ಮುಂಬಯಿ: ನಟರು ವರುಣ್ ಧವನ್, ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ತಾಪ್ಸೆ ಪನ್ನೂ ಅಭಿನಯದ "ಜುದ್ವಾ -2" 16 ದಿನಗಳಲ್ಲಿ ರೂ 200 ಕೋಟಿ ದಾಟಿದೆ.
1997 ರ ಸಲ್ಮಾನ್ ಖಾನ್-ರ "ಜುಡ್ವಾ" ದ ನೂತನ ಅವತರಿಣಿಕೆಯನ್ನು ಡೇವಿಡ್ ಧವನ್ "ಜುಡ್ವಾ - 2" ಹೆಸರಿನಲ್ಲಿ ನಿರ್ದೇಶಿಸಿದ್ದರು. ಚಿತ್ರವು ಸೆ.29 ರಂದು ತೆರೆ ಕಂದಿತ್ತು.
ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಮತ್ತು ಸಾಜಿದ್ ನದಿದ್ವಾಲಾ ಅವರ ನಿರ್ಮಾಣದಲ್ಲಿ ಆಕ್ಷನ್-ಹಾಸ್ಯ ಮಿಶ್ರಿತ ಚಿತ್ರ 2.65 ಕೋಟಿ ರೂ. ಗಳಿಕೆಯೊಂದಿಗೆ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ಇದರ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹ 130.21 ಕೋಟಿ ರೂ. ಎಂದು ಚಿತ್ರ ತಂದ ಹೇಳಿಕೆಯಲ್ಲಿ ತಿಳಿಸಿದೆ.
ಗಲ್ಲಾ ಪೆಟ್ಟಿಗೆಯಲ್ಲಿ ಚಿತ್ರ ಒಟ್ಟಾರೆ 203.33 ಕೋಟಿ ರೂ.ಗಳಿಸಿದ್ದು ವರುಣ್ ತಮ್ಮ ಐಕಾನಿಕ್ ಲುಕ್ ಗೆ ಮರಳಿದ್ದಾರೆ. "ಜುದ್ವಾ 2" ದಲ್ಲಿ ವರುಣ್, ಸಲ್ಮಾನ್ ರ ಪ್ರೇಮ್ ಮತ್ತು ರಾಜ. ಆಗಿ ನಟಿಸಿದ್ದರೆ ಜಾಕ್ವೆಲಿನ್ ಮತ್ತು ತಾಪ್ಸೆ ಅನುಕ್ರಮವಾಗಿ ಕರಿಷ್ಮಾ ಕಪೂರ್ ಮತ್ತು ರಂಭಾ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.