ಎಂಬತ್ತು-ತೊಂಬತ್ತರ ದಶಕದಲ್ಲಿ ಹಿಂದಿ ಚಿತ್ರರಂಗವನ್ನಾಳಿದ ಹೀರೋಯಿನ್ ಈಗ ಎಲ್ಲರ ನೆನಪಿನಿಂದ ದೂರಾಗಿದ್ದಾಳೆ. ವಿಪರ್ಯಾಸವೆಂದರೆ, ಬಾಲಿವುಡ್ ಸ್ಟಾರ್ ಗಳು ಕೂಡ ಈಕೆಯನ್ನು ಮರೆತೇಬಿಟ್ಟಿದ್ದಾರೆ.
ಆಕೆಯ ಹೆಸರೇ ಮೀನಾಕ್ಷಿ ಶೇಷಾದ್ರಿ. ರಿಶಿ ಕಪೂರ್ ಜೊತೆಗೆ ದಾಮಿನಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಮೀನಾಕ್ಷಿ ಶೇಷಾದ್ರಿ, 90ರ ದಶಕದಲ್ಲೇ ಚಿತ್ರರಂಗ ಬಿಟ್ಟು, ಮದುವೆಯಾಗಿ ಅಮೆರಿಕಕ್ಕೆ ಹೋಗಿದ್ದರು.
ಇಷ್ಟು ವರ್ಷಗಳ ಕಾಲ ಗಂಡ, ಮನೆ, ಮಕ್ಕಳು ಎಂದು ಚಿತ್ರರಂಗದಿಂದ ದೂರವೇ ಇದ್ದ ಮೀನಾಕ್ಷಿ ಶೇಷಾದ್ರಿ ಬಹಳ ದಿನಗಳ ನಂತರ ಮೊನ್ನೆ ಮುಂಬೈಗೆ ಬಂದಿದ್ದರಂತೆ.ಬಂದವರು ತಮ್ಮೆಲ್ಲಾ ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತಾ, ರಿಶಿ ಕಪೂರ್ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಆದರೆ ರಿಶಿ ಕಪೂರ್ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಆದರೆ ರಿಶಿ ಕಪೂರ್ ಎಷ್ಟು ತಲೆ ಕೆರೆದುಕೊಂಡರೂ ಯಾರು ಅಂತ ನೆನಪೇ ಆಗಲಿ ಲ್ವಂತೆ. ಮುಂಬೈಗೆ ಬಂದಿರುವ ಮೀನಾಕ್ಷಿ, ಚಿತ್ರರಂಗಕ್ಕೆ ಬರಲ್ವಂತೆ. ಅವಕಾಶ ಸಿಕ್ಕರೆ ಭರತನಾಟ್ಯದಲ್ಲಿ ತೊಡಗಿ ಸಿಕೊಳ್ಳುವುದುದಾಗಿ ಹೇಳಿಕೊಂಡಿದ್ದಾರೆ.
ನಂತರ ರಿಶಿ ಕಪೂರ್ ಅವರೇ ಸ್ವತಹ ತಮ್ಮ ಬ್ಲಾಗ್ ನಲ್ಲಿ ಇಂದಿನ ಮತ್ತು ಹಿಂದಿನ ತಮ್ಮ ಮತ್ತು ಮೀನಾಕ್ಷಿಯ ಫೊೇಟೋ ಹಾಕಿ ಇವರ ಗುರುತು ಸಿಕ್ಕಿತೇ ಎಂದು ಜನರಲ್ಲಿ ಕೇಳಿದ್ದಾರೆ.