ಸೋಮಿ ಅಲಿ (ಸಂಗ್ರಹ ಚಿತ್ರ) 
ಬಾಲಿವುಡ್

ನನ್ನ 5ನೇ ವರ್ಷ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ: ಬಾಲಿವುಡ್ ನಟಿ ಸೋಮಿ ಅಲಿ

ನನ್ನ ಐದನೇ ವರ್ಷದಲ್ಲಿಯೇ ನಾನು ಲೈಂಗಿಕ ದುರುಪಯೋಗಕ್ಕೆ ಒಳಗಾಗಿದ್ದೆ ಎಂದು 90 ರ ದಶಕದ ಬಾಲಿವುಡ್ ನಟಿ ಸೋಮಿ ಅಲಿ ಹೇಳಿದ್ದಾರೆ...

ಮುಂಬೈ: ನನ್ನ ಐದನೇ ವರ್ಷದಲ್ಲಿಯೇ ನಾನು ಲೈಂಗಿಕ ದುರುಪಯೋಗಕ್ಕೆ ಒಳಗಾಗಿದ್ದೆ ಎಂದು 90 ರ ದಶಕದ ಬಾಲಿವುಡ್ ನಟಿ ಸೋಮಿ ಅಲಿ ಹೇಳಿದ್ದಾರೆ.

ಖಾಸಗಿ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋಮಿ ಅಲಿ, ಮನೆಯ ಸಹಾಯಕನೇ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆಗ ನನಗೆ ವಯಸ್ಸು ಕೇವಲ 5 ವರ್ಷವಾಗಿತ್ತು. ಕ್ರಮೇಣ ನಾನು ಬೆಳೆಯುತ್ತ ನನ್ನಂತೆಯೇ ನಮ್ಮ ಸುತ್ತಮುತ್ತಲಿನಲ್ಲಿ ಬಳಲುತ್ತಿದ್ದ ಹೆಣ್ಣುಮಕ್ಕಳನ್ನು ಗಮನಿಸುತ್ತಿದ್ದೆ. ನಮ್ಮ ಸಂಬಂಧಿಕರು ಮತ್ತು ನನ್ನ ತಾಯಿಯ ಸ್ನೇಹಿತೆಯರೂ ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಅದರೆ ಅವರಾರು ಈ ಬಗ್ಗೆ ಧನಿ ಎತ್ತುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮಹಿಳಾ ದೌರ್ಜನ್ಯ ಕುರಿತಂತೆ ತಮ್ಮದೇ ಆದ ನೋಮೋರ್ ಟಿಯರ್ಸ್ (ಎನ್ ಎಂ ಟಿ) ಎಂಬ ಎನ್ ಜಿಒ ಸಂಸ್ಥೆಯನ್ನು ಸ್ಥಾಪಿಸಿರುವ ಸೋಮಿ ಅಲಿ ಅವರು, ಮಹಿಳಾ ದೌರ್ಜನ್ಯವಿರುದ್ಧ ಹೋರಾಟ ಮಾಡುತ್ತಿದ್ದಾರೆ. ತಮ್ಮ ಎನ್ ಜಿಒ ಸ್ಥಾಪನೆಯಾಗಿ 8 ವರ್ಷ ಕಳೆದ ಹಿನ್ನಲೆಯಲ್ಲಿ ವಾರ್ಷಿಕೋತ್ಸವ ಸಂಭ್ರದ ಕಾರ್ಯಕ್ರಮದ ವೇಳೆ ಸೋಮಿ ಅಲಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಇದೇ ವೇಳೆ ತಮ್ಮ ಮತ್ತು ನಟ ಸಲ್ಮಾನ್ ಖಾನ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಸೋಮಿ ಅಲಿ, ನಾನು ಮತ್ತು ಸಲ್ಮಾನ್ ಖಾನ್ ಉತ್ತಮ ಸ್ನೇಹಿತರಾಗಿದ್ದೆವು ಎಂದು ಹೇಳಿದ್ದಾರೆ.

ನಟ ಸಲ್ಮಾನ್ ಖಾನ್ ಸೋಮಿ ಅಲಿ ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದರು ಎಂಬ ಊಹೋಪೋಹದ ಕುರಿತು ಮಾತನಾಡಿದ ಸೋಮಿ ಅಲಿ, ನಾನು ಸಲ್ಮಾನ್ ಖಾನ್ ರ ಧೂಮಪಾನ ಮತ್ತು ಮಧ್ಯಪಾನ ಚಟವನ್ನು ದ್ವೇಷಿಸುತ್ತಿದ್ದೆ. ಹೀಗಾಗಿ ಅದನ್ನು ಬಿಡುವಂತೆ ಸಲ್ಮಾನ್ ಗೆ ಒತ್ತಾಯ ಮಾಡಿದ್ದೆ. ಆಗ ಸಿಟ್ಟುಕೊಂಡ ಸಲ್ಮಾನ್ ನನ್ನನ್ನು ಟೇಬಲ್ ನತ್ತ ತಳ್ಳಿದ್ದರೇ ಹೊರತು ತಲೆಗೆ ಹೊಡೆದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

90ರ ದಶಕದ ಬಾಲಿವುಡ್ ನ ಯಶಸ್ವಿ ಜೋಡಿಗಳಲ್ಲಿ ಸಲ್ಮಾನ್ ಮತ್ತು ಸೋಮಿ ಅಲಿ ಅವರ ಜೋಡಿ ಕೂಡ ಒಂದು. ಮೂಲತಃ ಪಾಕಿಸ್ತಾನ ಮೂಲದವರಾದ ಸೋಮಿ ಅಲಿ ಅವರು, ಸತತ 8 ವರ್ಷಗಳ ಸಲ್ಮಾನ್ ರೊಂದಿಗೆ ಸುತ್ತಾಡಿದ್ದರು.

1999-2000ರಲ್ಲಿ ಸಲ್ಮಾನ್ ಖಾನ್ ರೊಂದಿಗಿನ ಪ್ರೀತಿಯನ್ನು ಕಡಿದುಕೊಂಡ ಸೋಮಿ ಅಲಿ, ಫ್ಲೋರಿಡಾಗೆ ಶಿಫ್ಟ್ ಆದರು. ಅಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ನೋಮೋರ್ ಟಿಯರ್ಸ್ (ಎನ್ ಎಂಟಿ) ಎಂಬ ಎನ್ ಜಿಒ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ