ವಿಕ್ಕಿ ಕೌಶಲ್, ಕತ್ರಿನಾ ಕೈಫ್ 
ಬಾಲಿವುಡ್

ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮದುವೆ: ಕಬೀರ್ ಖಾನ್, ಆನಂದ್ ತಿವಾರಿ ಮತ್ತಿತರ ಗಣ್ಯರಿಗೆ ಆಹ್ವಾನ

ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಮದುವೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.  ರಾಜಸ್ಥಾನದ ಸೆನ್ಸ್ ಪೋರ್ಟ್ ಬರ್ವಾರಾ ಅರಮನೆಯಲ್ಲಿ ಡಿಸೆಂಬರ್ 7 ರಿಂದ 9ರವರೆಗೆ ಮೂರು ದಿನಗಳ ಕಾಲ ಅದ್ದೂರಿ ವಿವಾಹ ಮಹೋತ್ಸವ ನಡೆಯಲಿದೆ. 

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಮದುವೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ರಾಜಸ್ಥಾನದ ಸೆನ್ಸ್ ಪೋರ್ಟ್ ಬರ್ವಾರಾ ಅರಮನೆಯಲ್ಲಿ ಡಿಸೆಂಬರ್ 7 ರಿಂದ 9ರವರೆಗೆ ಮೂರು ದಿನಗಳ ಕಾಲ ಅದ್ದೂರಿ ವಿವಾಹ ಮಹೋತ್ಸವ ನಡೆಯಲಿದೆ. 

ಈ ಹೈ ಪ್ರೊಫೈಲ್ ಮದುವೆಯಲ್ಲಿ ನಿರ್ದೇಶಕ ಕಬೀರ್ ಖಾನ್, ನಿರ್ಮಾಪಕ ಅಮೃತ್ ಪಾಲ್ ಸಿಂಗ್ ಬಿಂದ್ರಾ ಮತ್ತು ನಿರ್ದೇಶಕ ಆನಂದ್ ತಿವಾರಿ ಮತ್ತಿತರ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕತ್ರಿನಾ ಕೈಫ್ ಅವರೊಂದಿಗೆ ಕಬೀರ್ ಒಳ್ಳೆಯ ಬಾಂಧವ್ಯ ಹೊಂದಿರುವುದನ್ನು ಹಂಚಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದ 'ನ್ಯೂ ಯಾರ್ಕ್,  ಏಕ್ ಥಾ ಟೈಗರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕತ್ರಿನಾ ಕೈಫ್ ಅಭಿನಯಿಸಿದ್ದಾರೆ. ಆನಂದ್ ತಿವಾರಿ 2018ರಲ್ಲಿ ವಿಕ್ಕಿ ಚಿತ್ರವನ್ನು ನಿರ್ದೇಶಿಸಿದ್ದರು. 

ಚಿತ್ರ ನಿರ್ದೇಶಕ ಕರಣ್ ಜೋಹರ್ ಕೂಡಾ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ವಿವಾಹದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಸೂಚನೆಗೆ ಕ್ಯಾರೆ ಎನ್ನದ ಇಸ್ರೇಲ್: ಇರಾನ್ ಮೇಲೆ ವೈಮಾನಿಕ ದಾಳಿ; ಟೆಹ್ರಾನ್ ವಾಯುಪ್ರದೇಶ ಬಂದ್, ಯುದ್ಧ ಪುನರಾರಂಭ ಸಾಧ್ಯತೆ

2028ರ ಚುನಾವಣಾ ತಯಾರಿಯಲ್ಲಿ ಕಾಂಗ್ರೆಸ್! ಬಿಜೆಪಿ-ಜೆಡಿಎಸ್ ಮತ ವಿಭಜನೆಯ ಚಿಂತೆ; ಉಳಿಯುತ್ತಾ NDA ಮೈತ್ರಿ?

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರ ಬಂದ್; ‘ಪ್ರತಿದಾಳಿ ಬೇಡ’- ನೆತನ್ಯಾಹುಗೆ ಟ್ರಂಪ್ ಖಡಕ್ ಸಂದೇಶ

ಸಾಮಾನ್ಯವಾದ ನೀರಿನ ಬಾಟಲಿಗೂ ವಿಮಾನ ನಿಲ್ದಾಣಗಳು ಹೆದರುತ್ತವೇಕೆ?

'You're Crooked': ಪರ್ತಕರ್ತೆ ಕೇಳಿದ ಪ್ರಶ್ನೆಗೆ ಬೆಚ್ಚಿದ ಅಮೆರಿಕ ಅಧ್ಯಕ್ಷ, TV ಸಂದರ್ಶನ ಮೊಟಕುಗೊಳಿಸಿ, ಮಧ್ಯದಲ್ಲಿಯೇ ಹೊರನಡೆದ ಟ್ರಂಪ್! Video

SCROLL FOR NEXT