 3A / 3B ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ ಇದೆ}

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ:

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳು: ₹250 ಹಾಗೂ SC / ST / ಪ್ರವರ್ಗ-1 / ಮಾಜಿ ಸೈನಿಕರು / ತೃತೀಯಲಿಂಗಿಗಳು / ವಿಕಲಚೇತನ ಅಭ್ಯರ್ಥಿಗಳಿಗೆ ಉಚಿತ

ಆಯ್ಕೆ ವಿಧಾನ:

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಬದಲಿಗೆ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು ಮತ್ತು ಬೆರಳಚ್ಚು ಪರೀಕ್ಷೆಯ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ವೇತನ:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹34,100 ರಿಂದ ₹67,600 ರವರೆಗೆ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಜುಲೈ 17, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 17, 2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಆಗಸ್ಟ್ 18, 2026

ನೇಮಕಾತಿ ಅಧಿಸೂಚನೆ:

https://lokayukta.karnataka.gov.in/pdf/notification/Gazettee-2026%20(26%20CCT%20posts).pdf

ಅರ್ಜಿ ಸಲ್ಲಿಸುವ ಲಿಂಕ್:

https://lokayukta.karnataka.gov.in/onlinerecruitment/ctk/home.php

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಲ್ಫ್ ಆಫ್ ಮೆಕ್ಸಿಕೋ, ಒಂಟಾರಿಯೊ ಲೇಕ್ ಬಳಿಕ Strait of Hormuz ಗೆ ನನ್ನ ಹೆಸರು ಮರುನಾಮಕರಣ ಮಾಡಿ- ಅಮೆರಿಕ ಅಧ್ಯಕ್ಷ Trump ವಿಚಿತ್ರ ಬೇಡಿಕೆ!

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್ -243 ಪರೀಕ್ಷೆ ಯಶಸ್ವಿ

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು, ಬಿಹಾರದಲ್ಲಿ ಹೈ ಅಲರ್ಟ್

AEE ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆಗೆ HDK ಸಾಲು ಸಾಲು ಪ್ರಶ್ನೆ; ಇದೇನಾ 'ದೇಶವೇ ಅಲ್ಲೋಲ ಕಲ್ಲೋಲ ಆಗೋ' ವಿಷಯ? Video

'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು': ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta