ಸಂಗೀತ ಮಾಂತ್ರಿಕ ಎ.ಆರ್. ರಹಮಾನ್ 
ಬಾಲಿವುಡ್

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಮ್ಮ ಇಬ್ಬರು ಪುತ್ರಿಯರಿಗೆ ನೀಡಿದ ಅಮೂಲ್ಯ ಸಲಹೆ

ತಂದೆಯ ಹಾದಿಯಲ್ಲೇ ಸಾಗುತ್ತಿರುವ ಇಬ್ಬರೂ ಪುತ್ರಿಯರು ಈಗಾಗಲೇ ಆನ್ ಲೈನಿನಲ್ಲಿ ಅಪಾರ ಅಭಿಮಾನಿಗಳು ಹಾಗೂ ಫಾಲೋವರ್ ಗಳನ್ನು ಹೊಂದಿದ್ದಾರೆ.

ನವದೆಹಲಿ: ತಮ್ಮ ಮಕ್ಕಳು ಬೆಳೆಯುವುದನ್ನು ನೋಡಿ ಆನಂದಿಸದ ಪಾಲಕರಿಲ್ಲ. ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಕೂಡಾ ಅದಕ್ಕೆ ಹೊರತಾಗಿಲ್ಲ. ಅವರಿಗೆ ಇಬ್ಬರು ಪುತ್ರಿಯರು. ರಹೀಮಾ ರಹಮಾನ್ ಮತ್ತು ಖತೀಜಾ ರಹಮಾನ್.

ರೆಹಮಾನ್ ಅವರ ಇಬ್ಬರು ಪುತ್ರಿಯರೂ ಸಂಗೀತ ಸಾಧನೆಯಲ್ಲಿ ತೊಡಗಿದ್ದಾರೆ. ಅವರಿಬ್ಬರೂ ಈಗಾಗಲೇ ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂದೆಯ ಜೊತೆ ವೇದಿಕೆ ಮೇಲೆ ಸಂಗೀತ ಪ್ರದರ್ಶನ ನೀಡಿದ್ದಾರೆ. 

ತಂದೆಯ ಹಾದಿಯಲ್ಲೇ ಸಾಗುತ್ತಿರುವ ಇಬ್ಬರೂ ಪುತ್ರಿಯರು ಈಗಾಗಲೇ ಆನ್ ಲೈನಿನಲ್ಲಿ ಅಪಾರ ಅಭಿಮಾನಿಗಳು ಹಾಗೂ ಫಾಲೋವರ್ ಗಳನ್ನು ಹೊಂದಿದ್ದಾರೆ. ತಮ್ಮ ಪುತ್ರಿಯರಿಗೆ ಎ.ಆರ್ ರೆಹಮಾನ್ ನೀಡುವ ಅಮೂಲ್ಯ ಸಲಹೆ ಎಂದರೆ ಹೋಲಿಕೆ ಮಾಡದಿರುವುದು.

ತಾವು ಹೆಸರಾಂತ ಸಂಗೀತಗಾರನಾಗಿರುವುದರಿಂದ ಜನರು ಪುತ್ರಿಯರ ಸಂಗೀತವನ್ನು ತಮ್ಮ ಸಂಗೀತಕ್ಕೆ ಹೋಲಿಕೆಯನ್ನು ಸಹಜವಾಗಿ ಮಾಡುತ್ತಾರೆ. ಆದರೆ ಪುತ್ರಿಯರು ಅಂಥಾ ಹೋಲಿಕೆಯನ್ನು ತಮಗೆ ತಾವೇ ಮಾಡಿಕೊಳ್ಲಬಾರದು. ಶ್ರದ್ಧೆಯಿಂದ ಸಂಗೀತದ ಕೆಲಸದಲ್ಲಿ ತೊಡಗಿಕೊಳ್ಳುವುದಷ್ಟನ್ನೇ ಮಾಡಿದರೆ ಸಾಕು ದೇವರು ಅವರನ್ನು ಹರಸುತ್ತಾನೆ ಎಂದು ಎ.ಆರ್ ರೆಹಮಾನ್ ಹೇಳಿದ್ದಾರೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ