ನಟಿ ಮಲ್ಲಿಕಾ ಶೆರಾವತ್ ಮತ್ತು ಅವರ ಪತಿ ಸಿರಿಲ್ ಆಕ್ಸೆನ್ ಫನ್ಸ್ 
ಬಾಲಿವುಡ್

ಮನೆ ಬಾಡಿಗೆ ಕಟ್ಟದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ರನ್ನು ಹೊರ ಹಾಕಿದ ಫ್ರಾನ್ಸ್ ಕೋರ್ಟ್!

ಮನೆ ಬಾಡಿಗೆ ಕಟ್ಟಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ಮಲ್ಲಿಕಾ ಶೆರಾವತ್ ರನ್ನು ಫ್ರಾನ್ಸ್ ಕೋರ್ಟ್ ಮನೆಯಿಂದ ಹೊರೆಗೆ ಹಾಕಿದೆಯಂತೆ.

ಪ್ಯಾರಿಸ್: ಮನೆ ಬಾಡಿಗೆ ಕಟ್ಟಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ಮಲ್ಲಿಕಾ ಶೆರಾವತ್ ರನ್ನು ಫ್ರಾನ್ಸ್ ಕೋರ್ಟ್ ಮನೆಯಿಂದ ಹೊರೆಗೆ ಹಾಕಿದೆಯಂತೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿರುವ ಮಲ್ಲಿಕಾ ಶರಾವತ್ ಅವರ ಫ್ಲ್ಯಾಟ್ ಬಾಡಿಗೆ 94 ಸಾವಿರ ಡಾಲರ್ ಹಣ ಕಟ್ಟಿಲ್ಲ ಎಂದು ಫ್ರಾನ್ಸ್ ಕೋರ್ಟ್ ಅವರನ್ನು ಹೊರಗೆ ಹಾಕಿದೆ. ಮಲ್ಲಿಕಾ  ಉಳಿದುಕೊಂಡಿರುವ ಫ್ಲ್ಯಾಟ್ ನ ಮಾಲೀಕ ಈ ಬಗ್ಗೆ ಪ್ಯಾರಿಸ್ ಕೋರ್ಟ್ ಗೆ ದೂರು ನೀಡಿ ಮಲ್ಲಿಕಾ ಶೆರಾವತ್ ಅವರು, 78,787 ಯೂರೋ (ಸುಮಾರು 60 ಲಕ್ಷ) ಬಾಡಿಗೆ ನೀಡಬೇಕು ಎಂದು ಆರೋಪಿಸಿದ್ಗರು. ಮಲ್ಲಿಕಾ ಮತ್ತು ಅವರ  ಪತಿ 2017 ಜನವರಿ 1ರಿಂದಲೇ ಫ್ಲಾಟ್ ನಲ್ಲಿ ವಾಸಿಸಲು ಆರಂಭಿಸಿದ್ದರು. ಬಾಡಿಗೆಯಾಗಿ ಮಾಸಿಕ 6,054 ಯೂರೋ (4.6 ಲಕ್ಷ ರು.) ನೀಡುವ ಕುರಿತು ಕರಾರು ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಹೇಳಿದ್ದರು. 
ಇದಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 14ರಂದೇ ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಪ್ಯಾರಿಸ್ ಕೋರ್ಟ್ ಮಲ್ಲಿಕಾ ಅವರ ಪತಿ ಫ್ರೆಂಚ್ ಮೂಲದ ಸಿರಿಲ್ ಆಕ್ಸೆನ್ ಫನ್ಸ್ ಅವರಿಗೆ ಕೂಡಲೇ ಬಾಡಿಗೆ ಪಾವತಿ  ಮಾಡುವಂತೆ ಆದೇಶಿಸಿತ್ತು. ಆದರೆ ಮಲ್ಲಿಕಾ ಪತಿ ಕೋರ್ಟ್ ಆದೇಶದಂತೆ ಹಣ ನೀಡಿದರಾದರೂ, ಕೇವಲ 2,715 ಯೂರೋ (2 ಲಕ್ಷ ರು.)ಗಳನ್ನು ಮಾತ್ರ ನೀಡಿದ್ದರು. ಈ ಬಗ್ಗೆ ಮತ್ತೆ ಫ್ಲ್ಯಾಟ್ ಮಾಲೀಕ ಕೋರ್ಟ್ ಮೊರೆ ಹೋಗಿದ್ದರು.   ಇದೀಗ ಬಾಡಿಗೆ ಪಾವತಿ ಮಾಡದ ಕಾರಣ ಸ್ವತಃ ಪ್ಯಾರಿಸ್ ಕೋರ್ಟ್ ಮಲ್ಲಿಕಾ ಮತ್ತು ಅವರ ಪತಿಯನ್ನು ಮನೆಯಿಂದ ಹೊರಗೆ ಹಾಕಿದೆ. ಅಲ್ಲದೆ ಅವರ ಮನೆಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದು, ಬಾಡಿಗೆ ರೂಪದಲ್ಲಿ ಬರ  ಬೇಕಿರುವ ಹಣವನ್ನು ಇದರ ಮೂಲಕ ಸ್ವೀಕರಿಸುವಂತೆ ಮಾಲೀಕರಿಗೆ ಸೂಚನೆ ನೀಡಿದೆ.
ಇನ್ನು ಇದೇ ವಿಚಾರ ಸಂಬಂಧ ಈ ಹಿಂದೆ ಎದ್ದಿದ್ದ ಸುದ್ದಿಗೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾ, ಕೆಲವರು ಪ್ಯಾರಿಸ್’ನಲ್ಲಿ ನಾನು ಅಪಾರ್ಟ್ ಮೆಂಟ್ ಹೊಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ   ಇದ್ಯಾವುದು ಕೂಡ ಸತ್ಯವಲ್ಲ, ಆದರೆ ಯಾರಾದರೂ ನನಗೆ ಕೊಡುಗೆ ನೀಡುವುದಾದಲ್ಲಿ ನಿಮ್ಮ ಅಡ್ರೆಸ್ ಕಳುಹಿಸಿ ಎಂದು ಹೇಳಿದ್ದರಲ್ಲದೇ, ಈಗ ಹಬ್ಬಿರುವ ಸುದ್ದಿಗಳೆಲ್ಲಾ ಶುದ್ಧ ಸುಳ್ಳು ಎಂದು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

SCROLL FOR NEXT