ಕಂಗನಾ ರಣಾವತ್ 
ಬಾಲಿವುಡ್

ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರುವುದು ಖುಷಿಯ ವಿಚಾರ: ಕಂಗನಾ ರಣಾವತ್

ಚಿತ್ರರಂಗದ ಶ್ರೀಮಂತ ಮತ್ತು ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆಯಾಗುತ್ತಿರುವ ಮೂಲಕ ಸಂಪ್ರದಾಯ ಮುರಿಯುತ್ತಿದ್ದಾರೆ ಎಂದು ಬಾಲಿವುಡ್ ನಡಿ ಕಂಗನಾ ರಣಾವತ್ ಹೇಳಿದ್ದಾರೆ.

ಚಿತ್ರರಂಗದ ಶ್ರೀಮಂತ ಮತ್ತು ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆಯಾಗುತ್ತಿರುವ ಮೂಲಕ ಸಂಪ್ರದಾಯ ಮುರಿಯುತ್ತಿದ್ದಾರೆ ಎಂದು ಬಾಲಿವುಡ್ ನಡಿ ಕಂಗನಾ ರಣಾವತ್ ಹೇಳಿದ್ದಾರೆ.

ಈಗ ಅವರು ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಎಲ್ಲಿಯೂ ಈ ಜೋಡಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ಹಾಗಿದ್ದರೂ ಅವರು ಹೇಳಿರುವುದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್​ ಕುರಿತಾಗಿಯೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರುವುದು ನೋಡಲು ಖುಷಿ ಆಗುತ್ತದೆ ಎಂದು ಕಂಗನಾ ರಣಾವತ್​ ಅವರು ತಮ್ಮ ಇನ್​ಸ್ಟಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಯಶಸ್ವಿ ಪುರುಷರು ವಯಸ್ಸಿನಲ್ಲಿ ತಮಗಿಂತ ತುಂಬ ಕಿರಿಯರಾದ ಮಹಿಳೆಯರ ಜತೆ ಮದುವೆ ಆದ ಕಥೆಗಳನ್ನು ಕೇಳುತ್ತ ನಾವು ಬೆಳೆದೆವು. ಗಂಡನಿಗಿಂತ ಹೆಂಡತಿಯೇ ಹೆಚ್ಚು ಸಾಧನೆ ಮಾಡಿದರೆ ಅದನ್ನು ಮಹಿಳೆಯರ ಪಾಲಿಗೆ ಒಂದು ಬಿಕ್ಕಟ್ಟಿನ ರೀತಿ ನೋಡಲಾಗುತ್ತಿತ್ತು.

ಚಿಕ್ಕ ವಯಸ್ಸಿನ ಹುಡುಗರನ್ನು ಮದುವೆ ಮಾಡಿಕೊಳ್ಳುವುದು ಹಾಗಿರಲಿ, ಒಂದು ವಯಸ್ಸು ದಾಟಿದ ನಂತರ ಮಹಿಳೆಯರು ಮದುವೆ ಆಗುವುದೇ ಅಸಾಧ್ಯವಾಗಿತ್ತು. ಆದರೆ ಈಗ ಭಾರತೀಯ ಶ್ರೀಮಂತ ಮಹಿಳೆಯರು, ಯಶಸ್ವಿ ನಟಿಯರು ಆ ಎಲ್ಲ ಹಳೆಯ ನಿಯಮಗಳನ್ನು ಮುರಿಯುತ್ತಿರುವುದು ನೋಡಲು ಖುಷಿ ಆಗುತ್ತದೆ. ಲಿಂಗ ಸಮಾನತೆ ಬಗೆಗಿನ ದೃಷ್ಟಿಕೋನ ಬದಲಿಸುತ್ತಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಅಭಿನಂದನೆಗಳು’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ನಟಿ ಕತ್ರಿನಾ ಕೈಫ್ ಡಿಸೆಂಬರ್ 9 ರಂದು ರಾಜಸ್ಥಾನದ ರಾಜಮನೆತನದ ಕೋಟೆಯಲ್ಲಿ ನಟ ವಿಕ್ಕಿ ಕೌಶಲ್​ರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರು ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ನಾಳೆ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಕಂಗನಾ ಕೂಡ ಶೀಘ್ರದಲ್ಲೇ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ತಾರೆಯರಾದ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಅವರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ಮದುವೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!