ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದೀರಾ? BHEL ನಲ್ಲಿ 415 ಟ್ರೈನಿ ಹುದ್ದೆಗಳ ಭರ್ಜರಿ ನೇಮಕಾತಿ, ಆಕರ್ಷಕ ವೇತನ
ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಒಟ್ಟು 415 ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಬೆಂಗಳೂರು: ಸರ್ಕಾರಿ ಕೆಲಸ ಹುಡುಕುತ್ತಿರುವ ಎಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್! ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಒಟ್ಟು 200 ಎಂಜಿನಿಯರ್ ಟ್ರೈನಿ ಮತ್ತು ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಇದರ ಜೊತೆಗೆ ಸಂಸ್ಥೆಯು 215 ಸೂಪರ್ವೈಸರ್ ಟ್ರೈನಿ ಹುದ್ದೆಗಳನ್ನೂ ಸೇರಿಸಿ ಒಟ್ಟು 415 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಸಂಸ್ಥೆ: ಭಾರತೀಯ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
ಹುದ್ದೆಗಳು: ಎಂಜಿನಿಯರ್ ಟ್ರೈನಿ (Engineer Trainee), ಎಕ್ಸಿಕ್ಯೂಟಿವ್ ಟ್ರೈನಿ (Executive Trainee), ಸೂಪರ್ವೈಸರ್ ಟ್ರೈನಿ (Supervisor Trainee).
ಒಟ್ಟು ಖಾಲಿ ಹುದ್ದೆಗಳು: 415 ಹುದ್ದೆಗಳು
ಎಂಜಿನಿಯರ್ / ಎಕ್ಸಿಕ್ಯೂಟಿವ್ ಟ್ರೈನಿ (200 ಹುದ್ದೆಗಳು): ಮೆಕ್ಯಾನಿಕಲ್ (80), ಎಲೆಕ್ಟ್ರಿಕಲ್ (30), ಎಲೆಕ್ಟ್ರಾನಿಕ್ಸ್ (25), ಹಣಕಾಸು (20), ಮಾನವ ಸಂಪನ್ಮೂಲ (20), ಸಿವಿಲ್ (15) ಮತ್ತು ಐಟಿ/ಸಿಎಸ್ (10)
ಸೂಪರ್ವೈಸರ್ ಟ್ರೈನಿ (215 ಹುದ್ದೆಗಳು): ಮೆಕ್ಯಾನಿಕಲ್ (103), ಎಲೆಕ್ಟ್ರಿಕಲ್ (30), ಸಿವಿಲ್ (26), ಹಣಕಾಸು (25), ಮಾನವ ಸಂಪನ್ಮೂಲ (20) ಮತ್ತು ಎಲೆಕ್ಟ್ರಾನಿಕ್ಸ್ (11)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 25, 2026
ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 28, 2026 (ರಾತ್ರಿ 11:45 ರವರೆಗೆ)
ಸಂಭವನೀಯ ಪರೀಕ್ಷಾ ದಿನಾಂಕ: ಜನವರಿ 27, 2027
ಅರ್ಹತೆ:
ಎಂಜಿನಿಯರ್ / ಎಕ್ಸಿಕ್ಯೂಟಿವ್ ಟ್ರೈನಿ (200 ಹುದ್ದೆಗಳು):
ವಿದ್ಯಾರ್ಹತೆ: ಎಂಜಿನಿಯರಿಂಗ್ ವಿಭಾಗಗಳಿಗೆ ಪೂರ್ಣಾವಧಿ ಬಿ.ಇ / ಬಿ.ಟೆಕ್ ಅಥವಾ 5 ವರ್ಷದ ಇಂಟಿಗ್ರೇಟೆಡ್ ಮಾಸ್ಟರ್ಸ್ ಪದವಿ. ಫೈನಾನ್ಸ್ಗೆ ಸಿಎ ಅಥವಾ ಸಿಎಂಎ ಹಾಗೂ ಎಚ್ಆರ್ ವಿಭಾಗಕ್ಕೆ ಸಂಬಂಧಿತ ಸ್ನಾತಕೋತ್ತರ ಪದವಿ/ಎಂಬಿಎ.
ವಯೋಮಿತಿ: ಎಂಜಿನಿಯರ್ ಟ್ರೈನಿಗಳಿಗೆ ಗರಿಷ್ಠ 27 ವರ್ಷ; ಎಕ್ಸಿಕ್ಯೂಟಿವ್ ಟ್ರೈನಿ ಮತ್ತು ಸ್ನಾತಕೋತ್ತರ ಪದವೀಧರರಿಗೆ ಗರಿಷ್ಠ 29 ವರ್ಷ (ಮೀಸಲಾತಿ ವರ್ಗದವರಿಗೆ ಸಡಿಲಿಕೆ ಇದೆ).
ಸೂಪರ್ವೈಸರ್ ಟ್ರೈನಿ (215 ಹುದ್ದೆಗಳು):
ವಿದ್ಯಾರ್ಹತೆ: ತಾಂತ್ರಿಕ ವಿಭಾಗಗಳಿಗೆ ಪೂರ್ಣಾವಧಿ ಎಂಜಿನಿಯರಿಂಗ್ ಡಿಪ್ಲೊಮಾ; ಫೈನಾನ್ಸ್ ವಿಭಾಗಕ್ಕೆ ಬಿ.ಕಾಂ ಹಾಗೂ ಎಚ್ಆರ್ ವಿಭಾಗಕ್ಕೆ ಬಿಬಿಎ/ಬಿಬಿಎಸ್/ಬಿಎಂಎಸ್ ಪದವಿ.
ವಯೋಮಿತಿ: ಎಲ್ಲಾ ವಿಭಾಗಗಳಿಗೆ ಗರಿಷ್ಠ 27 ವರ್ಷ.
ಸಂಬಳ:
ಎಂಜಿನಿಯರ್/ಎಕ್ಸಿಕ್ಯೂಟಿವ್ ಟ್ರೈನಿ: ತರಬೇತಿ ಅವಧಿಯಲ್ಲಿ ₹50,000 ಮೂಲ ವೇತನ (ವಾರ್ಷಿಕ ಅಂದಾಜು ₹12 ಲಕ್ಷ CTC). ತರಬೇತಿ ಬಳಿಕ ₹60,000 - ₹1,80,000 ಶ್ರೇಣಿ.
ಸೂಪರ್ವೈಸರ್ ಟ್ರೈನಿ: ತರಬೇತಿ ಅವಧಿಯಲ್ಲಿ ₹32,000 ಮೂಲ ವೇತನ (ವಾರ್ಷಿಕ ಅಂದಾಜು ₹7.5 ಲಕ್ಷ CTC). ತರಬೇತಿ ಬಳಿಕ ₹33,500 - ₹1,20,000 ಶ್ರೇಣಿ.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಕೆ ವಿಧಾನ:
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: ಮೊದಲಿಗೆ BHEL Careers ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ, ಮುಖಪುಟದಲ್ಲಿರುವ "Current Openings" ವಿಭಾಗವನ್ನು ತೆರೆಯಿರಿ.
ಅಧಿಸೂಚನೆ ಆಯ್ಕೆ ಮಾಡಿ: ಅಲ್ಲಿ ಕಾಣಿಸುವ "Engineer/Executive Trainees (Advt. No. 02/2026)" ಅಥವಾ "Supervisor Trainees (Advt. No. 03/2026)" ಲಿಂಕ್ ಮೇಲೆ ಕ್ಲಿಕ್ ಮಾಡಿ, ಸಂಪೂರ್ಣ ಅಧಿಸೂಚನೆಯನ್ನು ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
ನೋಂದಣಿ ಪೂರ್ಣಗೊಳಿಸಿ: "Apply Online" ಬಟನ್ ಒತ್ತಿ, ನಿಮ್ಮ ಹೆಸರು, ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಿ. ನಿಮ್ಮ ಇಮೇಲ್ ಮತ್ತು ಮೊಬೈಲ್ಗೆ User ID ಮತ್ತು Password ಬರುತ್ತದೆ. (ಗಮನಿಸಿ: ಒಮ್ಮೆ ನೋಂದಣಿ ಮಾಡಿದ ನಂತರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಹುದ್ದೆಯ ವಿವರಗಳನ್ನು ಬದಲಾಯಿಸಲು ಸಾಧ್ಯವಿಲ್ಲ).
ಅರ್ಜಿ ನಮೂನೆ ಭರ್ತಿ ಮಾಡಿ: ಪಡೆದ User ID ಮತ್ತು Password ಬಳಸಿ ಲಾಗಿನ್ ಆಗಿ. ನಿಮ್ಮ ವೈಯಕ್ತಿಕ ವಿವರಗಳು, ವಿಳಾಸ, ಶೈಕ್ಷಣಿಕ ಅರ್ಹತೆ (ಅಂಕಪಟ್ಟಿ ವಿವರ) ಹಾಗೂ ಪರೀಕ್ಷಾ ಕೇಂದ್ರದ ಆದ್ಯತೆಯನ್ನು ನಿಖರವಾಗಿ ಭರ್ತಿ ಮಾಡಿ.
ದಾಖಲೆಗಳನ್ನು ಅಪ್ಲೋಡ್ ಮಾಡಿ: ನಿಗದಿತ ಅಳತೆಯಲ್ಲಿ ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಮತ್ತು ಅಗತ್ಯ ಪ್ರಮಾಣಪತ್ರಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.
ಶುಲ್ಕ ಪಾವತಿಸಿ ಮತ್ತು ಸಲ್ಲಿಸಿ: ಅರ್ಜಿಯಲ್ಲಿ ನಮೂದಿಸಿದ ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿ. ಬಳಿಕ ಆನ್ಲೈನ್ ಮೂಲಕ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI) ಅರ್ಜಿ ಶುಲ್ಕವನ್ನು ಪಾವತಿಸಿ.
ಪ್ರತಿ ಡೌನ್ಲೋಡ್ ಮಾಡಿ: ಅಂತಿಮವಾಗಿ ಅರ್ಜಿ ಸಲ್ಲಿಸಿದ ನಂತರ, ಮುಂದಿನ ದಾಖಲೆ ಪರಿಶೀಲನೆಗಾಗಿ ಅರ್ಜಿ ನಮೂನೆ ಮತ್ತು ಶುಲ್ಕ ರಸೀದಿಯ ಪ್ರಿಂಟ್ಔಟ್ ತೆಗೆದಿಟ್ಟುಕೊಳ್ಳಿ.
ಅರ್ಜಿ ಶುಲ್ಕ:
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ ₹1,072 (ಶುಲ್ಕ + ಪ್ರೊಸೆಸಿಂಗ್ ಫೀ)
SC, ST, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹472 (ಪ್ರೊಸೆಸಿಂಗ್ ಶುಲ್ಕ ಮಾತ್ರ).
ಅರ್ಜಿ ಸಲ್ಲಿಕೆ ಲಿಂಕ್:
ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ.
ಎಂಜಿನಿಯರ್/ಎಕ್ಸಿಕ್ಯೂಟಿವ್ ಟ್ರೈನಿಗಳಿಗೆ ಪರೀಕ್ಷೆಯ ನಂತರ ವೈಯಕ್ತಿಕ ಸಂದರ್ಶನ ಇರುತ್ತದೆ.
ಸೂಪರ್ವೈಸರ್ ಟ್ರೈನಿಗಳಿಗೆ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ನಡೆಯಲಿದೆ.