ಪ್ರಿಯಾಂಕಾ ಚೋಪ್ರಾ-ಕಲ್ಪನಾ ಚಾವ್ಲಾ 
ಬಾಲಿವುಡ್

ಕಲ್ಪನಾ ಚಾವ್ಲಾ ಪಾತ್ರದಲ್ಲಿ ಪಿಂಕಿ ಚೋಪ್ರಾ

ಜಗತ್ತಿಗೆ ಬಾಲಿವುಡ್ ಇನ್ನೊಂದು ಸಿಹಿ ಹಂಚುತ್ತಿದೆ. ಗಗನಯಾತ್ರಿ ಕಲ್ಪನಾ ಚಾವ್ಲಾ ಈಗ ಸಿನಿಮಾ...

ಜಗತ್ತಿಗೆ ಬಾಲಿವುಡ್ ಇನ್ನೊಂದು ಸಿಹಿ ಹಂಚುತ್ತಿದೆ. ಗಗನಯಾತ್ರಿ ಕಲ್ಪನಾ ಚಾವ್ಲಾ ಈಗ ಸಿನಿಮಾ ಆಗ್ತಿದ್ದಾರೆ! 
2003ರಲ್ಲಿ ನಾಸಾದ ವ್ಯೋಮಾನೌಕೆಯಲ್ಲಿ ಭೂಮಿಗೆ ವಾಪಸಾಗುತ್ತಿದ್ದಾಗ ಆಕಸ್ಮಿಕ ಅವಘಡದಲ್ಲಿ ಅಮರಳಾದ ಕಲ್ಪನಾ ಚಾವ್ಲಾ ಬದುಕಿನ ಬಗ್ಗೆ ಕುತೂಹಲವಂತೂ ಇದ್ದೇ ಇದೆ. 31 ದಿನ, 14 ಗಂಟೆ, 54 ನಿಮಿಷ ಆಗಸದಲ್ಲಿ ಕಳೆದ ಈಕೆಯ ಅನುಭವ ಇಲ್ಲಿಯ ತನಕ ಬಹಿರಂಗಗೊಂಡಿಲ್ಲ. 
ಅವನ್ನೆಲ್ಲ ತೆರೆಮೇಲೆ ತೋರಿಸುವುದಾದರೆ ಸಿನಿಮಾ ರೋಚಕಗೊಳ್ಳುವುದು ನಿಶ್ಚಿತ. ಅಂದಹಾಗೆ, ಇಲ್ಲಿ ಕಲ್ಪನಾ ಚಾವ್ಲಾ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಪ್ರಿಯಾಂಕಾ ಚೋಪ್ರಾ! `ವಯಾಕಾಮ್ 18' ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಪ್ರೊಡಕ್ಷನ್ ಸಂಸ್ಥೆ ಈಗಾಗಲೇ ಪ್ರಿಯಾಂಕಾ ಚೋಪ್ರಾಳೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದೆ. 
ಪಿಂಕಿ ಈ ಕತೆಯನ್ನು ಒಪ್ಪಿ, ನಟಿಸಲು ಆಸಕ್ತಿಯನ್ನೂ ತೋರಿಸಿದ್ದಾರಂತೆ. ಈಗಾಗಲೇ ಮೇರಿಕೋಂ ಬಯೋಪಿಕ್‍ನಲ್ಲಿ ನಟಿಸಿ, ಯಶಸ್ಸು ಕಂಡ ಪಿಂಕಿಗೆ ಇದು ಎರಡನೇ ಜೀವನಚಿತ್ರ. ಪಿಂಕಿ ಈಗ ಅಮೆರಿಕದ `ಕ್ವಾಂಟಿಕೋ' ಟಿವಿ ಶೋ ಮತ್ತು `ಬಾಜಿರಾವ್ ಮಸ್ತಾನಿ' ಚಿತ್ರೀಕರಣದ ಬ್ಯುಸಿಯಲ್ಲಿದ್ದಾಳೆ. 
`ಬಾಜೀರಾವ್ ಮಸ್ತಾನಿ'ಯಲ್ಲಿ ಮರಾಠಾ ಪೇಶ್ವೆ ಬಾಜೀರಾವ್‍ನ ಮೊದಲನೇ ಪತ್ನಿ ಕಾಶಿಬಾಯಿ ಆಗಿ ನಟಿಸುತ್ತಿದ್ದರೂ ಈ ಪಾತ್ರ ಸಂಪೂರ್ಣ ಬಯೋಪಿಕ್ ಅಲ್ಲ. ಇದರ ಶೂಟಿಂಗ್ ಮುಗಿದ ಮೇಲೆ ಪಿಂಕಿ ಮತ್ತೆ ಅಮೆರಿಕದತ್ತ ಮುಖ ಮಾಡಲಿದ್ದಾರಂತೆ. ನಾಸಾಗೆ ಭೇಟಿಕೊಟ್ಟು ಕಲ್ಪನಾ ಚಾವ್ಲಾ ಬಗ್ಗೆ ಸ್ಟಡಿ ಮಾಡಲಿದ್ದಾರಂತೆ. ಒಟ್ಟಿನಲ್ಲಿ ಪಿಂಕಿಗೆ ಭಾರತ- ಅಮೆರಿಕ ಓಡಾಟ ಇನ್ನೂ ಹೆಚ್ಚುವುದಂತೂ ಗ್ಯಾರಂಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!