BEL Recruitment 2026: ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ತನ್ನ ಬೆಂಗಳೂರು ಕಾಂಪ್ಲೆಕ್ಸ್‌ನಲ್ಲಿರುವ ಎಲೆಕ್ಟ್ರಾನಿಕ್ ವಾರ್‌ಫೇರ್ ಮತ್ತು ಏವಿಯಾನಿಕ್ಸ್ ವಿಭಾಗದಲ್ಲಿ ತಾತ್ಕಾಲಿಕ ಆಧಾರದ ಮೇಲೆ ಖಾಲಿ ಇರುವ 14 ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಯ ವಿವರ:
ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಹುದ್ದೆಯ ಹೆಸರು: ಪ್ರಾಜೆಕ್ಟ್ ಇಂಜಿನಿಯರ್ - I (ಗುತ್ತಿಗೆ ಆಧಾರದ ಮೇಲೆ)
ವಿಭಾಗ: ಎಲೆಕ್ಟ್ರಾನಿಕ್ ವಾರ್‌ಫೇರ್ & ಏವಿಯಾನಿಕ್ಸ್
ಒಟ್ಟು ಹುದ್ದೆಗಳ ಸಂಖ್ಯೆ: 14 ಹುದ್ದೆಗಳು
ಎಲೆಕ್ಟ್ರಾನಿಕ್ಸ್: 08
ಕಂಪ್ಯೂಟರ್ ಸೈನ್ಸ್: 06
ವರ್ಗಾವಾರು ಮೀಸಲಾತಿ: ಸಾಮಾನ್ಯ ವರ್ಗ (UR) - 06, OBC - 04, SC - 02, ST - 01, EWS - 01.
ಕರ್ತವ್ಯ ನಿರ್ವಹಿಸುವ ಸ್ಥಳ: ಜಾಲಹಳ್ಳಿ, ಬೆಂಗಳೂರು
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 09.10.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.10.2026
ಅರ್ಹತೆ:
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ 4 ವರ್ಷಗಳ ಪೂರ್ಣಾವಧಿ B.E. / B.Tech / B.Sc Engineering (ಕನಿಷ್ಠ ಪಾಸ್ ಕ್ಲಾಸ್ ಪಡೆದಿರಬೇಕು)
ಅನುಭವ: 01 ಅಕ್ಟೋಬರ್ 2026 ಕ್ಕೆ ಅನ್ವಯಿಸುವಂತೆ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಸಂಬಂಧಿತ ಕೈಗಾರಿಕಾ ವಲಯದಲ್ಲಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.
ವಯೋಮಿತಿ (01.10.2026 ರಂತೆ): ಗರಿಷ್ಠ ವಯಸ್ಸು: 32 ವರ್ಷ (OBC (NCL) ಅಭ್ಯರ್ಥಿಗಳಿಗೆ: 3 ವರ್ಷ, SC / ST ಅಭ್ಯರ್ಥಿಗಳಿಗೆ: 5 ವರ್ಷ, PwBD ಅಭ್ಯರ್ಥಿಗಳಿಗೆ: 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ)
ಗುತ್ತಿಗೆ ಅವಧಿ:
ಆರಂಭದಲ್ಲಿ 3 ವರ್ಷಗಳು. ಯೋಜನೆಯ ಪ್ರಗತಿ ಮತ್ತು ಕಾರ್ಯಕ್ಷಮತೆ ಆಧಾರದ ಮೇಲೆ ಗರಿಷ್ಠ ಮತ್ತೊಂದು ವರ್ಷ (ಒಟ್ಟು 4 ವರ್ಷಗಳವರೆಗೆ) ವಿಸ್ತರಿಸಬಹುದು.
ಸಂಬಳ:
ಮೊದಲ ವರ್ಷ: ₹50,000/- ಪ್ರತಿ ತಿಂಗಳು. (ಗುತ್ತಿಗೆಯ ಪ್ರತಿ ವಿಸ್ತರಣೆಗೆ ಪ್ರತಿ ತಿಂಗಳು ₹5,000/- ಹೆಚ್ಚಳ.) ಇದರೊಂದಿಗೆ, ವಾರ್ಷಿಕವಾಗಿ ₹12,000 ಹೆಚ್ಚುವರಿ ಭತ್ಯೆ. ಜೊತೆಗೆ, 4 ವರ್ಷಗಳ ಅವಧಿ ಪೂರ್ಣಗೊಳಿಸಿದರೆ ವಾರ್ಷಿಕ ₹25,000/- ರಂತೆ ಒಟ್ಟು ₹1,00,000/- ಬೋನಸ್ ಹಾಗೂ ಗ್ರಾಚ್ಯುಟಿಯನ್ನು ರಿಟೆಂನ್ಷನ್ ಬೋನಸ್ ಆಗಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
BEL ನೇಮಕಾತಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.
ಆಯ್ಕೆ ಪ್ರಕ್ರಿಯೆಯ ದಿನದಂದು ಭರ್ತಿ ಮಾಡಿದ ಅರ್ಜಿಯ ಪ್ರಿಂಟ್‌ಔಟ್, 2 ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು ಮತ್ತು ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕಾಗುತ್ತದೆ.
ಅರ್ಜಿ ಶುಲ್ಕ:
ಶುಲ್ಕ: ₹400 + 18% GST (ಒಟ್ಟು ₹472/-).
ವಿನಾಯಿತಿ: SC, ST ಮತ್ತು PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಗಾಜಿಯಾಬಾದ್ ಅಥವಾ ದೆಹಲಿಯಲ್ಲಿ ನಡೆಯುವ ಸಾಧ್ಯತೆಯಿದೆ.