ಕಂಗನಾ ರಣಾವತ್ 
ಬಾಲಿವುಡ್

ಮಣಿಕರ್ಣಿಕ ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ಇತಿಹಾಸದ ಘಟನೆಗಳನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ ಮಣಿಕರ್ಣಿಕ ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈ...

ಇತಿಹಾಸದ ಘಟನೆಗಳನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ ಮಣಿಕರ್ಣಿಕ ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈ ಕೋರ್ಟ್ ವಜಾ ಮಾಡಿದ್ದು ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. 
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿದ್ದಾರೆ. ಮಣಿಕರ್ಣಿಕ ಚಿತ್ರ ನಾಳೆ ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. 
ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ವಕೀಲರಾದ ವಿವೇಕ್ ತಂಬೆ ಅವರು ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ಮಣಿಕರ್ಣಿಕ ಚಿತ್ರದಲ್ಲಿ ಲಕ್ಷ್ಮೀಬಾಯಿ ಅವರ ಜನನದ ವರ್ಷವನ್ನು 1828 ಎಂದು ತೋರಿಸಲಾಗಿದೆ ಆದರೆ ನಿಜವಾಗಿ ಲಕ್ಷ್ಮೀಬಾಯಿ ಅವರ ಜನನದ ವರ್ಷ 1835 ಎಂದು ತಿಳಿಸಿದ್ದಾರೆ. ಹೀಗೆ ಹಲವು ವಿಷಯಗಳ ಬಗ್ಗೆ ವಕೀಲರು ತಮ್ಮ ಅರ್ಜಿಯಲ್ಲಿ ನಮೂದಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್