ಹಿಮಾಂಶಿ ಖುರಾನಾ 
ಬಾಲಿವುಡ್

ಶೂಟಿಂಗ್ ವೇಳೆ ನಟಿ ಹಿಮಾಂಶಿ ಖುರಾನಾ ಮೂಗಿನಿಂದ ರಕ್ತಸ್ರಾವ: ರೊಮೇನಿಯಾದಲ್ಲಿ ಆಸ್ಪತ್ರೆಗೆ ದಾಖಲು

'ಬಿಗ್ ಬಾಸ್ 13' ಖ್ಯಾತಿಯ ಹಿಮಾಂಶಿ ಖುರಾನಾ ಅವರ ಮೂಗಿನಿಂದ ರಕ್ತಸ್ರಾವಾಗಿದ್ದು ಅಲ್ಲದೆ ತೀವ್ರ ಜ್ವರದಿಂದ ಬಳಲುತ್ತಿರುವ ಅವರನ್ನು ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದೆ. 

ನವದೆಹಲಿ: 'ಬಿಗ್ ಬಾಸ್ 13' ಖ್ಯಾತಿಯ ಹಿಮಾಂಶಿ ಖುರಾನಾ ಅವರ ಮೂಗಿನಿಂದ ರಕ್ತಸ್ರಾವಾಗಿದ್ದು ಅಲ್ಲದೆ ತೀವ್ರ ಜ್ವರದಿಂದ ಬಳಲುತ್ತಿರುವ ಅವರನ್ನು ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದೆ. 

ನಟಿ ತನ್ನ ಮುಂಬರುವ ಪಂಜಾಬಿ ಚಿತ್ರ 'ಫಟ್ಟೋ ದೇ ಯಾರ್ ಬಡೇ ನೆ' ಚಿತ್ರೀಕರಣದಲ್ಲಿದ್ದರು. 'ಜೀತ್ ಜಾಯೇಂಗೆ ಜಹಾನ್', 'ಸದ್ದಾ ಹಕ್', 'ಲೆದರ್ ಲೈಫ್', 'ಅಫ್ಸರ್' ಮತ್ತು ಇನ್ನೂ ಅನೇಕ ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ ಹಿಮಾಂಶಿ, ಚಿತ್ರದ ಸೀಕ್ವೆನ್ಸ್‌ಗಾಗಿ ಮಳೆಯ ಅಡಿಯಲ್ಲಿ ಚಿತ್ರೀಕರಣ ಮಾಡಬೇಕಾದರೆ ಅಸ್ವಸ್ಥರಾಗಿದ್ದಾರೆ.

ಹಿಮಾಂಶಿ ಅವರು ರೊಮೇನಿಯಾದಲ್ಲಿ ಮೈನಸ್ 7 ಡಿಗ್ರಿ ಸೆಲ್ಸಿಯಸ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಈ ಕಾರಣದಿಂದಾಗಿ ನಟಿಗೆ ತೀವ್ರ ಜ್ವರ ಕಾಣಿಸಿಕೊಂಡಿತು ಮತ್ತು ನಂತರ ಅವರ ಮೂಗಿನಿಂದ ರಕ್ತಸ್ರಾವವಾಗ ತೊಡಗಿತು. ಅನಾರೋಗ್ಯದ ಹೊರತಾಗಿಯೂ ಅವರು ಚಿತ್ರೀಕರಣವನ್ನು ಮುಂದುವರೆಸಿದ್ದು ನಂತರ ಆಸ್ಪತ್ರೆಗೆ ದಾಖಲಾದರು.

ಹಿಮಾಂಶಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ 'ಬಿಗ್ ಬಾಸ್ 13' ಮನೆಗೆ ಪ್ರವೇಶಿಸಿದ್ದರು. ಅವರು ಶಹನಾಜ್ ಗಿಲ್ ಅವರೊಂದಿಗೆ ಸಾಕಷ್ಟು ಜಗಳವಾಡಿದ್ದರು. ಬಿಗ್ ಬಾಸ್ ನಲ್ಲಿ ತನ್ನ ಸಹ-ಸ್ಪರ್ಧಿ ಅಸಿಮ್ ರಿಯಾಜ್ ಪ್ರೀತಿ ಪಾಶದಲ್ಲಿ ಬಿದ್ದಳು. ಇಬ್ಬರೂ ಮನೆಯೊಳಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಅವರ ಸಂಬಂಧ ಮುಂದುವರೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT