ಪ್ರಿಯಾಂಕಾ ಚೋಪ್ರಾ 
ಬಾಲಿವುಡ್

'ನಿಕ್ ಜೋನಸ್ ಪತ್ನಿ' ಎಂದು ಸಂಬೋಧಿಸಿದ ಮಾಧ್ಯಮದ ವಿರುದ್ಧ ಪ್ರಿಯಾಂಕಾ ಚೋಪ್ರಾ ತೀವ್ರ ಕಿಡಿ

ತಮ್ಮ ಮುಂಬರುವ ಚಿತ್ರ "ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್‌" ಪ್ರಚಾರದಲ್ಲಿ ನಿರತರಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ತಮ್ಮನ್ನು ಮಾಧ್ಯಮ ಸಂಸ್ಥೆಯೊಂದು ವರದಿಯಲ್ಲಿ ನಿಕ್ ಜೋನಸ್ ಪತ್ನಿ ಎಂದು ಸಂಭೋಧಿಸಿದ್ದಕ್ಕೆ ತೀವ್ರ ಕಿಡಿಕಾರಿದ್ದಾರೆ.

ಮುಂಬೈ: ತಮ್ಮ ಮುಂಬರುವ ಚಿತ್ರ "ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್‌" ಪ್ರಚಾರದಲ್ಲಿ ನಿರತರಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ತಮ್ಮನ್ನು ಮಾಧ್ಯಮ ಸಂಸ್ಥೆಯೊಂದು ವರದಿಯಲ್ಲಿ ನಿಕ್ ಜೋನಸ್ ಪತ್ನಿ ಎಂದು ಸಂಬೋಧಿಸಿದ್ದಕ್ಕೆ ತೀವ್ರ ಕಿಡಿಕಾರಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಪ್ರಿಯಾಂಕಾ ಅವರು, ನನಗೆ ನನ್ನದೇ ಆದ ಗುರ್ತಿಕೆ ಇದೆ. ನನ್ನ ಸಾಮಾಜಿಕ ಮಾಧ್ಯಮಗಳ ಖಾತೆಯ ಬಯೊದಲ್ಲಿ ಐಎಂಡಿಬಿ (ಸಿನಿಮಾ, ಟಿವಿ ಸರಣಿ ಮುಂತಾದ ಮನರಂಜನಾ ಕ್ಷೇತ್ರದ ಮಾಹಿತಿಯನ್ನೊಳಗೊಂಡ ಆನ್‌ಲೈನ್ ಡೇಟಾ ಬೇಸ್) ಲಿಂಕ್ ಶೇರ್ ಮಾಡಬೇಕೇ? ಇಂದಿಗೂ ಮಹಿಳೆಯರಿಗೆ ಏಕೆ ಹೀಗೆ ಆಗುತ್ತಿದೆ? ಈ ಬಗ್ಗೆ ವಿವರಣೆ ನೀಡಿ ಎಂದು ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ‘ ಗುಡ್ ಮಾರ್ನಿಂಗ್ ಅಮೆರಿಕ ಜೊತೆ ಮಾತನಾಡಿದ ನಿಕ್ ಜೋನಸ್ ಪತ್ನಿ, ‘ಮ್ಯಾಟ್ರಿಕ್ಸ್ ರಿಸರೆಕ್ಷನ್‌’ ಚಿತ್ರದ ಸಹ ನಟ ಕೀನು ರೀವ್ಸ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ’ಎಂದು ವರದಿ ಮಾಡಿರುವುದು ಕಂಡುಬಂದಿದೆ.

ಈ ವರದಿಯನ್ನು ಉಲ್ಲೇಖಿಸಿರುವ ಪ್ರಿಯಾಂಕಾ ಚೋಪ್ರಾ ಅವರು ‘ಅತ್ಯಂತ ಕುತೂಹಲಕಾರಿ ವಿಷಯವೇನೆಂದರೆ ನಾನು, ಸಾರ್ವಕಾಲಿಕ ಐಕಾನಿಕ್ ಫಿಲ್ಮ್ ಫ್ರಾಂಚೈಸಿಯನ್ನು ಪ್ರಮೋಟ್ ಮಾಡುತ್ತಿದ್ದೇನೆ. ಆದರೆ, ಈಗಲೂ ನನ್ನನ್ನು ವೈಫ್ ಆಫ್... ಎಂದೇ ಸಂಬೋಧಿಸಲಾಗುತ್ತಿದೆ’ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪೋಸ್ಟ್'ನ್ನು ಪತಿ ನಿಕ್ ಜೋನಸ್ ಖಾತೆಗೂ ಟ್ಯಾಗ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!