ಬಾಲಿವುಡ್

2022ರಲ್ಲಿ ಮೌನಿರಾಯ್ ಮದುವೆ ಫಿಕ್ಸ್? ಮದುವೆ ಗಂಡು ಯಾರು ಗೊತ್ತಾ?

Srinivasamurthy VN

ಮುಂಬೈ: ಕಿರುತೆರೆ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿ ಸ್ಚಾರ್ ಪಟ್ಟಕ್ಕೇರಿರುವ ಖ್ಯಾತ ನಟಿ ಮೌನಿರಾಯ್ ಇದೀಗ ತಮ್ಮ ಮದುವೆ ವಿಚಾರವಾಗಿ ಮತ್ತೆ ಸುದ್ದಿಗೆ ಬಂದಿದ್ದಾರೆ.

ಮೂಲಗಳ ಪ್ರಕಾರ ಮುಂದಿನ ವರ್ಷ ಜನವರಿಯಲ್ಲಿ ಅವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮೌನಿ ರಾಯ್ ವರಿಸಲಿದ್ದಾರೆ ಎನ್ನಲಾಗಿದೆ. 

ಈ ವಿಚಾರವನ್ನು ಮೌನಿ ಸಹೋದರ ವಿದ್ಯುತ್ ರಾಯ್ ಸರ್ಕಾರ್, ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ, ಮೌನಿ ಮಾತ್ರ ಈ ವಿಚಾರದಲ್ಲಿ ಮೌನ ಮುರಿದಿಲ್ಲ. 

ಸೂರಜ್‌ರನ್ನು ಮೌನಿ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದುಬೈನಲ್ಲಿಯೇ ಇದ್ದ ಮೌನಿ, ಸೂರಜ್ ಜೊತೆ ಓಡಾಡಿಕೊಂಡಿದ್ದರು. 

ಮೌನಿ ರಾಯ್ ಕೆಜಿಎಫ್ ಚಾಪ್ಟರ್1ರ ಹಿಂದಿ ಆವೃತ್ತಿಯಲ್ಲಿ 'ಗಲೀ ಗಲೀ' ಐಟಂ ನೃತ್ಯದಲ್ಲಿ ಕಾಣಿಸಿಕೊಂಡಿದ್ದರು. ಇದು ಬಾಲಿವುಡ್‌ನಲ್ಲಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು.
 

SCROLL FOR NEXT