ನವದೆಹಲಿ: ಮಾಂಜಿ ದಿ ಮೌಂಟೇನ್ ಮ್ಯಾನ್ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿಯ ನಟನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅತ್ಯಂತ ಸ್ಪೂರ್ತಿದಾಯಕ ನಟನೆ ಎಂದಿದ್ದಾರೆ.
ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ಮಾಂಜಿ ದಿ ಮೌಂಟೆನ್ ಮ್ಯಾನ್ ಚಿತ್ರದಲ್ಲಿ ನಿಮ್ಮದು ಅಪೂರ್ವ ನಟನೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಚಿತ್ರ ನಟ ನವಾಜುದ್ದೀನ್ ಸಿದ್ದಿಕಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಅತ್ಯುತ್ತಮ ಕ್ಷಣಗಳನ್ನು ಕಳೆದಿರುವುದಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಮಾಂಜಿ ದಿ ಮೌಂಟೇನ್ ಚಿತ್ರದ ಪ್ರದರ್ಶನ ಆಯೋಜಿಸಿದ್ದ ನವಾಜುದ್ದೀನ್ ಸಿದ್ದಿಕಿಗೆ ಧನ್ಯವಾದ ತಿಳಿಸಿದ್ದಾರೆ.
ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕೇಜ್ರಿವಾಲ್ ಹಾಗು ಅವರ ಸಹೋದ್ಯೋಗಿಗಳು ಭಾಗವಹಿಸಿದ್ದರು. ಚಿತ್ರವನ್ನು ವೀಕ್ಷಿಸಿದ ನಂತರ ಟ್ವೀಟ್ ಮಾಡಿರುವ ಕೇಜ್ರಿವಾಲ್ ಮಾಂಜಿ ದಿ ಮೌಂಟೆನ್ ಮ್ಯಾನ್ ನೋಡಲೇಬೇಕಾದ ಚಿತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇತಾನ್ ಮೆಹ್ತಾ ನಿರ್ದೇಶದ ಮಾಂಜಿ ದಿ ಮೌಂಟೆನ್ ಮ್ಯಾನ್ ಶುಕ್ರವಾರ ಬಿಡುಗಡೆಯಾಗಲಿದೆ.