Union Bank Recruitment: ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಪದವಿಧರ ಯುವಕರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗುಡ್ ನ್ಯೂಸ್ ನೀಡಿದೆ. ಅದರಂತೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಬ್ಯಾಂಕಿಂಗ್ ಅಧಿಕಾರಿಗಳು ಹಾಗೂ ಸ್ಪೆಷಲಿಸ್ಟ್ ಅಧಿಕಾರಿಗಳು ಸೇರಿದಂತೆ ಒಟ್ಟು 395 ವಿವಿಧ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಯ ವಿವರ:
ಒಟ್ಟು ಹುದ್ದೆಗಳು: 395 ಹುದ್ದೆಗಳು.
ಹುದ್ದೆಗಳ ಪ್ರಕಾರ:
ಮ್ಯಾನೇಜರ್ (MMGS-II): 163
ಸೀನಿಯರ್ ಮ್ಯಾನೇಜರ್ (MMGS-III): 153
ಮುಖ್ಯ ವ್ಯವಸ್ಥಾಪಕ (SMGS-IV): 52
ಸಹಾಯಕ ಜನರಲ್ ಮ್ಯಾನೇಜರ್ (SMGS-V): 20
ಉಪ ಪ್ರಧಾನ ವ್ಯವಸ್ಥಾಪಕರು (TEGS-VI): 7
ಉದ್ಯೋಗ ಪ್ರಕಾರ: ಖಾಯಂ ಹುದ್ದೆಗಳು
ಅರ್ಹತೆ:
ಶೈಕ್ಷಣಿಕ ಅರ್ಹತೆ:
ಜನರಲ್ ಬ್ಯಾಂಕಿಂಗ್ ಆಫೀಸರ್ (Scale II & III): ಯಾವುದೇ ವಿಷಯದಲ್ಲಿ ಪದವಿ.
ಚಾರ್ಟರ್ಡ್ ಅಕೌಂಟೆಂಟ್ (CA): ICAI ಸಂಸ್ಥೆಯಿಂದ CA ತೇರ್ಗಡೆಯಾಗಿರಬೇಕು (ಕ್ರೆಡಿಟ್ ಹುದ್ದೆಗಳಿಗೆ CMA ಅಥವಾ CFA ಹೊಂದಿದವರೂ ಅರ್ಹರು).
ಐಟಿ ಮತ್ತು ಟೆಕ್ನಾಲಜಿ ಅಧಿಕಾರಿಗಳು: Computer Science, IT, ECE ಅಥವಾ ತತ್ಸಮಾನ ವಿಷಯಗಳಲ್ಲಿ B.E. / B.Tech / M.Tech / MCA / M.Sc (IT/CS).
ಕಾನೂನು ಅಧಿಕಾರಿ: ಮಾನ್ಯತೆ ಪಡೆದ ಸಂಸ್ಥೆಯಿಂದ LL.B.
ಎಂಜಿನಿಯರಿಂಗ್ ವಿಭಾಗ: ಸಂಬಂಧಿತ ವಿಭಾಗದಲ್ಲಿ (Civil/Electrical/Architecture/Fire) B.E. / B.Tech / B.Arch.
ರಿಸ್ಕ್ ಮ್ಯಾನೇಜ್‌ಮೆಂಟ್ ಆಫೀಸರ್: B.E / B.Tech / MCA / CA ಅಥವಾ Statistics/Finance/Economics ವಿಷಯಗಳಲ್ಲಿ ಸ್ನಾತಕೋತ್ತರ ಪದವಿ.
ಫೊರೆಕ್ಸ್ ಆಫೀಸರ್: ಪದವಿ (Scale III ಗೆ MBA/PGDM - Finance/International Business ಕಡ್ಡಾಯ).
ವಯೋಮಿತಿ ಅರ್ಹತೆಗೆ:
01 ಜುಲೈ 2026 ರಂತೆ 22 ರಿಂದ 40 ವರ್ಷ. ಇದು ಹುದ್ದೆಗೆ ತಕ್ಕಂತೆ ಬದಲಾಗಲಿದೆ. ಜೊತೆಗೆ ಸರ್ಕಾರಿ ನಿಯಮಗಳ ಅನುಸಾರ ಮೀಸಲಾತಿ ಇರಲಿದೆ.
ಶೈಕ್ಷಣಿಕ ಅರ್ಹತೆ, ಪ್ರಮಾಣಪತ್ರ ಮತ್ತು ಅನುಭವಕ್ಕೆ: 10 ಆಗಸ್ಟ್ 2026
ಸಂಬಳ:
ಹುದ್ದೆಗಳ ಆಧಾರದ ಮೇಲೆ ವಾರ್ಷಿಕ CTC ₹21 ಲಕ್ಷದಿಂದ ₹47 ಲಕ್ಷದವರೆಗೆ ಇರಲಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 21 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10 ಆಗಸ್ಟ್ 2026
ಅರ್ಜಿ ಶುಲ್ಕ:
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ: ₹1,180
SC, ST ಮತ್ತು PwBD ಅಭ್ಯರ್ಥಿಗಳಿಗೆ: ₹177
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು:
ರ್ನಾಟಕದಲ್ಲಿ ಆನ್‌ಲೈನ್ ಲಿಖಿತ ಪರೀಕ್ಷೆಗಾಗಿ ಕೆಳಗಿನ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ: ಬೆಂಗಳೂರು, ಧಾರವಾಡ / ಹುಬ್ಬಳ್ಳಿ, ಮೈಸೂರು, ಕಲ್ಬುರ್ಗಿ, ಬೆಳಗಾವಿ.
ಅಧಿಸೂಚನೆ ಲಿಂಕ್:
https://www.unionbankofindia.bank.in/pdf/union-bank-recruitment-project-2026-27.pdf
ಅರ್ಜಿ ಸಲ್ಲಿಸುವುದು ಹೇಗೆ?
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.unionbankofindia.co.in
'Recruitment' -> 'Careers Overview' ಲಿಂಕ್ ಕ್ಲಿಕ್ ಮಾಡಿ.
"UNION BANK RECRUITMENT PROJECT 2026-27" ಆನ್‌ಲೈನ್ ಲಿಂಕ್ ಆಯ್ಕೆ ಮಾಡಿ.
"Click here for New Registration" ನೀಡಿ ನಿಮ್ಮ ಹೆಸರು, ಇಮೇಲ್ ಮತ್ತು ಮೊಬೈಲ್ ಸಂಖ್ಯೆ ನೋಂದಾಯಿಸಿ.
ಅಗತ್ಯ ದಾಖಲೆಗಳನ್ನು (ಫೋಟೋ, ಸಹಿ, ಹೆಬ್ಬೆರಳ ಗುರುತು) ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ.