SSLC ಪಾಸಾದವರಿಗೆ ಸರ್ಕಾರಿ ಕೆಲಸ: ಬೆಂಗಳೂರು ಗ್ರಾಮಾಂತರ ಕೋರ್ಟ್‌ನಲ್ಲಿ 86 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ 67 ಸಾವಿರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು ಜವಾನ, ಬೆರಳಚ್ಚುಗಾರ ಸೇರಿದಂತೆ ಒಟ್ಟು 86 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆ ಕುರಿತ ವರದಿ ಇಲ್ಲಿದೆ:
Bengaluru Rural District Court
ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯOnline Desk
Updated on: 

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಾಲಿ ಇರುವ ಒಟ್ಟು 86 ಜವಾನ, ಬೆರಳಚ್ಚುಗಾರ ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪೂರ್ಣಗೊಳಿಸಿದ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಸರ್ಕಾರಿ ಅವಕಾಶವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ನೇಮಕಾತಿ ಸಂಸ್ಥೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ

  • ಒಟ್ಟು ಹುದ್ದೆಗಳು: 86

    • ಜವಾನ: 36 ಹುದ್ದೆಗಳು

    • ಆದೇಶ ಜಾರಿಕಾರ: 24 ಹುದ್ದೆಗಳು

    • ನಕಲು-ಬೆರಳಚ್ಚುಗಾರ: 18 ಹುದ್ದೆಗಳು

    • ಬೆರಳಚ್ಚುಗಾರ: 08 ಹುದ್ದೆಗಳು

 ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 07 ಅಕ್ಟೋಬರ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ನವೆಂಬರ್ 2026 (ರಾತ್ರಿ 11:59 ರವರೆಗೆ)

 ಅರ್ಹತೆ:

  • ವಿದ್ಯಾರ್ಹತೆ:

    • ಜವಾನ ಮತ್ತು ಆದೇಶ ಜಾರಿಕಾರ: ಎಸ್‌ಎಸ್‌ಎಲ್‌ಸಿ (SSLC / 10ನೇ ತರಗತಿ) ಉತ್ತೀರ್ಣರಾಗಿರಬೇಕು.

    • ಬೆರಳಚ್ಚುಗಾರ ಹುದ್ದೆಗಳು: ದ್ವಿತೀಯ ಪಿಯುಸಿ (II PUC) ಅಥವಾ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಜೊತೆಗೆ ನಿಗದಿತ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು.

  • ವಯೋಮಿತಿ:

    • ಕನಿಷ್ಠ ವಯಸ್ಸು: 18 ವರ್ಷ ತುಂಬಿರಬೇಕು.

    • ಗರಿಷ್ಠ ವಯಸ್ಸು: ಸಾಮಾನ್ಯ ವರ್ಗಕ್ಕೆ (General) 35 ವರ್ಷ.

    • (ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).

Bengaluru Rural District Court
SSLC ಪಾಸಾದವರಿಗೆ ಬಂಪರ್ ಆಫರ್: ಗದಗ ಜಿಲ್ಲಾ ನ್ಯಾಯಾಲಯದಲ್ಲಿ 22 ಹುದ್ದೆಗಳ ನೇಮಕಾತಿ; ₹46,675 ಸಂಬಳ

ಸಂಬಳ: 

  • ಹುದ್ದೆಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ₹27,000 ರಿಂದ ₹67,600 ವರೆಗೆ ಆಕರ್ಷಕ ವೇತನ ಶ್ರೇಣಿ ಇರಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಯಾವುದೇ ಆಫ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಆಸಕ್ತರು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಆದ District Court Bengaluru Rural ಅಥವಾ ನೇರವಾಗಿ Online Recruitment Portal ಲಿಂಕ್ ಮೂಲಕ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

  • ಅರ್ಜಿ ಶುಲ್ಕ

    • ಸಾಮಾನ್ಯ ವರ್ಗ: ₹200

    • ಒಬಿಸಿ (2A, 2B, 3A, 3B): ₹100

    • SC / ST / ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ಇದೆ (ಉಚಿತ).

  •  ಅರ್ಜಿ ಸಲ್ಲಿಕೆ ಲಿಂಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com